More

    ಪ್ರಯಾಣಿಕರೊಂದಿಗೆ 7 ಗಂಟೆ ಕಾಲ ಕಳೆದ ಭಯೋತ್ಪಾದಕರು!

    ಚೆನ್ನೈ: ಶ್ರೀಲಂಕಾದ ನಾಲ್ವರು ಐಸಿಸ್ ಭಯೋತ್ಪಾದಕರು ಭಾನುವಾರ ಬೆಳಗ್ಗೆ 11 ಗಂಟೆಗೆ ಚೆನ್ನೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದು, ಏಳು ಗಂಟೆಗಳ ಕಾಲ ಅಲ್ಲಿಯೇ ತಂಗಿರುವುದು ತನಿಖೆಯಿಂದ ಬೆಳಕಿಗೆ ಬಂದ ನಂತರ ಭದ್ರತಾ ಅಧಿಕಾರಿಗಳು ಬೆಚ್ಚಿಬಿದ್ದಿದ್ದಾರೆ.

    ಇದನ್ನೂ ಓದಿ: ಅಬ್ಬಬ್ಬಾ ಈ ಫ್ಯಾನ್ಸಿ ನಂಬರ್​ ಖರೀದಿಗೆ ಲಕ್ಷ ಲಕ್ಷ ಹಣ..! 4 ಕಾರ್​ ಬರ್ತಿದ್ವು ಎಂದ್ರು ನೆಟಿಜನ್ಸ್​!​

    ನಾಲ್ವರು ಆರು ಗಂಟೆಗಳವರೆಗೆ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಗುಂಪಿನಲ್ಲಿ ಅಲೆದಾಡಿದರು. ಆ ನಂತರ ಸಂಜೆ ಆರು ಗಂಟೆಗೆ ಅಹಮದಾಬಾದ್‌ಗೆ ತೆರಳಲು ವಿಮಾನದಲ್ಲಿ ಹೊರಟಿದ್ದಾರೆ. ಈ ಮಾಹಿತಿ ಪಡೆದ ಗುಜರಾತ್ ಪೊಲೀಸರು ನಾಲ್ವರು ಉಗ್ರರನ್ನು ಬಂಧಿಸಿದ್ದಾರೆ.

    ಚೆನ್ನೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಭದ್ರತಾ ಪಡೆಯ ಅಧಿಕಾರಿಗಳು ಮತ್ತು ಪೊಲೀಸರು ಜಾಗರೂಕತೆಯಿಂದ ಕಾರ್ಯನಿರ್ವಹಿಸಿದ್ದರೆ, ನಾಲ್ವರನ್ನು ಬಂಧಿಸಬಹುದಿತ್ತು. ಭಯೋತ್ಪಾದಕರು ವಿಮಾನ ನಿಲ್ದಾಣದಲ್ಲಿ ಏಳು ಗಂಟೆಗಳ ಕಾಲ ಕಳೆದರೂ ಭದ್ರತಾ ಪಡೆಗಳ ಗಮನಕ್ಕೆ ಬಂದಿಲ್ಲ ಎಂದು ಹೇಳಲಾಗಿದ್ದು, ಅಲ್ಲಿ ಭದ್ರತೆಯ ಲೋಪವಿದೆ. ಸದ್ಯ ನಾಲ್ವರು ಉಗ್ರರನ್ನು ಬಂಧಿಸುವಲ್ಲಿ ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿ ವಿಫಲವಾಗಿರುವುದಕ್ಕೆ ಉನ್ನತ ಅಧಿಕಾರಿಗಳು ಅಳಲು ತೋಡಿಕೊಂಡಿದ್ದಾರೆ.

    ಇದೇ ವೇಳೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭದ್ರತಾ ವ್ಯವಸ್ಥೆಯಲ್ಲಿನ ಲೋಪದೋಷಗಳನ್ನು ಸರಿಪಡಿಸಲು ಕ್ರಮಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ತಮಿಳುನಾಡಿನಲ್ಲಿ ಹೊಸ ಕೊರೊನಾ ವೈರಸ್ ಭೀತಿ..ಸರ್ಕಾರ ಹೇಳೋದೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts