More

    ಢಾಬಾದ ಅಲಂಕಾರಕ್ಕೆ ಬಂತು ಮಿಗ್​-21 ಸೂಪರ್​ಸಾನಿಕ್​ ಯುದ್ಧವಿಮಾನ!

    ನವದೆಹಲಿ: ಭಾರತೀಯ ವಾಯುಪಡೆಯಲ್ಲಿ ಮಿಗ್​-21 ಯುದ್ಧವಿಮಾನಗಳ ಬಗ್ಗೆ ಆಗಾಗ್ಗೆ ಚರ್ಚೆಗಳಾಗುತ್ತಲೇ ಇರುತ್ತದೆ. ಕೆಲವೊಮ್ಮೆ ಆಗಸದಲ್ಲಿ ಶತ್ರುಪಾಳೆಯದವರಿಗೆ ಭಾರಿ ಆಘಾತ ನೀಡಿದ ಬಗ್ಗೆಯಾದರೆ, ಹಲವೊಮ್ಮೆ ಪತನಗೊಂಡು ಯೋಧರ ಬಲಿ ತೆಗೆದುಕೊಂಡ ಬಗ್ಗೆ ಚರ್ಚೆಗಳು ಸಾಗುತ್ತವೆ. ಆದರೆ, ಈ ಬಾರಿ ಅದು ಢಾಬಾವೊಂದರ ಅಲಂಕಾರಕ್ಕೆ ಬಂದಿದೆ ಎಂಬುದು ಇಲ್ಲಿನ ಚರ್ಚೆಯ ವಿಷಯ.

    ಅಂದರೆ, ಅದೇನಾದರೂ ಪತನವಾಗಿ, ಗಾಯಗೊಂಡು, ಆಶ್ರಯ ಕೇಳಿಕೊಂಡು ಇಲ್ಲಿಗೆ ಬಂತಾ ಎಂದು ಪ್ರಶ್ನಿಸಿದರೆ, ಖಂಡಿತಾ ಇಲ್ಲ ಎಂಬ ಉತ್ತರ ಸಿಗುತ್ತದೆ. ಏಕೆಂದರೆ, ಢಾಬಾದ ಮಾಲೀಕ ಭಾರತೀಯ ವಾಯುಪಡೆಯ ಮೇಲಿನ ಗೌರವದಿಂದ ಮಿಗ್​-21 ವಿಮಾನವನ್ನು ಜತನವಾಗಿ ಕಾಪಾಡಿಕೊಳ್ಳುವ ಜತೆಗೆ ಆದನ್ನು ಆಕರ್ಷಣೆಯ ಬಿಂದುವನ್ನಾಗಿಸಿ ಗ್ರಾಹಕರನ್ನು ತನ್ನ ಢಾಬಾದತ್ತ ಸೆಳೆಯಲು ಯತ್ನಿಸಿದ್ದಾರೆ.

    ರೋಹಟಕ್​-ದೆಹಲಿ ಹೆದ್ದಾರಿಯಲ್ಲಿ ಮಹಾರಾಜಾ ಢಾಬಾ ಎಂಬ ಢಾಬಾ ಇದೆ. ಈ ಢಾಬಾದಲ್ಲಿ ತಯಾರಾಗುವ ಆಹಾರಪದಾರ್ಥಗಳು ರುಚಿಗೆ ಸಖತ್​ ಪ್ರಸಿದ್ಧವಾಗಿವೆ. ಹಾಗಾಗಿ ಜನರು ಈ ಢಾಬಾಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಲೇ ಇರುತ್ತಾರೆ.

    ಇದನ್ನೂ ಓದಿ: ಮಹೇಶ್ ಬಾಬು ಚಿತ್ರದಲ್ಲಿ ನಟಿಸಬಾರದಿತ್ತು … ಪಶ್ಚಾತ್ತಾಪ ಪಟ್ಟ ನಟ

    ಅದೇನಾಯಿತೆಂದರೆ, ಭಾರತೀಯ ವಾಯುಪಡೆ ತನ್ನ ಸೂಪರ್​ಸಾನಿಕ್​ ಮಿಗ್​-21 ಬಳಕಗೆ ಹಳೆಯದಾಯಿತು ಎಂದು ಸೇವೆಯಿಂದ ನಿವೃತ್ತಿಗೊಳಿಸಿತು. ಅದು ಇನ್ನೇನು ಗುಜರಿಗೆ ಹೋಗಬೇಕಿತ್ತು. ಇದಕ್ಕಾಗಿ ಹರಾಜು ಪ್ರಕ್ರಿಯೆ ಕೂಡ ನಡೆಸಲಾಗಿತ್ತು. ಈ ಪ್ರಕ್ರಿಯೆಯಲ್ಲಿ ಪಾಲ್ಗೊಂಡ ಮಹಾರಾಜಾ ಢಾಬಾದ ಮಾಲೀಕ ಅದನ್ನು ಖರೀದಿಸಿ, ಢಾಬಾಕ್ಕೆ ತಂದರು. ಅದನ್ನು ಸೂಕ್ತವಾದ ಸ್ಥಳದಲ್ಲಿ ಇರಿಸಿ, ತುಂಬಾ ಜತನದಿಂದ ನೋಡಿಕೊಳ್ಳುತ್ತಿದ್ದಾರೆ.

    ಮಿಗ್​-21 ಸೂಪರ್​ಸಾನಿಕ್​ ವಿಮಾನ ಸಾಕಷ್ಟು ಜನರನ್ನು ತನ್ನತ್ತ ಸೆಳಯುತ್ತಿದೆ. ಇದರ ಮುಂದೆ ನಿಂತು ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಜನರು ಹಾತೊರೆಯುತ್ತಾರೆ ಎಂದು ಢಾಬಾದ ಮ್ಯಾನೇಜರ್​ ಕಮಲ್​ ಸೋಧಿ ಹೇಳುತ್ತಾರೆ.

    ಸೇವೆಯಿಂದ ನಿವೃತ್ತಿಗೊಳಿಸಲಾದ ಯುದ್ಧವಿಮಾನಗಳ ಇಂಜಿನ್​ ಅನ್ನು ತೆಗೆದು ಮಾರಾಟ ಮಾಡಲಾಗುತ್ತದೆ. ಪಂಜಾಬ್​ನ ಪಠಾಣ್​ಕೋಟ್​ ವಾಯುನೆಲೆಯಲ್ಲಿ ನಡೆದ ಹರಾಜಿನಲ್ಲಿ ಪಾಲ್ಗೊಂಡು ಢಾಬಾದ ಮಾಲೀಕ ಈ ವಿಮಾನವನ್ನು ಖರೀದಿಸಿದ್ದಾಗಿ ತಿಳಿಸುತ್ತಾರೆ.

    ಇದನ್ನೂ ಓದಿ: ಮಗು ಮನೆಯಲ್ಲೇ ಬಿಟ್ಟು ಲವರ್​ ನೋಡಲು ಹೋದ ತಾಯಿ: ಮರಳಿ ಬಂದವಳಿಗೆ ಕಾದಿತ್ತು ಭಾರಿ ಶಾಕ್​!

    ಇದರ ಕೆಲಭಾಗಗಳನ್ನು ಕಳಚಿ ಟ್ರೇಲರ್​ ಲಾರಿಯಲ್ಲಿ ಇಲ್ಲಿಗೆ ತರಲಾಯಿತು. ಇಲ್ಲವಾದರೆ, ಹೆದ್ದಾರಿಯಲ್ಲಿನ ವಾಹನ ಸಂಚಾರಕ್ಕೆ ಭಾರಿ ತೊಡಕಾಗುತ್ತಿತ್ತು ಎಂದು ಹೇಳುತ್ತಾರೆ.

    ಸೂಪರ್​ಸಾನಿಕ್​ ಯುದ್ಧವಿಮಾನ ಮತ್ತು ಇಂಟರ್​ಸೆಪ್ಟರ್​ ವಿಮಾನ ಮಿಗ್​-21 ಅನ್ನು ಅಂದಿನ ಸೋವಿಯತ್​ ಒಕ್ಕೂಟದಿಂದ ಖರೀದಿಸಲಾಗಿತ್ತು. ಇಂದಿಗೂ ಕೂಡ ಭಾರತೀಯ ವಾಯುಪಡೆಗೆ ಹೆಚ್ಚಿನ ಬಲತುಂಬುವಲ್ಲಿ ಮಿಗ್​-21 ವಿಮಾನಗಳು ಯಶಸ್ವಿಯಾಗಿವೆ. ಸದ್ಯ ಇದರ 100ಕ್ಕೂ ಹೆಚ್ಚು ಸುಧಾರಿತ ವಿನ್ಯಾಸದ ವಿಮಾನಗಳು ಭಾರತೀಯ ವಾಯುಪಡೆಯಲ್ಲಿ ಸೇವೆ ಸಲ್ಲಿಸುತ್ತಿವೆ.

    ಮಹಾರಾಜಾ ಢಾಬಾಕ್ಕೆ ಮಿಗ್​-21 ಯುದ್ಧವಿಮಾನ ಅಷ್ಟೇ ಅಲ್ಲ, ಅತ್ಯಂತ ಹಳೇ ಮಾದರಿಯ ಟ್ರ್ಯಾಕ್ಟರ್​ಗಳು ಮತ್ತು ಕಾರುಗಳು ಕೂಡ ಇಲ್ಲಿವೆ. ಕೆಲದಿನಗಳ ಹಿಂದಷ್ಟೇ ಬ್ರಿಟನ್​ನಲ್ಲಿ 1922ರಿಂದ 1939ರ ನಡುವೆ ತಯಾರಾಗಿದೆ ಎನ್ನಲಾದ ಆಸ್ಟಿನ್ ಕಾರನ್ನು ಹೈದರಾಬಾದ್​ನಿಂದ ತಂದಿರುವುದಾಗಿ ತಿಳಿಸುತ್ತಾರೆ.

    ಚೀನಾ ಕಳ್ಳಾಟವನ್ನು ಜಗತ್ತಿಗೆ ಸಾರಿದ ಕೆನಡಾ; ಒತ್ತೆಯಾಳು ರಾಯಭಾರಕ್ಕೆ ಮಣಿಯಲ್ಲ ಎಂದ ಪ್ರಧಾನಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts