More

    ವಿದರ್ಭ ಎದುರು ಕೈಕೊಟ್ಟ ಬ್ಯಾಟ್ಸ್​ಮನ್​ಗಳು; ಕರ್ನಾಟಕದ ರಣಜಿ ಟ್ರೋಫಿ ಕನಸು ಭಗ್ನ

    ನಾಗ್ಪುರ: ಇಲ್ಲಿನ ವಿದರ್ಭ ಕ್ರಿಕೆಟ್​ ಅಸೋಸಿಯೇಷನ್​ ಕ್ರೀಡಾಂಗಣದಲ್ಲಿ ನಡೆದ ಕರ್ನಾಟಕ ಹಾಗೂ ವಿದರ್ಭ ತಂಡಗಳ ನಡುವಿನ ರಣಜಿ ಕ್ವಾರ್ಟರ್​ ಫಿನಾಲೆ ಪಂದ್ಯದಲ್ಲಿ ಪ್ರವಾಸಿ ತಂಡವು ಅತಿಥೇಯರ ಎದುರು ಸೋಲೊಪ್ಪಿಕೊಂಡಿದ್ದಾರೆ. ಈ ಮೂಲಕ ಕರ್ನಾಟಕದ ನಾಲ್ಕರ ಘಟ್ಟ ಪ್ರವೇಶಿಸುವ ಕನಸು ಭಗ್ನಗೊಂಡಿದೆ. 

    ಮಧ್ಯಪ್ರದೇಶ, ತಮಿಳುನಾಡು ಹಾಗೂ ವಿದರ್ಭ ಅಗ್ರ ಮೂರರಲ್ಲಿದ್ದು, ಮುಂಬೈ ಸೆಮಿಫಿನಾಲೆಗೆ ಲಗ್ಗೆ ಇಡುವುದು ಬಹುತೇಕ ಖಚಿತವಾಗಿದೆ. ಬೌಲರ್​ಗಳ ಮಿಂಚಿನ ದಾಳಿಯ ಹೊರತಾಗಿಯೂ ಬ್ಯಾಟ್ಸ್​ಮನ್​ಗಳ ವೈಫಲ್ಯದಿಂದಾಗಿ ಕರ್ನಾಟಕ ಕ್ವಾರ್ಟರ್​ ಫಿನಾಲೆಯಲ್ಲಿ ಮುಗ್ಗರಿಸಿದೆ.

    ಇದನ್ನೂ ಓದಿ: ಟಿ20 ಕ್ರಿಕೆಟ್​ನಲ್ಲಿ ಅತಿ ವೇಗದ ಶತಕ ಬಾರಿಸಿದ ಯುವ ಬ್ಯಾಟ್ಸ್​ಮನ್​; ಹಳೇ ದಾಖಲೆಗಳು ಉಡೀಸ್​

    ಟಾಸ್​ ಸೋತು ಮೊದಲು ಬ್ಯಾಟಿಂಗ್​ ಮಾಡಿದ ವಿದರ್ಭ ತಂಡವು ಮೊದಲ ಇನ್ನಿಂಗ್ಸ್​ನಲ್ಲಿ 460 ಹಾಗೂ ದ್ವತೀಯ ಇನ್ನಿಂಗ್ಸ್​ನಲ್ಲಿ 196 ರನ್​ಗಳಿಸಿ ಆಲೌಟ್​ ಆಯಿತು. ಕರ್ನಾಟಕ ಮೊದಲ ಇನಿಂಗ್ಸ್‌ನಲ್ಲಿ 286 ರನ್ ಗಳಿಸಿತ್ತು. ಮೊದಲ ಇನಿಂಗ್ಸ್‌ನಲ್ಲಿ 174 ರನ್‌ಗಳ ಹಿನ್ನಡೆಯಲ್ಲಿದ್ದ ಕರ್ನಾಟಕಕ್ಕೆ ಗೆಲುವಿಗೆ 371 ರನ್‌ಗಳ ಗುರಿ ಪಡೆದಿತ್ತು.

    372 ರನ್​ಗಳ ಗುರಿಗಳ ಬೆನ್ನಟ್ಟಿದ್ದ ಕರ್ನಾಟಕ ತಂಡವು 243 ರನ್​ಗಳಿಗೆ ಆಲೌಟ್​ ಆಯಿತು. ಮೊದಲ ಇನಿಂಗ್ಸ್‌ನಲ್ಲಿ ತಂಡವು 174 ರನ್‌ಗಳ ದೊಡ್ಡ ಹಿನ್ನಡೆ ಅನುಭವಿಸಲು ಕಾರಣರಾಗಿದ್ದ ಬ್ಯಾಟ್ಸ್​ಮನ್​ಗಳು ಎರಡನೇ ಇನ್ನಿಂಗ್ಸ್‌ನಲ್ಲಿ ವಿಫಲರಾದ ಕಾರಣ ಕರ್ನಾಟಕದ ರಣಜಿ ಟ್ರೋಫಿ ಕನಸು ಭಗ್ನಗೊಂಡಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts