More

    26ನೇ ಬಾರಿ ಶಬರಿಮಲೆಗೆ ಹೊರಟ ದಾನಿ, ಭಿಕ್ಷುಕಿ ಅಜ್ಜಿ

    ಕೋಟ: ಕಳೆದ ವಾರ ಸಾಲಿಗ್ರಾಮ ದೇವಳದ ಅನ್ನದಾನಕ್ಕೆ ಭಿಕ್ಷಾಟನೆ ಮಾಡಿ ಸಂಗ್ರಹಿಸಿದ್ದ 1 ಲಕ್ಷ ರೂ. ನೀಡಿದ್ದ ಅಜ್ಜಿ ಅಶ್ವತ್ಥಮ್ಮ ವ್ರತಾನುಷ್ಠಾನದೊಂದಿಗೆ 26ನೇ ಬಾರಿ ಶ್ರೀ ಶಬರಿಮಲೆ ಕ್ಷೇತ್ರಕ್ಕೆ ಯಾತ್ರೆ ಹೊರಟಿದ್ದಾರೆ.

    ಮಂಗಳವಾರ ಶ್ರೀ ಗುರುನರಸಿಂಹನ ಸನ್ನಿಧಿಯಲ್ಲಿ ಪೊಳಲಿಯ ನಾಗೇಶ ಗುರುಸ್ವಾಮಿ ನೇತೃತ್ವದಲ್ಲಿ ಇರುಮುಡಿ ಕಟ್ಟಿ ಅನ್ನದಾನ ಪೂರೈಸಿ ಶಬರಿಮಲೆ ಯಾತ್ರೆ ಹೊರಟಿದ್ದಾರೆ. ಸಾಲಿಗ್ರಾಮ ಶ್ರೀ ಗುರುನರಸಿಂಹ ದೇವಳದ ಅಧ್ಯಕ್ಷ ಕೆ.ಅನಂತಪದ್ಮನಾಭ ಐತಾಳ್ ಹಾಗೂ ಮಯ್ಯ ಟಿಫಿನ್ ಮಾಲೀಕ ರಾಫವೇಂದ್ರ ಮಯ್ಯ ಸಮ್ಮುಖದಲ್ಲಿ ಅಶ್ವಥಮ್ಮ ಇರುಮುಡಿ ಕಟ್ಟುವ ಕಾರ್ಯ ನಡೆಸಿದರು.

    26 ವರ್ಷಗಳಿಂದ ವಿವಿಧ ಕ್ಷೇತ್ರಗಳಿಗೆ ದಾನಗೈದು ಶಬರಿಮಲೆ ಯಾತ್ರೆ ಕೈಗೊಂಡಿದ್ದು, ಅದರಂತೆ ತಾನು ಭಿಕ್ಷಾಟನೆ ಮಾಡಿ ಸಂಗ್ರಹಿಸಿದ ಹಣವನ್ನು ಉಡುಪಿ, ದಕ್ಷಿಣಕನ್ನಡ ಸೇರಿದಂತೆ ಹೊರರಾಜ್ಯ ಕೇರಳದ ಅಯ್ಯಪ್ಪನ ಸನ್ನಿಧಾನಕ್ಕೂ ಲಕ್ಷ ರೂ. ನೀಡಿ ಮನೆಮಾತಾಗಿದ್ದಾರೆ.

    ಅಯ್ಯಪ್ಪನ ಕ್ಷೇತ್ರ ಸಂದರ್ಶನಕ್ಕೆ ಹೊರಟಿರುವ ಅಶ್ವಥಮ್ಮನಿಗೆ ಗುರುನರಸಿಂಹ, ಆಂಜನೇಯ ಶ್ರೇಯಸ್ಸನ್ನು ಉಂಟುಮಾಡಲಿ ಎಂದು ಸಾಲಿಗ್ರಾಮ ದೇವಳ ಆಡಳಿತ ಮಂಡಳಿ ಅಧ್ಯಕ್ಷ ಕೆ.ಅನಂತಪದ್ಮನಾಭ ಐತಾಳ್ ಆಡಳಿತ ಹಾರೈಸಿದ್ದಾರೆ.

    ಚಳಿಯೆಂದು 500 ರೂಪಾಯಿಯ ನೂರಾರು ನೋಟು ಸುಟ್ಟ! ಕಸದ ರಾಶಿಯ ಮೇಲೆ ನೆಮ್ಮದಿಯಿಂದ ಮಲಗಿದ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts