More

    ವಿರಾಟ್ ಕೊಹ್ಲಿ ಅತ್ಯುತ್ತಮ ಆಯ್ಕೆ, ಆರ್‌ಸಿಬಿ ಕಪ್​ ಗೆದ್ದೇ ಗೆಲ್ಲುತ್ತೆ: ವಿಜಯ್ ಮಲ್ಯ

    ಬೆಂಗಳೂರು: ಈ ವರ್ಷ ಐಪಿಎಲ್ ಗೆಲ್ಲುವ ಉತ್ತಮ ಅವಕಾಶ ಆರ್‌ಸಿಬಿಗೆ ಇದೆ ಎಂದು ಆರ್‌ಸಿಬಿಯ ಮಾಜಿ ಮಾಲೀಕ ವಿಜಯ್ ಮಲ್ಯ ಟ್ವೀಟ್ ಮಾಡಿದ್ದಾರೆ.

    ಇದನ್ನೂ ಓದಿ: ತಮಿಳುನಾಡಿನಲ್ಲಿ ಹೊಸ ಕೊರೊನಾ ವೈರಸ್ ಭೀತಿ..ಸರ್ಕಾರ ಹೇಳೋದೇನು?

    2008 ರಲ್ಲಿ ವಿರಾಟ್ ಕೊಹ್ಲಿಯನ್ನು ಖರೀದಿಸಿದಾಗ ಅದು ಉತ್ತಮ ನಿರ್ಧಾರ ಎಂದು ನನಗೆ ತಿಳಿದಿತ್ತು ಎಂದು ಮಲ್ಯ ಹೇಳಿದರು.

    ಐಪಿಎಲ್ 2024ರ ಎಲಿಮಿನೇಟರ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮುಖಾಮುಖಿಯಾಗಲಿದ್ದು, ಬುಧವಾರ (ಮೇ22) ಅಹಮದಾಬಾದ್​ನಲ್ಲಿ ನಡೆಯಲಿರುವ ಈ ಪಂದ್ಯವು ಉಭಯ ತಂಡಗಳಿಗೂ ನಿರ್ಣಾಯಕ. ಅಂದರೆ ಈ ಮ್ಯಾಚ್​ನಲ್ಲಿ ಸೋತ ತಂಡ ಐಪಿಎಲ್​ನಿಂದ ಹೊರಬೀಳಲಿದೆ.ಈ ಪಂದ್ಯಕ್ಕೂ ಮುನ್ನ ಆರ್​ಸಿಬಿ ತಂಡದ ಮಾಜಿ ಮಾಲೀಕ ವಿಜಯ ಮಲ್ಯ ತಂಡಕ್ಕೆ ಶುಭಕೋರಿ ಕಪ್ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    ಈ ಬಗ್ಗೆ ಎಕ್ಸ್​ನಲ್ಲಿ ಬರೆದುಕೊಂಡಿರುವ ವಿಜಯ ಮಲ್ಯ, ನಾನು ಆರ್​ಸಿಬಿ ಫ್ರಾಂಚೈಸಿಗೆ ಮತ್ತು ವಿರಾಟ್ ಕೊಹ್ಲಿಗಾಗಿ ಬಿಡ್ ಮಾಡಿದಾಗ ಇದಕ್ಕಿಂತ ಉತ್ತಮ ಆಯ್ಕೆಗಳಿಲ್ಲ ಎಂದು ನನ್ನ ಒಳ ಮನಸ್ಸು ಹೇಳುತ್ತಿತ್ತು. ಇದೀಗ ಅದೇ ಮನಸ್ಸು, ಆರ್​ಸಿಬಿ ತಂಡಕ್ಕೆ ಟ್ರೋಫಿ ಗೆಲ್ಲಲು ಉತ್ತಮ ಅವಕಾಶವಿದೆ ಎಂದು ಹೇಳ್ತಿದೆ. ಚಿಂತಿಸದೆ ಮುನ್ನುಗ್ಗಿ, ಬೆಸ್ಟ್ ಆಫ್ ಲಕ್ ಎಂದು ತಂಡಕ್ಕೆ ಶುಭ ಹಾರೈಸಿದ್ದಾರೆ.

    ಈ ಹಿಂದೆ ಸಿಎಸ್​ಕೆ ತಂಡವನ್ನು ಸೋಲಿಸಿ ಆರ್​ಸಿಬಿ ಪ್ಲೇಆಫ್ ಪ್ರವೇಶಿಸಿದಾಗ ಮಲ್ಯ ಅಭಿನಂದನೆ ಸಲ್ಲಿಸಿದ್ದರು. ಇದೇ ಹಾದಿಯಲ್ಲಿ ಮುನ್ನುಗ್ಗಿ.. ಟ್ರೋಫಿ ಗೆಲ್ಲುವುದೊಂದೇ ಬಾಕಿ ಎಂದು ಎಕ್ಸ್​​ನಲ್ಲಿ ಬರೆದುಕೊಂಡಿದ್ದರು.

    ರಾಯಲ್ ಚಾಲೆಂಜರ್ಸ್ ಸಂಸ್ಥಾಪಕರು ವಿಜಯ್ ಮಲ್ಯ. 2008 ರಲ್ಲಿ ಐಪಿಎಲ್​ ತಂಡಗಳ ಬಿಡ್ಡಿಂಗ್​ನಲ್ಲಿ ಅವರು 455 ಕೋಟಿ ರೂ.ಗೆ ತಂಡವನ್ನು ಖರೀದಿಸಿದ್ದರು. ಆದರೆ 2016 ರಲ್ಲಿ ಸಾಲದ ಸುಳಿಗೆ ಸಿಲುಕಿ ಮಲ್ಯ ಭಾರತದಿಂದ ಪಾಲಾಯನ ಮಾಡಿ ಈಗ ಇಂಗ್ಲೆಂಡ್​ನಲ್ಲಿ ನೆಲೆಸಿದ್ದಾರೆ. ಪ್ರಸ್ತುತ ಆರ್​​ಸಿಬಿ ಮಾಲೀಕತ್ವವು ಯುನೈಟೆಡ್ ಸ್ಪಿರಿಟ್ಸ್ ಕಂಪೆನಿಯ ಹೆಸರಿನಲ್ಲಿದ್ದರೂ, ಮಾಲಕತ್ವದ ಶೇ. 54.8 ರಷ್ಟು ಭಾಗ ಡಿಯಾಜಿಯೊ ಕಂಪೆನಿಯ ಅಧೀನದಲ್ಲಿದೆ.

    ಪ್ರಯಾಣಿಕರೊಂದಿಗೆ 7 ಗಂಟೆ ಕಾಲ ಕಳೆದ ಭಯೋತ್ಪಾದಕರು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts