More

    ಎನ್​ಕೌಂಟರ್​ನಲ್ಲಿ ಸತ್ತ ವಿಕಾಸ್​ ದುಬೆಗೆ ಉತ್ತರ ಪ್ರದೇಶದಲ್ಲಿ ಇದೆಯಂತೆ 11 ಮನೆ, 16 ಫ್ಲ್ಯಾಟ್​

    ನವದೆಹಲಿ: ಉತ್ತರ ಪ್ರದೇಶ ಪೊಲೀಸರ ಎನ್​ಕೌಂಟರ್​ನಲ್ಲಿ ಇತ್ತೀಚೆಗೆ ಮೃತಪಟ್ಟ ಕುಖ್ಯಾತ ಪಾತಕಿ ವಿಕಾಸ್​ ದುಬೆ ಉತ್ತರ ಪ್ರದೇಶದಲ್ಲಿ ಬೇನಾಮಿಯಾಗಿ 11 ಮನೆ, 16 ಫ್ಲ್ಯಾಟ್​ಗಳನ್ನು ಹೊಂದಿದ್ದ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಆತನ ಬೇನಾಮಿ ಆಸ್ತಿಗಳು ಸೇರಿ ಎಲ್ಲ ಆಸ್ತಿಗಳ ವಿವರಗಳನ್ನು ಸಲ್ಲಿಸುವಂತೆ ಜಾರಿ ನಿರ್ದೇಶನಾಲಯ ಪೊಲೀಸರಲ್ಲಿ ಮನವಿ ಮಾಡಿಕೊಂಡಿದೆ.

    ಪೊಲೀಸ್​ ಮೂಲಗಳ ಪ್ರಕಾರ ದುಬೆ ತನ್ನ ಸಹಚರರ ನೆರವಿನಿಂದ ಯುಎಇ ಮತ್ತು ಥಾಯ್ಲೆಂಡ್​ನಲ್ಲಿ ಪೆಂಟ್​ ಹೌಸ್​ಗಳನ್ನು​ ಖರೀದಿಸಿದ್ದ. ಅಲ್ಲದೆ ಕಳೆದ ಮೂರು ವರ್ಷಗಳಲ್ಲಿ ಆತ 14 ರಾಷ್ಟ್ರಗಳಿಗೆ ಪ್ರವಾಸ ಕೈಗೊಂಡಿದ್ದ. ಸಾಯುವ ಕೆಲವೇ ದಿನಗಳ ಮೊದಲು ಲಖನೌನ ಆರ್ಯನಗರದಲ್ಲಿ 23 ಕೋಟಿ ರೂ.ಗೂ ಅಧಿಕ ಮೌಲ್ಯದ ಬಂಗಲೆಯನ್ನು ಖರೀದಿಸಿದ್ದ. ಈ ಎಲ್ಲ ಆಸ್ತಿಗಳ ಬಗ್ಗೆ ಜಾರಿ ನಿರ್ದೇಶನಾಲಯ ತನಿಖೆ ಆರಂಭಿಸಿರುವುದಾಗಿ ಪೊಲೀಸ್​ ಮೂಲಗಳು ತಿಳಿಸಿವೆ.

    ಇದನ್ನೂ ಓದಿ: VIDEO: ಮಧ್ಯ ರಸ್ತೆಯಲ್ಲಿ ಭರ್ಜರಿ ಬರ್ತ್​ ಡೇ ಪಾರ್ಟಿ; ಖಡ್ಗದಲ್ಲಿ ಕೇಕ್​ ಕತ್ತರಿಸಿದ ಬಿಜೆಪಿ ಮುಖಂಡ

    ಜುಲೈ 7ರಂದು ಕಾನ್ಪುರ ಪೊಲಿಸರಿಗೆ ಪತ್ರ ಬರೆದಿರುವ ಜಾರಿ ನಿರ್ದೇಶನಾಲಯ, ದುಬೆ ತನ್ನ ಹೆಸರಿನಲ್ಲಿ, ಕುಟುಂಬದವರ ಹೆಸರಿನಲ್ಲಿ ಹಾಗೂ ಬೇನಾಮಿಯಾಗಿ ಮಾಡಿರುವ ಆಸ್ತಿಗಳ ವಿವರಗಳನ್ನು ಹಾಗೂ ಆತನ ಕುಟುಂಬ ವರ್ಗದವರು ಮತ್ತು ಸಹಚರರ ಮಾಹಿತಿಯನ್ನು ನಗದು ಅಕ್ರಮ ವ್ಯವಹಾರ ಕಾಯ್ದೆ, 2002ರ ಪ್ರಕಾರ ಸಂಗ್ರಹಿಸಿ ಸಲ್ಲಿಸುವಂತೆ ಸೂಚಿಸಿದ್ದಾರೆ. ಜತೆಗೆ ದುಬೆ ವಿರುದ್ಧ ದಾಖಲಾಗಿದ್ದ ಎಲ್ಲ ಕ್ರಿಮಿನಲ್​ ಪ್ರಕರಣಗಳ ವಿವರಗಳನ್ನೂ ಸಲ್ಲಿಸುವಂತೆ ಹೇಳಿದ್ದಾರೆ.

    ದುಬೆ ಕೆಲವು ಪ್ರಭಾವಿ ವಾಣಿಜ್ಯೋದ್ಯಮಿಗಳ ಪರವಾಗಿ ನಗದು ಅಕ್ರಮ ವ್ಯವಹಾರ ನಡೆಸಿರುವ ಶಂಕೆಯೂ ಇದೆ. ಈ ಬಗ್ಗೆಯೂ ತನಿಖೆ ನಡೆಸಲಾಗುವುದು ಎಂದು ಗುಪ್ತಚರ ವಿಭಾಗದ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

    ಟರ್ಕಿ ವಿರುದ್ಧ ತಿರುಗಿ ಬಿದ್ದ ವಿಶ್ವ ಕ್ರೈಸ್ತ ಸಮುದಾಯ; ಮಸೀದಿಯಾಗಿ ಮಾರ್ಪಟ್ಟ ಸರ್ವಜನಾಂಗದ ತಾಣ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts