More

    VIDEO| ಗೋಲ್ಡನ್ ಏರೋಸ್ ಸೇರ್ಪಡೆಯನ್ನು ಭಾರತೀಯ ವಾಯುಪಡೆ ಸಂಭ್ರಮಿಸಿದ್ದು ಹೀಗೆ…

    ಅಂಬಾಲ: ಭಾರತೀಯ ವಾಯುಪಡೆಗೆ ಇಂದು ಔಪಚಾರಿಕವಾಗಿ ಸೇರ್ಪಡೆಗೊಂಡ ಐದು ರಪೇಲ್ ಫೈಟರ್​ ಜೆಟ್​ಗಳ ಮೊದಲ ಬ್ಯಾಚ್ ಭಾರತಕ್ಕೆ ಜುಲೈ 29ರಂದೇ ಆಗಮಿಸಿತ್ತು. ಭಾರತ ಮತ್ತು ಫ್ರಾನ್ಸ್ ನಡುವೆ 36 ರಫೇಲ್ ಫೈಟರ್​ ಜೆಟ್​ ಖರೀದಿಗೆ 59,000 ಕೋಟಿ ರೂಪಾಯಿಗಳ ಒಪ್ಪಂದ ಏರ್ಪಟ್ಟಿದೆ. ಅದರ ಮೊದಲ ಕಂತಿನಲ್ಲಿ ಭಾರತಕ್ಕೆ ಹಸ್ತಾಂತರಗೊಂಡ ಯುದ್ಧ ವಿಮಾನಗಳಿವು.

    ಮುಂದಿನ ಬ್ಯಾಚ್ ಅಕ್ಟೋಬರ್ ನಲ್ಲಿ ಆಗಮಿಸಲಿವೆ. ಮತ್ತು ಮೂವತ್ತಾರು ವಿಮಾನಗಳು ಒಟ್ಟಾರೆ 2021ರ ಅಂತ್ಯದೊಳಗೆ ಭಾರತೀಯ ವಾಯುಪಡೆಗೆ ಸೇರ್ಪಡೆಗೊಳ್ಳಲಿವೆ. ಇದು 4.5 ಜನರೇಶನ್ ರಫೇಲ್ ಜೆಟ್ ಆಗಿದ್ದು, ಶಬ್ದಕ್ಕಿಂತಲೂ ದುಪ್ಪಟ್ಟು ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿರುವ ಇದರ ಟಾಪ್​ ಸ್ಪೀಡ್ 1.8 ಮಾಚ್​ ಆಗಿದೆ. ಎಲೆಕ್ಟ್ರಾನಿಕ್ ವಾರ್​ಫೇರ್​, ಏರ್​ಡಿಫೆನ್ಸ್​, ಗ್ರೌಂಡ್ ಸಪೋರ್ಟ್​, ಇನ್​-ಡೆಪ್ತ್​ ದಾಳಿಗಳು ಸೇರಿ ಬಹುಪಾತ್ರಗಳನ್ನು ನಿಭಾಯಿಸಬಲ್ಲ ಈ ಸಮರ ವಿಮಾನ, ಭಾರತೀಯ ವಾಯುಪಡೆಯ ಬಲವೃದ್ಧಿಗೆ ಕಾರಣವಾಗಿವೆ.

    ಇದನ್ನೂ ಓದಿ: ಅಭಿವೃದ್ಧಿ ಕಾಮಗಾರಿಗಳಿಗೆ ಮರು ಶಂಕುಸ್ಥಾಪನೆ ಸಮಂಜಸವಲ್ಲ – ಪಪಂ ಸದಸ್ಯೆ ಡಾ.ನಂದಿತಾ ದಾನರಡ್ಡಿ ಆರೋಪ

    ವಾಯುಪಡೆಗೆ ಕೊನೆಯದಾಗಿ ಭಾರಿ ಪ್ರಮಾಣದಲ್ಲಿ ಯುದ್ಧ ವಿಮಾನಗಳ ಸೇರ್ಪಡೆಯಾಗಿ 23 ವರ್ಷಗಳಾಗಿವೆ. ಅಂದು ರಷ್ಯಾ ನಿರ್ಮಿತ ಸುಖೋಯ್​ ವಿಮಾನಗಳನ್ನು ಖರೀದಿಸಲಾಗಿತ್ತು. ಈಗ ಈ ಮೊದಲ ಬ್ಯಾಚ್​ ನ ರಫೇಲ್ ಜೆಟ್ ಫೈಟರ್ ಸೇರ್ಪಡೆಯನ್ನು ವಾಯುಪಡೆ, ರಫೇಲ್ ಪ್ರೈಡ್ ಆಫ್ ದ ಐಎಎಫ್​ ಎಂದು ಬಣ್ಣಿಸಿ ವಿಡಿಯೋವನ್ನು ಟ್ವೀಟ್ ಮಾಡಿದೆ. ವಿಡಿಯೋ ವೀಕ್ಷಣೆಗೆ ಮೇಲಿನ ವಿಡಿಯೋ ಕ್ಲಿಕ್ ಮಾಡಿ. (ಏಜೆನ್ಸೀಸ್)

    PHOTOS|ಫ್ರೆಂಚ್​ ನಿರ್ಮಿತ ರಫೇಲ್​ ಸೇನೆ ಸೇರಿದ ಕ್ಷಣ : ಚೀನಾಕ್ಕೆ ಪರೋಕ್ಷ ಎಚ್ಚರಿಕೆ ನೀಡಿದ ರಕ್ಷಣಾ ಸಚಿವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts