More

    ಸಹೋದರಿಯಂತೆ ವಿಕಾಸ್​ ದುಬೆಗೆ ತಪ್ಪದೆ ರಾಖಿ ಕಟ್ಟುತ್ತಿದ್ದ ಮಾಜಿ ಶಾಸಕ

    ಲಖನೌ: ಎನ್​ಕೌಂಟರ್​ನಲ್ಲಿ ಹತನಾಗಿರುವ ಕುಖ್ಯಾತ ಪಾತಕಿ ವಿಕಾಸ್​ ದುಬೆಗೆ ರಾಜಕೀಯ ಸಖ್ಯ ತುಂಬಾ ಬಲವಾಗಿತ್ತು. ಜನಪ್ರತಿನಿಧಿಯಾಗಿ ಆಯ್ಕೆಯಾದರೂ ಶಾಸಕರು ಮತ್ತು ಸಂಸದರು, ಸ್ಥಳೀಯ ರಾಜಕಾರಣಿಗಳು ಎಲ್ಲರೂ ದುಬೆಗಾಗಿ ಕೆಲಸ ಮಾಡುತ್ತಿದ್ದರು. ಎಲ್ಲಕ್ಕಿಂತ ಮಿಗಿಲಾಗಿ ಕಾನ್ಪುರದ ಬಿಕ್ರು ಗ್ರಾಮವನ್ನು ಒಳಗೊಂಡಿದ್ದ ಕ್ಷೇತ್ರದ ಮಾಜಿ ಶಾಸಕರೊಬ್ಬರು ರಕ್ಷಾ ಬಂಧನದ ದಿನ ಸಹೋದರಿಯಂತೆ ವಿಕಾಸ್​ ದುಬೆ ಮನೆಗೆ ಹೋಗಿ ಆತನಿಗೆ  ರಾಖಿ ಕಟ್ಟುತ್ತಿದ್ದರಂತೆ!

    ಬಿಕ್ರು ಗ್ರಾಮದ ನಿವಾಸಿಗಳು ಅದರಲ್ಲೂ ವಿಶೇಷವಾಗಿ ವಿಕಾಸ್​ ದುಬೆಯ ನೆರೆಹೊರೆಯವರು ಹೇಳಿರುವ ಮಾತಿದು. ಈತನ ದೌರ್ಜನ್ಯಗಳನ್ನು ಸಹಿಸಲಾಗದೆ, ಅಂದಿನ ಮುಖ್ಯಮಂತ್ರಿಯೊಬ್ಬರಿಗೆ ಈತನ ವಿರುದ್ಧ ಲಿಖಿತ ದೂರು ನೀಡಿದ್ದೆವು. ಆದರೂ ಏನೂ ಆಗಲಿಲ್ಲ ಎಂದು ಹೇಳಿದ್ದಾರೆ.
    ಒಂದರ್ಥದಲ್ಲಿ ಇವತ್ತು ನಮಗೆ ಹಬ್ಬ. ಯಾವುದೇ ಉತ್ಸವಕ್ಕಿಂತಲೂ ಕಡಿಮೆಯಿಲ್ಲ. ಏಕೆಂದರೆ, ನಮ್ಮ ತಂದೆ, ತಾತಂದಿರು ಮತ್ತು ನಮ್ಮ ಮೇಲೆ ದೌರ್ಜನ್ಯ ಎಸಗುತ್ತಿದ್ದ ವಿಕಾಸ್​ ದುಬೆ ಖಲಾಸ್​ ಆಗಿದ್ದಾನೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

    ಇದನ್ನೂ ಓದಿ: ಸ್ನೇಹಿತನ ಸಾರೀ ಡಾನ್ಸ್ ವಿಡಿಯೋ : ತಾರಕಕ್ಕೇರಿದ ವಾಗ್ವಾದ ಕೊಲೆಯಲ್ಲಿ ಅಂತ್ಯ

    ವಿಕಾಸ್​ ದುಬೆಯ ದೌರ್ಜನ್ಯಗಳ ಬಗ್ಗೆ ವಿವರ ನೀಡಿರುವ ಅವರು, ದುಬೆ ಅಥವಾ ಆತನ ಸಹಚರರು ಯಾರಾದರೂ ರಸ್ತೆಯಲ್ಲಿ ಹೋಗುತ್ತಿದ್ದರೆ, ಅವರನ್ನು ಕಂಡ ನಾವು ಕೈಮುಗಿದು, ತಲೆಬಾಗಿಸಿ ನಿಲ್ಲಬೇಕಿತ್ತು. ಇಲ್ಲವಾದಲ್ಲಿ ನಮ್ಮನ್ನು ಚೆನ್ನಾಗಿ ಥಳಿಸಲಾಗುತ್ತಿತ್ತು. ಈ ರೀತಿಯಾಗಿ ನಾವು ಸದಾ ದುಬೆಯ ಆತಂಕದಲ್ಲೇ ಬದುಕು ಸವೆಸುತ್ತಿದ್ದೆವು. ಆದರೆ, ಈಗ ಆತ ಎನ್​ಕೌಂಟರ್​ನಲ್ಲಿ ಸತ್ತಿದ್ದಾನೆ. ಪೀಡೆ ತೊಲಗಿತು. ಇದಕ್ಕಿಂತ ಸಂತಸದ ವಿಷಯ ಮತ್ತೊಂದಿಲ್ಲ ಎಂದು ಬಿಕ್ರು ಗ್ರಾಮದ ಇತರರು ತಿಳಿಸಿದ್ದಾರೆ.

    ಮಧ್ಯಪ್ರದೇಶದ ಮಹಾಕಾಲ ದೇವಸ್ಥಾನದ ಬಳಿ ಗುರುವಾರ ಸಿಕ್ಕಿಬಿದ್ದಿದ್ದ ಮಹಾಪಾತಕಿ ವಿಕಾಸ್​ ದುಬೆಯನ್ನು ಕಾನ್ಪುರಕ್ಕೆ ಕರೆತರುತ್ತಿದ್ದಾಗ ಆತನಿದ್ದ ವಾಹನ ಉರುಳಿಬಿದ್ದಿತು. ಸಂದರ್ಭ ಬಳಸಿಕೊಂಡು ಆತ ಪರಾರಿಯಾಗಲು ಯತ್ನಿಸಿದಾಗ ಪೊಲೀಸರು ಗುಂಡಿಟ್ಟು ಆತನನ್ನು ಹತ್ಯೆ ಮಾಡಿದರು.

    ಆ ಗ್ರಾಮದಲ್ಲಿ ನಡೆದಿತ್ತು 3 ಗೌರವ ಹತ್ಯೆ, ಆರೋಪಿ ಸಿಕ್ಕಿಬಿದ್ದಿದ್ದು ಹೇಗೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts