More

    ಮಾರುತೇಶ್ವರ ಜಾತ್ರಾ ಮಹೋತ್ಸವ

    ಹಡಗಲಿ: ವಿಜಯಪುರ ತಾಲೂಕಿನ ಸುಕ್ಷೇತ್ರ ಹಡಗಲಿ ಗ್ರಾಮದಲ್ಲಿ ಮಾರುತೇಶ್ವರ ಜಾತ್ರಾ ಮಹೋತ್ಸವ ನಿಮಿತ್ತ ಏ.22, 23 ಹಾಗೂ 24 ರಂದು ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಯಲಿವೆ.

    ಏ.22, 23 ರಂದು ಮಾರುತೇಶ್ವರ ಮೂರ್ತಿಗೆ ಅಭಿಷೇಕ ಹಾಗೂ ಸಂಜೆ ಸಂಜೆ 7.30 ರಿಂದ ಮುಗುಳಖೋಡದ ಯಲ್ಲಾಲಿಂಗ ಮಹಾರಾಜರ ಪುರಾಣ, ಅನ್ನದಾಸೋಹ ನಡೆಯಲಿದೆ. ಏ.22 ರಂದು ಸಂಜೆ 6.30 ಗಂಟೆಗೆ ಪಲ್ಲಕ್ಕಿ, ಕಲಶ, ಮಾರುತೇಶ್ವರರ ಪಾದುಕೆ ಮೆರವಣಿಗೆ ನಡೆಯವುದು. ಏ.23 ರಂದು ಬೆಳಗ್ಗೆ 5 ಗಂಟೆಗೆ ಮುತ್ತೈದೆಯರಿಂದ ಮಾರುತೇಶ್ವರರ ತೊಟ್ಟಿಲು ಕಾರ್ಯಕ್ರಮ, ಅಭಿಷೇಕ, ವೀಳ್ಯದೆಲೆ ಪೂಜೆ ಜರುಗುವುದು.

    ಬೆಳಗ್ಗೆ 8 ಗಂಟೆಗೆ ಹೊಂಡ ತುಂಬುವುದು, ಮುತ್ತೈದೆಯರಿಂದ ಕುಂಭಮೇಳ ಹಾಗೂ ಪಲ್ಲಕ್ಕಿ ಸೇವೆ, ಸಾರವಾಡದ ಜೈ ಹನುಮಾನ ಗೊಂಬೆ ಕುಣಿತ ತಂಡದವರಿಂದ ಕಲಾ ಸೇವೆ ನಡೆಯುವುದು, ಮಧ್ಯಾಹ್ನ 12 ಗಂಟೆಗೆ ನೈವೇದ್ಯ ಹಾಗೂ ಭಕ್ತರಿಂದ ದೀಡ ನಮಸ್ಕಾರ ಕಾರ್ಯಕ್ರಮ ಜರುಗುವುದು. ಸಂಜೆ 4 ಗಂಟೆಗೆ ಮಾರುತೇಶ್ವರ ಮೈದಾನದಲ್ಲಿ ಹಾಲೋಕಳಿ ನಡೆಯಲಿದ್ದು, ವಿಜೇತರಿಗೆ ಬಹುಮಾನದೊಂದಿಗೆ ಸತ್ಕರಿಸಲಾಗುವುದು.

    ರಾತ್ರಿ 10.30 ಗಂಟೆಗೆ ಮಾರುತೇಶ್ವರ ಗುಡಿ ಹತ್ತಿರದ ಮಾರುತೇಶ್ವರ ಭವ್ಯ ರಂಗ ಮಂದಿರದಲ್ಲಿ ಬಸವನಬಾಗೇವಾಡಿಯ ಜಗಜ್ಯೋತಿ ಬಸವೇಶ್ವರ ನಾಟ್ಯ ಸಂಘದಿಂದ ಗೌಡ ಮೆಚ್ಚಿದ ಹುಡಗಿ ಎಂಬ ಸುಂದರ ಸಾಮಾಜಿಕ, ಹಾಸ್ಯಭರಿತ ನಾಟಕ ನಡೆಯಲಿದೆ.

    ಏ.24 ರಂದು ಬೆಳಗ್ಗೆ 9 ಗಂಟೆಗೆ ಬಾಜಾ ಭಜಂತ್ರಿಯೊಂದಿಗೆ ಶೇಷಗಿರಿರಾವ ಕುಲಕರ್ಣಿ ಅವರಿಂದ ಮೊಸರು ಗಡಿಗೆ ಒಡೆಯುವ ಕಾರ್ಯಕ್ರಮ ಜರಗುವುದು, ಬೆಳಗ್ಗೆ 11 ಗಂಟೆಗೆ ಜಾತ್ರಾ ಕಮಿಟಿ ಸಹಯೋಗದೊಂದಿಗೆ ಪ್ರಸಿದ್ಧ ಪೈಲವಾನರಿಂದ ಭಾರ ಎತ್ತುವ ಸ್ಪರ್ಧೆ, ಮಧ್ಯಾಹ್ನ 3.30 ಗಂಟೆಗೆ ಜಂಗಿ ಕುಸ್ತಿ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts