More

    ಅದಾನಿ ಷೇರುಗಳಲ್ಲಿ ಭಾರಿ ಏರಿಕೆ; ಸುಪ್ರಿಂ ಕೋರ್ಟ್​ ಹೇಳಿಕೆ ಪ್ರಮುಖ ಕಾರಣ!

    ನವದೆಹಲಿ: ಅದಾನಿ ಸಮೂಹ ಸಂಸ್ಥೆಗಳ ಷೇರುಗಳು ಮಂಗಳವಾರ ಭಾರಿ ಏರಿಕೆ ದಾಖಲಿಸಿವೆ. ಹಿಂಡನ್​ರ್ಬಗ್​ ಪ್ರಕರಣದ ನಂತರ ಇಳಿಕೆ ಕಂಡಿದ್ದ ಅದಾನಿ ಸಮೂಹದ ಷೇರುಗಳು ಮೊದಲ ಬಾರಿಗೆ ಇಷ್ಟು ದೊಡ್ಡ ಪ್ರಮಾಣದ ಏರಿಕೆ ಕಂಡಿವೆ.

    ಅದಾನಿ ಟೋಟಲ್​ ಗ್ಯಾಸ್​ ಶೇ. 20ರಷ್ಟು ಏರಿಕೆ ಕಂಡಿದೆ. ಅದಾನಿ ಸಮೂಹದ ಎಲ್ಲ 10 ಷೇರುಗಳಲ್ಲಿ ಖರೀದಿ ಕಂಡುಬಂತು. ಅದಾನಿ ಎನರ್ಜಿ ಸೊಲ್ಯೂಷನ್ಸ್​ ಶೇ. 19.06, ಅದಾನಿ ಪವರ್​ ಶೇ. 12.32, ಅದಾನಿ ಗ್ರೀನ್​ ಎನರ್ಜಿ ಶೇ. 12.27, ಎನ್​ಡಿಟಿವಿ ಶೇ. 11.73, ಅದಾನಿ ವಿಲ್ಮಾರ್​ ಶೇ. 9.6 ಏರಿಕೆ ಕಂಡಿದೆ. ಅದಾನಿ ಪೋರ್ಟ್ಸ್​ ಶೇ. 5.20, ಅಂಬುಜಾ ಸಿಮೆಂಟ್​ ಶೇ. 4.22 ಮತ್ತು ಎಸಿಸಿ ಶೇ.2.62 ಏರಿಕೆ ಕಂಡಿವೆ. ಮಂಗಳವಾರದ ವಹಿವಾಟಿನ ಅಂತ್ಯಕ್ಕೆ ಎಲ್ಲ 10 ಸಂಸ್ಥೆಗಳ ಸಂಯೋಜಿತ ಮಾರುಕಟ್ಟೆ ಮೌಲ್ಯ 11.31 ಲಕ್ಷ ಕೋಟಿ ರೂ.ಗೆ ಏರಿಕೆಯಾಗಿದೆ. ಶುಕ್ರವಾರದ ವಹಿವಾಟಿನ ಮುಕ್ತಾಯಕ್ಕೆ ಇದು ಸುಮಾರು 10.26 ಲಕ್ಷ ಕೋಟಿ ರೂ. ಆಗಿತ್ತು.

    ಅದಾನಿ ಸಮೂಹದ ವಿರುದ್ಧದ ವಂಚನೆ ಆರೋಪಗಳನ್ನು ಪರಿಶೀಲಿಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಗಳ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್​ ತೀರ್ಪನ್ನು ಶುಕ್ರವಾರ ಕಾಯ್ದಿರಿಸಿತ್ತು. ಹಿಂಡೆನ್​ರ್ಬಗ್​ ವರದಿಯನ್ನು ಸಂಪೂರ್ಣ ನಿಜವೆಂದು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ವರದಿಯ ಸತ್ಯಾಸತ್ಯತೆಯನ್ನು ಪರೀಸಲು ಯಾವುದೇ ವಿಧಾನವಿಲ್ಲ. ಆದ್ದರಿಂದ ತನಿಖೆ ನಡೆಸುವಂತೆ ಸೆಬಿಗೆ ಕೇಳಲಾಗಿದೆ.

    ಎಲ್ಲ 24 ಪ್ರಕರಣಗಳ ತನಿಖೆಯನ್ನು ಸೆಬಿ ಪೂರ್ಣಗೊಳಿಸಬೇಕು. ಆರೋಪ ಮಾಡುವವರಿಗೆ ಜವಾಬ್ದಾರಿ ಇರಬೇಕು. ಕಾನೂನಿನ ಅಡಿಯಲ್ಲಿ ಪ್ರಕ್ರಿಯೆಗಳನ್ನು ಪ್ರಾರಂಭಿಸುವ ಮೊದಲು ಸಂಶೋಧನೆಗಳನ್ನು ಬಹಿರಂಗಪಡಿಸಲು ಸೆಬಿಯನ್ನು ಕೇಳಬಹುದಿತ್ತು. ಸೆಬಿಯ ತನಿಖೆ, ನಿಲುವನ್ನು ನಾವು ಮುಂಚಿತವಾಗಿ ರ್ನಿಣಯಿಸಲು ಸಾಧ್ಯವಿಲ್ಲ ಎಂದು ಹೇಳಿತ್ತು. ಈ ಪ್ರಕರಣದಲ್ಲಿ ಮೇಲ್ನೋಟಕ್ಕೆ ಅದಾನಿ ಸಮೂಹದ ಪರವಾಗಿ ತೀರ್ಪು ಪ್ರಕಟವಾಗುವ ಸಾಧ್ಯತೆ ಇರುವ ಕಾರಣ ಕಂಪನಿಯ ಷೇರುಗಳಲ್ಲಿ ಭಾರಿ ಏರಿಕೆ ಕಂಡುಬಂದಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts