More

    ಶ್ರೀರಾಮನ ಹೆಸರಿನಲ್ಲಿ ದೇಣಿಗೆ ಸಂಗ್ರಹ; ಮೋಸ ಹೋಗದಂತೆ ವಿಹಿಂಪ ಎಚ್ಚರಿಕೆ

    ಲಖನೌ: ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮಮಂದಿರದ ಉದ್ಘಾಟನೆ ಜನವರಿ 22 ರಂದು ನೆರವೇರಲಿದ್ದು, ಐತಿಹಾಸಿಕ ಕ್ಷಣವನ್ನು ಕಣ್ತುಂಬಿಕೊಳ್ಳಲು ಕೋಟ್ಯಾಂತರ ಭಕ್ತರು ಕಾತುರದಿಂದ  ಕಾಯುತ್ತಿದ್ದಾರೆ. ಈ ನಡುವೆ ಪವಿತ್ರ ರಾಮಮಂದಿರಕ್ಕೆ  ತಮ್ಮ ಅಳಿಲು ಸೇವೆಯನ್ನು ಸಲ್ಲಿಸಬೇಕೆಂದು ಭಕ್ತರು ಒಂದಲ್ಲಾ ರೂಪದಲ್ಲಿ ರಾಮಮಂದಿರಕ್ಕೆ ತಮ್ಮ ಕೈಲಾದಷ್ಟು ಕಾಣಿಕೆಯನ್ನು ಸಲ್ಲಿಸುತ್ತಿದ್ದಾರೆ.

    ಆದರೆ, ಇದನ್ನೇ ಬಂಡವಾಳ ಮಾಡಿಕೊಂಡಿರುವ ಕೆಲವು ದುರುಳರು ರಾಮಮಂದಿರ ನಿರ್ಮಾಣಕ್ಕೆ ದೇಣಿಗೆ ಸಂಗ್ರಹಿಸುವ ನೆಪದಲ್ಲಿ ಜನರನ್ನು ವಂಚಿಸಿದ್ದಾರೆ ಎಂದು ತಿಳಿದು ಬಂದಿದೆ. ಈ ಸಂಬಂಧ ವಿಶ್ವ ಹಿಂದೂ ಪರಿಷತ್​ (VHP) ಪೊಲೀಸರಿಗೆ ದೂರು ನೀಡಿದ್ದು, ಜನರು ಮೋಸ ಹೋಗಬಾರದೆಂದು ಎಚ್ಚರಿಕೆ ನೀಡಿದೆ.

    ಇದನ್ನೂ ಓದಿ: 2024ರಲ್ಲಿ ಯಾರ ವಿರುದ್ಧ ಆಡಲಿದೆ ಟೀಂ ಇಂಡಿಯಾ; ಸರಣಿಗಳ ವಿವರ ಹೀಗಿದೆ

    ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಬರೆದುಕೊಂಡಿರುವ ವಿಶ್ವ ಹಿಂದೂ ಪರಿಷತ್​ ಹಿರಿಯ ಮುಖಂಡ ವಿನೋದ್ ಬನ್ಸಾಲ್, ಕೆಲವು ದುಷ್ಕರ್ಮಿಗಳು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಹೆಸರಿನಲ್ಲಿ ನಕಲಿ ಐಡಿಗಳನ್ನು ಸೃಷ್ಟಿಸುವ ಮೂಲಕ ಜನರನ್ನು ವಂಚಿಸುತ್ತಿದ್ದಾರೆ. ಅಂತಹ ವ್ಯಕ್ತಿಗಳ ವಿರುದ್ಧ ತ್ವರಿತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಕೇಂದ್ರ ಗೃಹ ಸಚಿವಾಲಯ, ಉತ್ತರಪ್ರದೇಶ ಹಾಗೂ ದೆಹಲಿ ಪೊಲೀಸರನ್ನು ಟ್ಯಾಗ್​ ಮಾಡಿದ್ದಾರೆ.

    ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಹೆಸರಿನಲ್ಲಿ ನಕಲಿ ಐಡಿ ಹಾಗೂ ಕ್ಯೂಆರ್ ಕೋಡ್ ಸೃಷ್ಟಿಸಿ ಸಾಮಾಜಿಕ ಜಾಲತಾಣಗಳ ಮೂಲಕ ಹಣ ವಸೂಲಿ ಮಾಡುತ್ತಿರುವುದು ಕಂಡು ಬಂದಿದೆ. ಶ್ರೀರಾಮ ಜನ್ಮ ಭೂಮಿ ಟ್ರಸ್ಟ್ ದೇಣಿಗೆ ಸಂಗ್ರಹಿಸುವವುದಕ್ಕೆ ಸಂಬಂಧಿಸಿದಂತೆ​ ಯಾರಿಗೂ ಯಾವುದೇ ರೀತಿಯ ಅಧಿಕಾರವನ್ನು ನೀಡಿಲ್ಲ. ಜನರು ಜಾಗರೂಕರಾಗಿರಬೇಕು ನಾವು ಆಹ್ವಾನಗಳನ್ನು ನೀಡಲಿದ್ದೇವೆ ಮತ್ತು ಯಾವುದೇ ರೀತಿಯ ದೇಣಿಗೆ ಅಥವಾ ಉಡುಗೊರೆಯನ್ನು ಸ್ವೀಕರಿಸುವುದಿಲ್ಲ ಎಂದು ವಿಶ್ವ ಹಿಂದೂ ಪರಿಷತ್​ ಹಿರಿಯ ಮುಖಂಡ ವಿನೋದ್ ಬನ್ಸಾಲ್ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts