More

    ವಿಜಯಾನಂದ: ಮೋಷನ್ ಪೋಸ್ಟರ್ ಟೀಸರ್ ಬಿಡುಗಡೆ

    ವಿಆರ್​ಎಲ್ ಸಂಸ್ಥೆಯ ಚೇರ್ಮನ್, ಪದ್ಮಶ್ರೀ ಪುರಸ್ಕ್ರತ ಡಾ. ವಿಜಯ ಸಂಕೇಶ್ವರ ಅವರ ಬಯೋಪಿಕ್ ನಿರ್ಮಾಣವಾಗುತ್ತಿದೆ ಎಂದಾಗಲೇ ಕುತೂಹಲಗಳು ಗರಿಗೆದರಿದ್ದವು. ಅದರಂತೆ ಅವರ ಹುಟ್ಟುಹಬ್ಬದ ಪ್ರಯುಕ್ತ ‘ವಿಜಯಾನಂದ’ ಚಿತ್ರದ ಫಸ್ಟ್​ಲುಕ್ ಬಿಡುಗಡೆ ಆಗಿ ಮೆಚ್ಚುಗೆ ಪಡೆದಿತ್ತು. ಇದೀಗ ಯೂಟ್ಯೂಬ್​ನ ದಿಗ್ವಿಜಯ ಚಾನಲ್​ನಲ್ಲಿ ಚಿತ್ರದ ಮೋಷನ್ ಪೋಸ್ಟರ್ ಟೀಸರ್ ಬಿಡುಗಡೆಯಾಗಿದ್ದು, ಮತ್ತಷ್ಟು ನಿರೀಕ್ಷೆ ಹೆಚ್ಚಿಸಿದೆ. ಲಾಜಿಸ್ಟಿಕ್ ಮತ್ತು ಮಾಧ್ಯಮ ಲೋಕದಲ್ಲಿ ಮುಂಚೂಣಿಯಲ್ಲಿರುವ ವಿಆರ್​ಎಲ್ ಸಂಸ್ಥೆ, ವಿಆರ್​ಎಲ್ ಫಿಲಂ ಪ್ರೊಡಕ್ಷನ್ಸ್ ನಿರ್ಮಾಣ ಸಂಸ್ಥೆಯಡಿ ಚಿತ್ರ ನಿರ್ಮಾಣಕ್ಕೆ ಇಳಿದಿದೆ. ಚೊಚ್ಚಲ ಚಿತ್ರವಾಗಿ ‘ವಿಜಯಾನಂದ’ ಸಿನಿಮಾ ಸಿದ್ಧವಾಗುತ್ತಿದ್ದು, ಸಂಸ್ಥೆಯ ಎಂಡಿ ಆನಂದ ಸಂಕೇಶ್ವರ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ.

    ಕನ್ನಡದ ನಂ1 ದಿನಪತ್ರಿಕೆ ‘ವಿಜಯವಾಣಿ’ ಮತ್ತು ಜನಪ್ರಿಯ ಸುದ್ದಿವಾಹಿನಿ ‘ದಿಗ್ವಿಜಯ’ ಮೂಲಕ ಮಾಧ್ಯಮ ರಂಗದಲ್ಲಿ ವಿಶಿಷ್ಟ ಛಾಪು ಮೂಡಿಸಿರುವ ಆನಂದ ಸಂಕೇಶ್ವರ ಅವರು ಚಿತ್ರ ನಿರ್ವಣದ ಮೂಲಕ ಹೊಸ ಸಾಹಸಕ್ಕೆ ಕೈ ಹಾಕಿರುವುದು ವಿಶೇಷ. ‘ಟ್ರಂಕ್’ ಸಿನಿಮಾ ಖ್ಯಾತಿಯ ರಿಶಿಕಾ ಶರ್ಮ ನಿರ್ದೇಶನ ಮಾಡುತ್ತಿರುವ ಎರಡನೇ ಚಿತ್ರವಿದು. ಕನ್ನಡದಲ್ಲಿ ಈಗಾಗಲೇ ಹಲವು ಸಿನಿಮಾಗಳಲ್ಲಿ ನಟಿಸಿ ಮನೆ ಮಾತಾಗಿರುವ ನಿಹಾಲ್ ರಜಪೂತ್, ತೆರೆಮೇಲೆ ವಿಜಯ ಸಂಕೇಶ್ವರ ಆಗಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದ ಬಗ್ಗೆ ಮಾಹಿತಿ ನೀಡುವ ನಿರ್ದೇಶಕಿ ರಿಶಿಕಾ, ‘ಚಿತ್ರೀಕರಣ ಪೂರ್ವ ಕೆಲಸಗಳು ಬಹುತೇಕ ಮುಕ್ತಾಯವಾಗಿವೆ. ಪಾತ್ರವರ್ಗದ ಆಯ್ಕೆಯೂ ನಡೆಯುತ್ತಿದೆ.

    ವಿಜಯಾನಂದ: ಮೋಷನ್ ಪೋಸ್ಟರ್ ಟೀಸರ್ ಬಿಡುಗಡೆ
    ವಿಜಯ ಸಂಕೇಶ್ವರ, ಆನಂದ ಸಂಕೇಶ್ವರ

    ಇತ್ತೀಚೆಗೆ ಕರೆದ ಆಡಿಷನ್​ಗೆ ಅಭೂತಪೂರ್ವ ಸ್ಪಂದನೆ ಸಿಕ್ಕಿದೆ. ಮೂರು ಸಾವಿರಕ್ಕೂ ಅಧಿಕ ಕರೆಗಳು, ಸಂದೇಶಗಳು ಬಂದಿವೆ. ಬೆಂಗಳೂರು ಮತ್ತು ಹುಬ್ಬಳ್ಳಿಯಲ್ಲಿ ಆಡಿಷನ್ ಆಯ್ಕೆ ಅಂತಿಮವಾಗಲಿದೆ. ಬಳಿಕ ಸೆಪ್ಟೆಂಬರ್​ನಿಂದ ಚಿತ್ರೀಕರಣಕ್ಕೆ ಚಾಲನೆ ನೀಡಲಿದ್ದೇವೆ. ಹುಬ್ಬಳ್ಳಿ ಸೇರಿ ಉತ್ತರ ಕರ್ನಾಟಕ ಭಾಗ ಮತ್ತು ಹೈದರಾಬಾದ್​ನ ರಾಮೋಜಿ ರಾವ್ ಫಿಲಂ ಸಿಟಿಯಲ್ಲಿ ಚಿತ್ರೀಕರಣ ನಡೆಯಲಿದೆ. 2022ರಲ್ಲಿ ಚಿತ್ರ ತೆರೆಗೆ ಬರಲಿದೆ’ ಎನ್ನುತ್ತಾರೆ ರಿಶಿಕಾ. ಮಲಯಾಳಂ ಚಿತ್ರರಂಗದ ಜನಪ್ರಿಯ ಸಂಗೀತ ನಿರ್ದೇಶಕ ಗೋಪಿ ಸುಂದರ್ ಈ ಚಿತ್ರದ ಸಂಗೀತ ಮತ್ತು ಹಿನ್ನೆಲೆ ಸಂಗೀತದ ಜವಾಬ್ದಾರಿ ಹೊತ್ತಿದ್ದಾರೆ. ಕೀರ್ತನ್ ಪೂಜಾರಿ ಛಾಯಾಗ್ರಹಣ ಈ ಚಿತ್ರಕ್ಕಿದೆ.

    ವಿಜಯಾನಂದ: ಮೋಷನ್ ಪೋಸ್ಟರ್ ಟೀಸರ್ ಬಿಡುಗಡೆ
    ನಿರ್ದೇಶಕಿ ರಿಷಿಕಾ

    ಮೋಷನ್ ಟೀಸರ್​ನಲ್ಲೇನಿದೆ…

    ಕೇವಲ ಒಂದು ಲಾರಿಯಿಂದ ವಿಆರ್​ಎಲ್​ನ ಪ್ರಯಾಣ ಶುರುವಾಗಿತ್ತು. ಇದೀಗ ಬಿಡುಗಡೆ ಆಗಿರುವ ಮೋಷನ್ ಪೋಸ್ಟರ್ ಟೀಸರ್​ನಲ್ಲಿಯೂ ನಿರ್ದೇಶಕಿ ರಿಶಿಕಾ ಅದೇ ಕಾನ್ಸೆಪ್ಟ್ ಆಯ್ದುಕೊಂಡಿದ್ದಾರೆ. ‘ವಿಜಯ ಸಂಕೇಶ್ವರ ಅವರ ಆರಂಭದ ದಿನಗಳು ಮತ್ತು ಆ ದುರ್ಗಮ ಹಾದಿಯ ಪ್ರಯಾಣ ಹೇಗಿತ್ತು ಎಂಬುದನ್ನು ಟೀಸರ್ ಮೂಲಕ ತೋರಿಸುವ ಉದ್ದೇಶದಿಂದ ಈ ಮೋಷನ್ ಪೋಸ್ಟರ್ ಬಿಡುಗಡೆ ಮಾಡಿದ್ದೇವೆ. 1970ರಲ್ಲಿ ಒಂದೇ ಲಾರಿಯಿಂದ ಆರಂಭವಾದ ಅವರ ಸಾಹಸಗಾಥೆ ಇದೀಗ ಇಡೀ ದೇಶದ ತುಂಬೆಲ್ಲ ಆವರಿಸಿದೆ. ಆ ಸುದೀರ್ಘ ಜರ್ನಿಯಲ್ಲಿ ಸಾಕಷ್ಟು ಏರಿಳಿತಗಳಿವೆ. ಇದೆಲ್ಲವನ್ನು ಕಮರ್ಷಿಯಲ್ ಕೋನದಲ್ಲಿ ಸೆರೆಹಿಡಿದು, ಭಾವನೆಗಳ ಮಿಶ್ರಣ ಮಾಡಿ ಒಂದು ಅಚ್ಚುಕಟ್ಟು ಬಯೋಪಿಕ್ ತಯಾರಾಗುವ ಕೆಲಸ ಶುರುವಾಗಿದೆ. ಹೈದರಾಬಾದ್​ನಲ್ಲಿ ಚಿತ್ರದ ಶೂಟಿಂಗ್ ಸಲುವಾಗಿ ವಿಶೇಷ ಸೆಟ್​ಗಳನ್ನು ನಿರ್ಮಾಣ ಮಾಡುವ ಕೆಲಸ ನಡೆದಿದೆ. 70-80ರ ಕಾಲಘಟ್ಟವನ್ನು ಮರು ಸೃಷ್ಟಿಸಲಾಗುತ್ತಿದೆ’ ಎಂಬುದು ರಿಶಿಕಾ ಮಾತು.

    ಮತ್ತೆ ಎದುರಾಯ್ತು ಹಬ್ಬಗಳಿಗೂ ನಿರ್ಬಂಧ; ಮನೆ-ದೇವಸ್ಥಾನಗಳ ಒಳಗಷ್ಟೇ ಹಬ್ಬ ಆಚರಿಸಿ ಎಂದು ಆದೇಶಿಸಿದ ಸರ್ಕಾರ

    ಭಾರತದಲ್ಲಿ ಪ್ರತಿನಿತ್ಯ 1,157 ಮಹಿಳೆಯರು ನಾಪತ್ತೆ!; ದೇಶದಲ್ಲಿ ಹೆಚ್ಚಾಗಿದೆ ಸ್ತ್ರೀಯರ ಮಿಸ್ಸಿಂಗ್​ ಕೇಸ್​..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts