More

    25 ವರ್ಷಗಳ ಬಳಿಕ ಮತ್ತೆ ಹಿಂದಿಯಲ್ಲಿ ಸಲ್ಮಾನ್ ಖಾನ್ ಜೊತೆ ವಿಕ್ಟರಿ ವೆಂಕಟೇಶ್!

    ಮುಂಬೈ: ಬಾಲಿವುಡ್ ನಟರು ಸೌತ್ ಸಿನಿಮಾಗಳಲ್ಲಿ ನಟಿಸುವುದು ಕಂಡುಬಂದಿದೆ. ಆದರೆ, ಸೌತ್ ಸಿನಿ ನಟರು ಬಾಲಿವುಡ್​ಗೆ ಹಾರುವುದು ತುಂಬಾ ವಿರಳ. ಅದರಲ್ಲಿಯೂ, ಸೂಪರ್ ಸ್ಟಾರ್ ನಟರು ಬೇರೆ ಭಾಷೆಗಳಲ್ಲಿ ನಟಿಸುವುದು ಅಪರೂಪವೇ. ಒಂದು ವೇಳೆ ಯಾವುದಾದರು ಸಿನಿಮಾದಲ್ಲಿ ನಟರು ಕಾಣಿಸಿಕೊಂಡರು ಅದು ಅತಿಥಿ ಪಾತ್ರಗಳಲ್ಲಿ ಮಾತ್ರ. ಆದರೆ, 25 ವರ್ಷಗಳ ಬಳಿಕ ಸೂಪರ್ ಸ್ಟಾರ್ ನಟ ಫ್ಯಾಮೆಲಿ ಮ್ಯಾನ್, ವಿಕ್ಟರಿ ವೆಂಕಟೇಶ್ ಹಿಂದಿ ಸಿನಿಮಾದಲ್ಲಿ ನಟಿಸಲು ಹೊರಟಿದ್ದಾರೆ. ಹೌದು, ಬಾಲಿವುಡ್ ಭಾಯ್​​ಜಾನ್, ಸೂಪರ್ ಸ್ಟಾರ್ ನಟ ಸಲ್ಮಾನ್ ಖಾನ್ ಜೊತೆ ವೆಂಕಿ ತೆರೆಹಂಚಿಕೊಳ್ಳಲಿದ್ದಾರಂತೆ. ನಟ ಸಲ್ಮಾನ್ ಖಾನ್ ಅವರೊಂದಿಗೆ ಹಲವಾರು ಹಿಂದಿ ಚಲನಚಿತ್ರಗಳಲ್ಲಿ ಕೆಲಸ ಮಾಡಿದ ನಂತರ, ಸಾಜಿದ್ ನಾದಿಯಾಡ್ವಾಲಾ ಅವರು ಈಗ ಮತ್ತೆ ಸಲ್ಮಾನ್ ಅವರೊಂದಿಗೆ ಒಂದು ಆಕ್ಷನ್ನ ಪ್ಲಸ್ ಹಾಸ್ಯ ಚಿತ್ರವನ್ನು ಮಾಡಲು ಸಿದ್ಧರಾಗಿದ್ದಾರೆ. ಈ ಬಾರಿ ಅವರು ದಕ್ಷಿಣದ ಸ್ಟಾರ್ ವಿಕ್ಟರಿ ವೆಂಕಟೇಶ್ ಅವರನ್ನು ನಟ ಸಲ್ಮಾನ್ ಅವರೊಂದಿಗೆ ತೆರೆಯನ್ನು ಹಂಚಿಕೊಳ್ಳಲು ವಿನಂತಿಸಿದ್ದಾರೆ ಎನ್ನಲಾಗಿದೆ. ಇನ್ನು, ಈ ಚಿತ್ರವು ಬಹು ಭಾಷೆಗಳಲ್ಲಿ ಅಂದರೆ ಪ್ಯಾನ್ ಇಂಡಿಯಾ ಸಿನಿಮಾ ಆಗಿರಲಿದೆ ಎಂದು ವರದಿಯಾಗಿದೆ.
    ಅಂದಹಾಗೆ, 1993ರಲ್ಲಿ ‘ಅನಾರಿ’ ಎಂಬ ಸಿನಿಮಾದ ಮೂಲಕ ವಿಕ್ಟರಿ ವೆಂಕಟೇಶ್ ಹಿಂದಿ ಚಿತ್ರಗಳಿಗೆ ಪಾದಾರ್ಪಣೆ ಮಾಡಿದ್ದರು. ನಂತರ 1995ರಲ್ಲಿ ‘ತಕ್ದೀರ್ವಾಲಾ’ ಎಂಬ ಸಿನಿಮಾದಲ್ಲಿ ಮಿಂಚಿದ್ದರು. ಈ ಸಿನಿಮಾ 1994ರಲ್ಲಿ ತೆಲುಗಿನಲ್ಲಿ ಬಿಡುಗಡೆಯಾದ ಸೂಪರ್ ಹಿಟ್ ‘ಯಮಲೀಲಾ’ ಚಿತ್ರದ ರೀಮೇಕ್ ಆಗಿತ್ತು. ಇದು ಅಲ್ಲದೇ, ಅವರ ಹಲವು ಸಿನಿಮಾಗಳು ಹಿಂದೆಗೆ ಡಬ್ ಸಹ ಆಗಿದ್ದವು. ಹೀಗಾಗಿ, ನಟ ವಿಕ್ಟರಿ ವೆಂಕಟೇಶ್​ಗೆ ಹಿಂದಿ ಸಿನಿಮಾಗಳು ಹೊಸದೆನಲ್ಲ. ಜೊತೆಗೆ, ಅವರು ಸಲ್ಮಾನ್ ಖಾನ್ ಅವರೊಂದಿಗೆ ಒಳ್ಳೆಯ ಸ್ನೇಹವನ್ನು ಹೊಂದಿದ್ದಾರೆ. ಸೆಲೆಬ್ರಿಟಿ ಕ್ರಿಕೆಟ್ ಲೀಗ್​ ಮತ್ತು ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಿ, ಜಾಹೀರಾತುಗಳಲ್ಲಿ ಒಟ್ಟಿಗೆ ನಟಿಸುವ ಮೂಲಕ ಇವರಿಬ್ಬರು ಒಳ್ಳೆಯ ಸ್ನೇಹಿತರಾಗಿದ್ದಾರೆ ಎಂದು ಸಿನಿಮಾ ವರ್ಗದವರು ಹೇಳುತ್ತಾರೆ. ಹೀಗಾಗಿ, ನಟ ಸಲ್ಮಾನ್ ಖಾನ್ ಅವರೊಂದಿಗೆ ವೆಂಕಿ ತೆರೆಹಂಚಿಕೊಂಡರೆ ಇಬ್ಬರೂ ನಟರ ಅಭಿಮಾನಿಗಳು ಫುಲ್ ಖುಷ್ ಆಗುತ್ತಾರೆ ಎನ್ನುವುದರಲ್ಲಿ ಸಂಶಯವಿಲ್ಲ.

    25 ವರ್ಷಗಳ ಬಳಿಕ ಮತ್ತೆ ಹಿಂದಿಯಲ್ಲಿ ಸಲ್ಮಾನ್ ಖಾನ್ ಜೊತೆ ವಿಕ್ಟರಿ ವೆಂಕಟೇಶ್!

    ಸಾಜಿದ್ ನಾದಿಯಾಡ್ವಾಲಾ ಅವರ ಮುಂಬರುವ ಸಿನಿಮಾದಲ್ಲಿ ಈ ಇಬ್ಬರು ನಟರು ಕಾಣಿಸಿಕೊಳ್ಳುವುದು ಬಹುತೇಕ ಖಚಿತವಾಗಿದೆ. ಆದರೆ, ಈ ಸಿನಿಮಾದ ಟೈಟಲ್ ಬಗ್ಗೆ ಇನ್ನು ಹೆಚ್ಚು ಮಾಹಿತಿ ನಿರೀಕ್ಷಿಸ ಬೇಕಿದೆ. ಒಂದು ಪೂರ್ಣ ಪ್ರಮಾಣದ ಹಿಂದಿ ಚಿತ್ರದಲ್ಲಿ 25 ವರ್ಷಗಳ ಬಳಿಕ ವಿಕ್ಟರಿ ವೆಂಕಟೇಶ್ ನಟಿಸುತ್ತಿದ್ದು, ಈ ಸಿನಿಮಾದಲ್ಲಿ ಅತಿಥಿ ಪಾತ್ರವಲ್ಲದೇ ಸಲ್ಮಾನ್ ಪಕ್ಕದಲ್ಲಿ ಒಂದು ಪ್ರಮುಖ ಪಾತ್ರದಲ್ಲೆ ಅಭಿಮಾನಿಗಳನ್ನು ರಂಜಿಸಲಿದ್ದಾರೆ ವೆಂಕಿ ಮಾಮಾ. ಇದೇ ಸಿನಿಮಾಗೆ ನಟ ಸಲ್ಮಾನ್ ಎದುರು ಸೌತ್ ಸುಂದರಿಯಾದ ನಟಿ ಪೂಜಾ ಹೆಗ್ಡೆ ಆಯ್ಕೆಯಾಗಿದ್ದು, ವೆಂಕಿಗೆ ನಾಯಕಿ ಯಾರು ಎಂಬುದಿನ್ನೂ ಖಾತ್ರಯಾಗಿಲ್ಲ. ಸಲ್ಮಾನ್ ಅವರ ‘ಅಂತಿಮ್’ ಸಿನಿಮಾ ಈಗಾಗಲೇ ತೆರೆಕಂಡಿದ್ದು ‘ಟೈಗರ್-3’ ಚಿತ್ರೀಕರಣದಲ್ಲಿ ನಟ ಬ್ಯೂಸಿಯಾಗಿದ್ದಾರೆ. ವೆಂಕಟೇಷ್ ಕೂಡ ಸದ್ಯ ‘ಎಫ್-3’ ಚಿತ್ರದಲ್ಲಿ ನಟಿಸುತ್ತಿದ್ದು , ಆ ಸಿನಿಮಾ ಸಂಕ್ರಾಂತಿಗೆ ಬಿಡುಗಡೆಯಾಗಲಿದೆ. ಇದರ ಮಧ್ಯೆ, ನಟ ಸಲ್ಮಾನ್ ಕೂಡಾ ಮೆಗಾ ಸ್ಟಾರ್ ಚಿರಂಜೀವಿ ಅವರ ‘ಗಾಡ್ ಫಾದರ್’ ನಲ್ಲಿ ಅತಿಥಿ ಪಾತ್ರದಲ್ಲಿ ನಟಿಸುವುದು ಖಾತ್ರಿಯಾಗಿದೆ. ‘RRR’ ಚಿತ್ರದ ಪ್ರೀ-ರಿಲೀಸ್ ಕಾರ್ಯಕ್ರಮದಲ್ಲೂ ನಟ ಸಲ್ಮಾನ್ ಖಾನ್ ಮುಖ್ಯ ಅತಿಥಿ ಎಂಬ ಮಾಹಿತಿ ಹರಿದಾಡುತ್ತಿದೆ. ಇದರಿಂದ, ನಟ ಸಲ್ಮಾನ್ ಖಾನ್ ತೆಲುಗು ಚಿತ್ರರಂಗದೊಂದಿಗೆ ಉತ್ತಮ ಬಂಧವನ್ನು ಹೊಂದಿದ್ದಾರೆ ಎಂದು ಹೇಳಬಹುದು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts