More

    ದೇವಸ್ಥಾನಕ್ಕೆ 1 ಲಕ್ಷ ರೂ. ದೇಣಿಗೆಯಾಗಿ ನೀಡಿದ ಭಿಕ್ಷುಕಿ; 20 ವರ್ಷಗಳಿಂದ ಅದೇ ದೇವಳದ ಮುಂದೆ ಭಿಕ್ಷೆ ಬೇಡುತ್ತಿದ್ದ ವೃದ್ಧೆ

    ಒಡಿಶಾ: ಉಡುಪಿ ಜಿಲ್ಲೆಯ ಕುಂದಾಪುರ ಸಮೀಪದ ಸಾಲಿಗ್ರಾಮ ದೇವಸ್ಥಾನದ ಮುಂದೆ ಭಿಕ್ಷೆ ಬೇಡಿ 1 ಲಕ್ಷ ರೂ. ಮೊತ್ತವನ್ನು ಅದೇ ದೇವಸ್ಥಾನದ ಅನ್ನದಾನಕ್ಕೆ ಅಶ್ವತ್ಥಮ್ಮ ಎಂಬಾಕೆ ನೀಡಿದ್ದರು. ಅಂಥದ್ದೇ ಇನ್ನೊಂದು ಪ್ರಕರಣ ನಡೆದಿದ್ದು, ಇಲ್ಲೊಬ್ಬರು ಭಿಕ್ಷುಕಿ ತನ್ನ ಉಳಿತಾಯದ 1 ಲಕ್ಷ ರೂ. ಮೊತ್ತವನ್ನು ದೇವರಿಗೆ ದೇಣಿಗೆಯಾಗಿ ನೀಡಿದ್ದಾರೆ.

    ಒಡಿಶಾದ ಕಂಧಮಾಲ್ ಜಿಲ್ಲೆಯ ಫುಲ್ಬಾನಿ ಜಗನ್ನಾಥ ದೇವಸ್ಥಾನದ ಎದುರು 2 ದಶಕಗಳಿಂದ ಭಿಕ್ಷೆ ಬೇಡುತ್ತಿದ್ದ 60 ವರ್ಷದ ತುಲಾ ಬೆಹೆರಾ ಎಂಬಾಕೆ ಅದೇ ದೇವಸ್ಥಾನಕ್ಕೆ ದೇಣಿಗೆಯಾಗಿ 1 ಲಕ್ಷ ರೂ. ನೀಡಿದ್ದಾರೆ. ವಿಧವೆಯಾಗಿರುವ ಇವರು ಫುಲ್ಬಾನಿಯಲ್ಲಿ ನೆಲೆಸಿದ್ದು, ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಸುನಾಸಿರ್ ಮೊಹಪಾತ್ರ ಮತ್ತಿತರಿಗೆ ತಮ್ಮ ಉಳಿತಾಯದ ಹಣವನ್ನು ಹಸ್ತಾಂತರಿಸುವ ಮೂಲಕ ದೇವರಿಗೆ ದೇಣಿಗೆಯಾಗಿ ನೀಡಿದರು.

    ಕಟಕ್​ ಮೂಲದ ಈಕೆ ಫುಲ್ಬಾನಿಯಲ್ಲಿ ನೆಲೆಸಿದ್ದು ಇಲ್ಲಿನ ಪ್ರಫುಲ್ಲ ಬೆಹೆರಾ ಎಂಬವರನ್ನು ಪ್ರೀತಿಸಿ ಮದುವೆಯಾಗಿದ್ದರು. ಅವರ ಅಗಲಿಕೆ ಬಳಿಕ ಅಲ್ಲಿ ಇಲ್ಲಿ ಕೆಲಸ ಮಾಡಿಕೊಂಡಿದ್ದ ಇವರು, ನಂತರ ಜೀವನಕ್ಕೆ ಕಷ್ಟವಾಗಿ ಜಗನ್ನಾಥ ದೇವಸ್ಥಾನದ ಮುಂದೆ ಭಿಕ್ಷೆ ಬೇಡಲಾರಂಭಿಸಿದ್ದರು. ದಿನಾ ಭಿಕ್ಷೆ ಬೇಡಿದ ಹಣದಲ್ಲಿ ಒಂದಷ್ಟನ್ನು ಪೋಸ್ಟ್ ಬ್ಯಾಂಕ್ ಖಾತೆಗೆ ಹಾಕುತ್ತಿದ್ದ. ಆ ಮೊತ್ತ 1 ಲಕ್ಷ ರೂ. ಆಗಿದೆ ಎಂದು ಪೋಸ್ಟ್ ಆಫೀಸ್​ನವರು ತಿಳಿಸಿದರು. ಜೀವನದ ಕೊನೆಯ ಹಂತದಲ್ಲಿ ಇರುವ ನಾನು ಆ ಹಣ ಇಟ್ಟುಕೊಂಡು ಏನು ಮಾಡಲಿ? ಅದಕ್ಕೆ ದೇವರಿಗೆ ದೇಣಿಗೆಯಾಗಿ ನೀಡಿದ್ದೇನೆ ಎಂದರು.

    ಆಕೆ ತಮ್ಮನ್ನು ಭೇಟಿಯಾದಾಗ ಮೊದಲು ಹಣ ಸ್ವೀಕರಿಸಲು ಹಿಂಜರಿಕೆ ಆಯಿತು, ಆದರೆ ಆಕೆ ಒತ್ತಾಯಪೂರ್ವಕವಾಗಿ ದೇವರಿಗೆ ದೇಣಿಗೆ ನೀಡಿದ್ದರಿಂದ ಸ್ವೀಕರಿಸಲಾಯಿತು ಎಂದು ದೇವಸ್ಥಾನದ ಆಡಳಿತ ಮಂಡಳಿಯವರು ತಿಳಿಸಿದ್ದಾರೆ. –ಏಜೆನ್ಸೀಸ್

    26ನೇ ಬಾರಿ ಶಬರಿಮಲೆಗೆ ಹೊರಟ ದಾನಿ, ಭಿಕ್ಷುಕಿ ಅಜ್ಜಿ

    ಭಿಕ್ಷೆ ಬೇಡಿ ದೇವತಾ ಕಾರ್ಯಕ್ಕೆ ಸಾವಿರಾರು ರೂಪಾಯಿ ಕೊಟ್ಟ ಅಜ್ಜಿ!

    ಭಿಕ್ಷೆ ಬೇಡಿ ಗಳಿಸಿದ 55 ಲಕ್ಷ ರೂ. ದಾನ ಮಾಡಿದ ಭಿಕ್ಷುಕ! ಇವರ ಬಗ್ಗೆ ತಿಳಿದ್ರೆ ನಿಜಕ್ಕೂ ಹೆಮ್ಮೆ ಪಡ್ತೀರಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts