More

    ಜನಸಾಮಾನ್ಯರ ಸಾಹಿತ್ಯವೇ ಜಾನಪದ

    ವಿಜಯಪುರ: ಇಂದಿನ ತಾಂತ್ರಿಕ ಜಗತ್ತಿನಲ್ಲಿ ಗ್ರಾಮೀಣ ಜಾನಪದ ಕಲೆಗಳು ಅಳಿದು ಹೋಗುತ್ತಿದ್ದು, ಅವುಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಜಾನಪದ ಪರಿಷತ್ ಶ್ರಮಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದು ರಾಜ್ಯ ಬೀಜ ಮತ್ತು ಸಾವಯವ ಪ್ರಮಾಣ ಸಂಸ್ಥೆ ಅಧ್ಯಕ್ಷ ವಿಜುಗೌಡ ಎಸ್. ಪಾಟೀಲ ಹೇಳಿದರು.

    ಬಬಲೇಶ್ವರ ತಾಲೂಕಿನ ಮಮದಾಪುರದ ಸಿದ್ಧರಾಮೇಶ್ವರ ದೇವಸ್ಥಾನ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಮಮದಾಪುರ ಜಾನಪದ ಪರಿಷತ್ ವಲಯ ಘಟಕದ ಉದ್ಘಾಟನೆ, ಪದಗ್ರಹಣ ಮತ್ತು ಕಲಾಪ್ರದರ್ಶನವನ್ನು ಡೊಳ್ಳು ಬಾರಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

    ಜಾನಪದ ಎಲ್ಲ ಸಾಹಿತ್ಯಗಳ ತಾಯಿ. ಜನಸಾಮಾನ್ಯರಿಂದ ಜನ್ಮ ತಾಳಿದ ಜಾನಪದ ಸಾಹಿತ್ಯವನ್ನು ಪ್ರೋತ್ಸಾಹಿಸಿ ಮುಂದಿನ ಪೀಳಿಗೆಗೆ ತಲುಪಿಸುವ ಕಾರ್ಯ ನಾವೆಲ್ಲರೂ ಮಾಡಬೇಕೆಂದರು.

    ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಬಾಳನಗೌಡ ಎಸ್. ಪಾಟೀಲ(ಪಡಗಾನೂರ) ಮಾತನಾಡಿ, ಜಾನಪದ ಮಾನವನ ಹುಟ್ಟಿನಿಂದ ಬಂದ ಸಂಸ್ಕೃತಿ. ಪಾಶ್ಚಾತ್ಯ ಸಂಸ್ಕೃತಿಯಿಂದ ಜಾನಪದ ಕಲೆಗಳು ಮರೆಮಾಚುತ್ತಿವೆ. ಅವುಗಳನ್ನು ಜಿಲ್ಲೆಯ ಪ್ರತಿ ಹಳ್ಳಿಗಳಲ್ಲಿ ಉಳಿಸಿ ಬೆಳೆಸೋಣ ಎಂದರು.

    ಮಮದಾಪುರ ಜಿಪಂ ಸದಸ್ಯ ಕಲ್ಲಪ್ಪ ಕೊಡಬಾಗಿ, ಯುವ ಧುರೀಣ ಗುರನಗೌಡ ಅಂಗಡಿ, ಸದಾಶಿವಯ್ಯ ಕಾಖಂಡಕಿಮಠ, ಗೊಳಪ್ಪ ಯರನಾಳ ಮಾತನಾಡಿದರು.

    ಹಿರಿಯ ಕಲಾವಿದರಾದ ಸಿದ್ದಲಿಂಗಯ್ಯ ಹಂಚಿನಾಳಮಠ, ಡಾ. ಎಂ.ಎಸ್. ಹಿರೇಮಠ, ಶಿವಾನಂದ ಬಡಿಗೇರ, ಎಚ್. ಗುರುರಾಜ, ವಿದ್ಯಾನಂದಯ್ಯಾ ಹಂಚಿನಾಳಮಠ, ನಾಗಯ್ಯ ಹಿರೇಮಠ, ಮಲ್ಲಪ್ಪ ಗಲಗಲಿ, ಭೀಮಪ್ಪ ಬಡಿಗೇರ, ನಾಗಪ್ಪ ಭಜಂತ್ರಿ, ಶಂಕರ ಹೂಗಾರ, ಭಗವಂತ ಬೆಳ್ಳನ್ನವರ ಅವರನ್ನು ಸನ್ಮಾನಿಸಲಾಯಿತು.

    ಬಬಲೇಶ್ವರ ಡಾ. ಮಹಾದೇವ ಶಿವಾಚಾರ್ಯರು, ಮಮದಾಪುರ ವಿರಕ್ತಮಠದ ಅಭಿನವ ಮುರಘೇಂದ್ರ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು.

    ಜಗದೀಶ ಸಾಲಳ್ಳಿ, ಮಾಬೂಬ್ಬಿ ಕೀಜಿ, ಈರಪ್ಪ ಶಿಂತ್ರಿ, ಈರಣ್ಣ ಹೊಸಟ್ಟಿ, ಜಿ.ಎಂ. ಹಳ್ಳೂರ, ಮೌಲಾಸಾಬ ಜಾಗೀರದಾರ, ಗಂಗವ್ವ ಶಿಂಧೆ, ಮಲ್ಲಿಕಾರ್ಜುನ ಗಂಗೂರ ಉಪಸ್ಥಿತರಿದ್ದರು.

    ಡೊಳ್ಳು ಕುಣಿತ, ವೀರಗಾಸೆ, ಗೊಂದಳಿಪದ, ಹಂತಿಪದ, ಗೊಂಬೆ ಕುಣಿತ, ಚೌಡಕಿಪದ ಭಜನಾ, ಶಹನಾಯಿ ಹೋಳಿಪದ ಸೇರಿ 15 ಕ್ಕೂ ಹೆಚ್ಚು ಜಾನಪದ ಕಲಾ ತಂಡಗಳು ಕಲಾ ಪ್ರದರ್ಶನಗೈದವು. ಸುರೇಶ ಕರಿಕಲ್ಲ ಸ್ವಾಗತಿಸಿದರು. ಚಂದ್ರಶೇಖರ ಅವಟಿ ನಿರೂಪಿಸಿದರು. ಆನಂದ ನಾಯಕ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts