More

    ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮದಲ್ಲೇ ರಾಜಕೀಯ ಜಿದ್ದಾಜಿದ್ದಿ; ಸಚಿವ-ಶಾಸಕರ ವಾಕ್ಸಮರ..

    ಹೊಸಕೋಟೆ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಮುತ್ಸಂದ್ರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮ ಸಚಿವರು ಹಾಗೂ ಶಾಸಕರ ನಡುವಿನ ರಾಜಕೀಯ ಜಿದ್ದಾಜಿದ್ದಿ ವೈಯಕ್ತಿಕ ವಾಕ್ಸಮರಕ್ಕೆ ವೇದಿಕೆಯಾಯಿತು.

    ಹೈವೋಲ್ಟೇಜ್ ಚುನಾವಣಾ ಕಣವಾಗಿ ಸದ್ದು ಮಾಡುತ್ತಿರುವ ಹೊಸಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಸಚಿವ ಎಂಟಿಬಿ ನಾಗರಾಜ್ ಹಾಗೂ ಶಾಸಕ ಶರತ್ ಬಚ್ಚೇಗೌಡ ನಡುವೆ ಆಗಾಗ ವಾಕ್ಸಮರ, ತಿಕ್ಕಾಟಗಳು ಸಾಮಾನ್ಯವಾಗಿದ್ದು, ಇವರ ನಡುವಿನ ರಾಜಕೀಯ ವೈಷಮ್ಯ ಸರ್ಕಾರಿ ಕಾರ್ಯಕ್ರಮಗಳ ಮೇಲೂ ಪರಿಣಾಮ ಬೀರುತ್ತಿವೆ.

    ವೇದಿಕೆಯಿಂದ ಸಚಿವರ ನಿರ್ಗಮನ: ಸಚಿವರ ಭಾಷಣದ ಬಳಿಕ ಶಾಸಕರು ಭಾಷಣಕ್ಕೆ ಮುಂದಾದ ವೇಳೆ ಪೂರ್ವನಿಗದಿತ ಕಾರ್ಯಕ್ರಮಕ್ಕೆ ತೆರಳಲು ವೇದಿಕೆ ಬಿಟ್ಟು ಹೊರಡಲು ಮುಂದಾದ ಸಚಿವರನ್ನು ತಡೆದ ಶರತ್‌ ಬಚ್ಚೇಗೌಡ ತಾಲೂಕಿನ ಸಮಸ್ಯೆಗಳನ್ನು ತಿಳಿಸಬೇಕಿದೆ, ನಿಮ್ಮ ಭಾಷಣ ಕೇಳಿದ್ದೇನೆ, ನನ್ನ ಮಾತು ಕೇಳಿ ಎಂದು ಮನವಿ ಮಾಡಿದರು. ಅದಕ್ಕೆ ಪ್ರತಿಕ್ರಿಯಿಸಿದ ಸಚಿವರು ಈಗಾಗಲೇ ಪೂರ್ವನಿಗದಿತ ಕಾರ್ಯಕ್ರಮವಿದ್ದು ತೆರಳಲೇ ಬೇಕಾಗಿದೆ, ಸಮಸ್ಯೆಗಳನ್ನು ಪತ್ರದ ಮೂಲಕ ತಲುಪಿಸುವಂತೆ ತಿಳಿಸಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಶಾಸಕ ಶರತ್‌ ಬಚ್ಚೇಗೌಡ ನಾನು ಮುಕ್ಕಾಲು ಗಂಟೆ ನಿಮ್ಮ ಭಾಷಣ ಕೇಳಿದ್ದೇನೆ, ನಾನು ಕೇವಲ 15 ನಿಮಿಷದಲ್ಲಿ ಸಮಸ್ಯೆಗಳನ್ನು ಮುಂದಿಡುತ್ತೇನೆ, ಅದನ್ನು ಕ್ಯಾಬಿನೆಟ್ ಮೀಟಿಂಗ್‌ನಲ್ಲಿ ಸಿಎಂ ಗಮನಕ್ಕೆ ತನ್ನಿ ಎಂದರು.

    ಈ ವೇಳೆ ಸಚಿವರು ಮೈಕ್ ಪಡೆದು ಪ್ರತಿಕ್ರಿಯಿಸಲು ಮುಂದಾದರೂ ಮಾತನ್ನು ಮುಂದುವರಿಸಿದ ಶಾಸಕರು, ಜನಪರ ಕಾಳಜಿ ಇಲ್ಲದೆ, ಸಮಸ್ಯೆ ಆಲಿಸದೆ ರಣಹೇಡಿ ರೀತಿ ಓಡಿ ಹೋಗುತ್ತಿರುವುದು ಯಾವ ಮಟ್ಟಿಗೆ ನ್ಯಾಯ? ಇಂತಹ ಕಾರ್ಯಕ್ರಮ ಯಾವ ಪುರುಷಾರ್ಥಕ್ಕೆ ಬಿಜೆಪಿ ಸರ್ಕಾರ ಮಾಡಬೇಕು? ಎಂದು ವಾಗ್ದಾಳಿ ನಡೆಸಿದರು. ಸಚಿವರು ಸಭೆಯಿಂದ ಕಣ್ಮರೆಯಾಗುವವರೆಗೂ ಶಾಸಕರು ವಾಗ್ದಾಳಿ ಮುಂದುವರಿಸಿದರು.

    ವೇದಿಕೆ ಖಾಲಿ: ಇದ್ದಕ್ಕಿದ್ದಂತೆ ಬದಲಾದ ಸನ್ನಿವೇಶದಿಂದ ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಜನರು ಗೊಂದಲಗೊಂಡರು. ಸಚಿವರು ವೇದಿಕೆಯಿಂದ ನಿರ್ಗಮಿಸುತ್ತಿದ್ದಂತೆ ವೇದಿಕೆಯಲ್ಲಿದ್ದ ಅಧಿಕಾರಿಗಳು ಜಾಗ ಖಾಲಿ ಮಾಡಿದರು. ಹಾಗೆಯೇ ಸಚಿವರ ಬೆಂಬಲಿಗರು ಹಾಗೂ ಸಾರ್ವಜನಿಕರು ಜಾಗ ತೆರವು ಮಾಡಿದ್ದರಿಂದ ಕಾರ್ಯಕ್ರಮ ಮೊಟಕುಗೊಳ್ಳುವಂತಾಯಿತು. ಈ ವೇಳೆ ಶಾಸಕ ಹಾಗೂ ಸಚಿವರ ಬೆಂಬಲಿಗರು ಒಬ್ಬರ ಪರ ಮತ್ತೊಬ್ಬರು ಧಿಕ್ಕಾರ ಕೂಗಿ ಗದ್ದಲ ಸೃಷ್ಟಿಸಿದರು.

    ಭಿಕ್ಷೆ ಬೇಡುತ್ತಿದ್ದ ಹತ್ತು ವರ್ಷದ ಬಾಲಕ ಈಗ ಕೋಟ್ಯಧಿಪತಿ!; ಆಗಿದ್ದು ಹೇಗೆ?

    ದೇವಸ್ಥಾನಕ್ಕೆ 1 ಲಕ್ಷ ರೂ. ದೇಣಿಗೆಯಾಗಿ ನೀಡಿದ ಭಿಕ್ಷುಕಿ; 20 ವರ್ಷಗಳಿಂದ ಅದೇ ದೇವಳದ ಮುಂದೆ ಭಿಕ್ಷೆ ಬೇಡುತ್ತಿದ್ದ ವೃದ್ಧೆ

    15 ದಿನಗಳ ಹಿಂದೆ ಜನಿಸಿದ್ದ ಮಗುವಿನ ತಂದೆಯ ದುರಂತ ಸಾವು; ಈ ಹಿಂದೆ ಒಬ್ಬ ಸತ್ತಿದ್ದ ಬಾವಿಗೆ ಮತ್ತೊಬ್ಬ ಬಲಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts