More

    ಭಾರತೀಯ ವಾಯುಪಡೆಯ ಮಿಗ್​-21 ವಿಮಾನ ಪಂಜಾಬ್​ ಬಳಿ ಪತನ: ಪೈಲಟ್​ಗಾಗಿ ಹುಡುಕಾಟ

    ನವದೆಹಲಿ: ಭಾರತೀಯ ವಾಯುಪಡೆಯ ಮಿಗ್​-21 ವಿಮಾನವು ಪಂಜಾಬ್​ನ ಮೊಗಾ ಬಳಿ ಶುಕ್ರವಾರ ನಸುಕಿನ ಜಾವ ಪತನಗೊಂಡಿರುವುದಾಗಿ ವಾಯುಸೇನಾಧಿಕಾರಿಗಳು ತಿಳಿಸಿದ್ದಾರೆ.

    ಪತನಕ್ಕೂ ಮುನ್ನ ಮಿಗ್​-21 ವಿಮಾನದ ಪೈಲಟ್ ವಿಮಾನದಿಂದ ಹೊರಗೆ ಜಿಗಿದಿರುವುದಾಗಿ ಐಎಎಫ್​ ಮೂಲಗಳು ತಿಳಿಸಿದ್ದು, ಶೋಧ ಕಾರ್ಯಾಚರಣೆ ಆರಂಭವಾಗಿರುವುದಾಗಿಯೂ ಮಾಹಿತಿ ನೀಡಿದೆ.

    ಇದನ್ನೂ ಓದಿ: ಎನ್​ಟಿಆರ್ ನೀಲ್ ಸಿನಿಮಾ ಅಧಿಕೃತ, ಮೈತ್ರಿ ಮೂವಿ ಮೇಕರ್ಸ್ ನಿರ್ಮಾಣ

    ಈ ಘಟನೆ ಗುರುವಾರ ಮಧ್ಯರಾತ್ರಿ ಹಾಗೂ ಶುಕ್ರವಾರ ನಸುಕಿನ ಜಾವ 1 ಗಂಟೆಗೆ ನಡೆದಿದೆ. ಮೊಗಾದ ಬಘುಪುರಾನಾ ವ್ಯಾಪ್ತಿಯಲ್ಲಿ ಬರು ಲ್ಯಾಂಗಿಯಾನಾ ಖುರ್ದ್​ ಗ್ರಾಮದಲ್ಲಿ ಐಎಎಫ್ ವಿಮಾನ​ ಪತನಗೊಂಡಿದೆ.

    ಪತನಗೊಂಡ ಸಂದರ್ಭದಲ್ಲಿ ಐಎಎಫ್ ವಿಮಾನವು ವಾಡಿಕೆಯ ತರಬೇತಿಯಲ್ಲಿತ್ತು. ಪತನಕ್ಕೆ ಕಾರಣ ಇನ್ನಷ್ಟೇ ತಿಳಿದುಬರಬೇಕಿದೆ ಎಂದು ಐಎಎಫ್​ ಅಧಿಕಾರಿಗಳು ತಿಳಿಸಿದ್ದಾರೆ. (ಏಜೆನ್ಸೀಸ್​)

    ಇಸ್ರೆಲ್​ನಿಂದ ಕದನ ವಿರಾಮ ಘೋಷಣೆ: ಹಮಾಸ್​-ಇಸ್ರೇಲ್​ ನಡುವೆ ಒಪ್ಪಂದ ಆರಂಭ, ಗಾಜಾದಲ್ಲಿ ಸಂಭ್ರಮಾಚರಣೆ

    ಇತಿಹಾಸದ ಪುಟ ಸೇರಿದ ಐಎನ್​ಎಸ್ ರಜಪೂತ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts