More

    15 ದಿನಗಳ ಹಿಂದೆ ಜನಿಸಿದ್ದ ಮಗುವಿನ ತಂದೆಯ ದುರಂತ ಸಾವು; ಈ ಹಿಂದೆ ಒಬ್ಬ ಸತ್ತಿದ್ದ ಬಾವಿಗೆ ಮತ್ತೊಬ್ಬ ಬಲಿ

    ಬೆಂಗಳೂರು: ಬರೀ ಹದಿನೈದು ದಿನಗಳ ಹಿಂದಷ್ಟೇ ಜನಿಸಿದ್ದ ಮಗುವಿನ ತಂದೆ ಸಾವಿಗೀಡಾಗಿದ್ದಾನೆ. ದುರಂತವೊಂದರಲ್ಲಿ ಕಾರ್ಮಿಕನೊಬ್ಬ ಬಾವಿಗೆ ಬಿದ್ದು ಸಾವಿಗೀಡಾದ್ದರಿಂದ ಮಗುವಿನ ಎದುರಲ್ಲೇ ಸಂಬಂಧಿಕರು ಆಕ್ರಂದನ ವ್ಯಕ್ತಪಡಿಸುವಂತಾಗಿದೆ. ಈ ಹಿಂದೆ ವ್ಯಕ್ತಿಯೊಬ್ಬ ಸತ್ತಿದ್ದ ಬಾವಿಗೇ ಈ ಯುವಕ ಬಲಿಯಾಗಿದ್ದಾನೆ.

    ರಾಜಧಾನಿ ಬೆಂಗಳೂರಿನ ಡಿ.ಜೆ.ಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ. 26 ವರ್ಷದ ಯುವಕ ಶಿವು ಎಂಬಾತ ಸಾವಿಗೀಡಾದವ. ಈತ ಬಾವಿಗೆ ಗ್ರಿಲ್ ಅಳವಡಿಸುವ ವೇಳೆ ಈ ದುರಂತ ಸಂಭವಿಸಿದೆ. ವೆಲ್ಡರ್​ ವೃತ್ತಿಯ ಈತ ಯಾವುದೇ ಸುರಕ್ಷಾ ಕ್ರಮಗಳ ಅನುಸರಿಸದೆ ಕೆಲಸ ನಿರ್ವಹಿಸಿದ್ದರಿಂದ ಅವಘಡ ಸಂಭವಿಸಿದೆ ಎನ್ನಲಾಗಿದೆ.

    ಹದಿನೈದು ದಿನಗಳ ಹಿಂದಷ್ಟೇ ಶಿವು ಪತ್ನಿ ಹೆರಿಗೆಯಾಗಿದ್ದು, ನವಜಾತ ಶಿಶುವಿನ ಎದುರಲ್ಲೇ ಸಂಬಂಧಿಕರು ರೋದಿಸುವಂತಾಗಿತ್ತು. ಡಿ.ಜೆ. ಹಳ್ಳಿಯ ಈ ಬಾವಿಯಲ್ಲಿ ಜಾಲರಿ ರಿಪೇರಿ ಮಾಡುವಾಗ ವೆಲ್ಡರ್​ ಶಿವು ಬಾವಿಗೆ ಬಿದ್ದಿದ್ದಾನೆ. ಇದೇ ಬಾವಿಗೆ 2010ರಲ್ಲಿ ವ್ಯಕ್ತಿಯೊಬ್ಬ ಬಿದ್ದು ಸಾವಿಗೀಡಾಗಿದ್ದ. ಮನೆಯ ಪಕ್ಕದಲ್ಲಿಯೇ ಇದ್ದ ಬಾವಿಗೆ ಗ್ರಿಲ್ ಅಳವಡಿಕೆ ಕೆಲಸ ಮಾಡುತ್ತಿದ್ದಾಗ ಈ ಅವಘಡ ಸಂಭವಿಸಿದೆ.

    ‘ನಾನು ಜೀವಂತ ಇದ್ದೇನೆ, ಮಗ ನನ್ನನ್ನು ಕೊಂದಿಲ್ಲ’ ಎಂದ ಹಿರಿಯ ನಟಿ; ಪೊಲೀಸರಿಗೂ ದೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts