More

    2ನೇ ವಿಮಾನವಾಹಕ ನೌಕೆ ಖರೀದಿಗೆ ಕೇಂದ್ರ ಅಸ್ತು; ಚೀನಾ ಸವಾಲು ಎದುರಿಸಲು ಸೇನೆಗೆ ಬಲ

    ನವದೆಹಲಿ: ಸುಮಾರು 40,000 ಕೋಟಿ ರೂಪಾಯಿ ವೆಚ್ಚದಲ್ಲಿ ಎರಡನೇ ವಿಮಾನವಾಹಕ ನೌಕೆಯನ್ನು ಖರೀದಿಸುವ ಭಾರತೀಯ ನೌಕಾ ಪಡೆಯ ಪ್ರಸ್ತಾಪಕ್ಕೆ ಸರ್ಕಾರ ಹಸಿರು ನಿಶಾನೆ ತೋರಿದೆ. ಹಿಂದು ಮಹಾಸಾಗರ ವಲಯದಲ್ಲಿ ಚೀನಾದ ಚಟುವಟಿಕೆಗಳ ಹೆಚ್ಚಳದಿಂದ ಉಂಟಾಗಿರುವ ಕಳವಳದ ಹಿನ್ನೆಲೆಯಲ್ಲಿ ಸರ್ಕಾರ ಈ ಮಹತ್ವದ ಕ್ರಮಕ್ಕೆ ಮುಂದಾಗಿದೆ.

    ನೇವಿಯ ಮಹತ್ವಾಕಾಂಕ್ಷೆಯ ಪ್ರಸ್ತಾಪನೆಗೆ ರಕ್ಷಣಾ ಸಚಿವಾಲಯದ ಒಂದು ಪ್ರಮುಖ ಅಂಗವಾದ ರಕ್ಷಣಾ ಖರೀದಿ ಮಂಡಳಿ (ಡಿಪಿಬಿ) ತಾತ್ವಿಕ ಸಮ್ಮತಿ ನೀಡಿದೆ ಎಂದು ಸರ್ಕಾರದ ಉನ್ನತ ಮೂಲದವರು ತಿಳಿಸಿದ್ದಾರೆ. ಈ ದ್ವೀತಿಯ ದೇಶೀಯ ವಿಮಾನವಾಹಕ ನೌಕೆಯನ್ನು ಐಎಸಿ&2 ಎಂದು ಕರೆಯಲಾಗುತ್ತದೆ. ಈ ಬೃಹತ್​ ಖರೀದಿ ಪ್ರಸ್ತಾಪನೆಯನ್ನು ಶ್ರೀವೇ ರಕ್ಷಣಾ ಸ್ವಾಧಿನ ಮಂಡಳಿ (ಡಿಎಸಿ) ಮುಂದೆ ಮಂಡಿಸಲಾಗುವುದೆಂದು ಅವರು ಹೇಳಿದ್ದಾರೆ.

    ರಕ್ಷಣಾ ಸಚಿವ ರಾಜನಾಥ್​ ಸಿಂಗ್​ ನೇತೃತ್ವದ ಡಿಎಸಿ ಗುರುವಾರ ಸಭೆ ನಡೆಸಿ ಐಎಸಿ&2 ಖರೀದಿ ವಿಚಾರವನ್ನು ಪರಿಶೀಲಿಸುವ ಸಂಭವವಿದೆ. ಐಎನ್​ಎಸ್​ ವಿಕ್ರಾಂತ್​ಗೆ 30 ಸಮರ ವಿಮಾನ ಮತ್ತು ಹೆಲಿಕಾಪ್ಟರ್​ಗಳನ್ನು ಒಯ್ಯುವ ಸಾಮರ್ಥ್ಯವಿದೆ. ಇದೊಂದು “ತೇಲುವ ನಗರ’ ಎಂದು ವಿಕ್ರಾಂತ್​ ಉದ್ಘಾಟನೆ ಕಾರ್ಯಕ್ರಮದಲ್ಲಿ ಮೋದಿ ಹೇಳಿದ್ದರು. ರಕ್ಷಣಾ ವಲಯದಲ್ಲಿ ಭಾರತದ ಸ್ವಾವಲಂಬನೆಯನ್ನು ಅದು ಪ್ರತಿಲಿಸುತ್ತದೆ ಎಂದಿದ್ದರು. ಚೀನಾದ ಹೆಚ್ಚುತ್ತಿರುವ ನೌಕಾ ಪಡೆ ಸಾಮರ್ಥ್ಯ ಹಾಗೂ ಹಿಂದು ಮಹಾಸಾಗರ ವಲಯದಲ್ಲಿ ಅದರ ಹೆಚ್ಚುತ್ತಿರುವ ಪ್ರಭಾವವನ್ನು ಎದುರಿಸಲು ಮೂರು ವಿಮಾನವಾಹಕ ನೌಕೆಗಳು ಅಗತ್ಯ ಎಂದು ನೌಕಾಪಡೆ ಪ್ರತಿಪಾದಿಸುತ್ತಿದೆ. ಪ್ರಸ್ತುತ ಭಾರತ, ಐಎನ್​ಎಸ್​ ವಿಕ್ರಮಾದಿತ್ಯ ಮತ್ತು ಐಎನ್​ಎಸ್​ ವಿಕ್ರಾಂತ್​ ಎಂಬ ಎರಡು ಸಮರವಿಮಾನ ಒಯ್ಯುವ ಹಡಗುಗಳನ್ನು ಹೊಂದಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts