More

    ಆಧಾರ್ ಲಿಂಕ್ ಕಡ್ಡಾಯವಲ್ಲ, ಮತದಾನಕ್ಕೆ ಧಕ್ಕೆ ಇಲ್ಲ: ಸಂಸತ್​ನಲ್ಲಿ ಸಚಿವ ಕಿರಣ್ ರಿಜಿಜು ಸ್ಪಷ್ಟನೆ

    ನವದೆಹಲಿ: ಮತದಾರರ ಗುರುತಿನ ಚೀಟಿಗೆ ಆಧಾರ್ ಸಂಖ್ಯೆ ಜೋಡಣೆ ಮಾಡದಿದ್ದರೂ ಮತದಾರರ ಹೆಸರನ್ನು ಪಟ್ಟಿಯಿಂದ ಕೈಬಿಡುವುದಿಲ್ಲ. ಆಧಾರ್ ಸಂಖ್ಯೆ ಜೋಡಣೆ ಮಾಡುವುದು ಸಂಪೂರ್ಣವಾಗಿ ಐಚ್ಛಿಕ ಎಂದು ಸರ್ಕಾರ ಸಂಸತ್​ನಲ್ಲಿ ಶುಕ್ರವಾರ ಸ್ಪಷ್ಟಪಡಿಸಿದೆ. ಹಾಲಿ ಪಟ್ಟಿಯಲ್ಲಿರುವ ಮತ್ತು ಹೊಸದಾಗಿ ಸೇರುವ ಮತದಾರರಿಂದ ಆಧಾರ ಸಂಖ್ಯೆ ಪಡೆದುಕೊಳ್ಳಲು ಚುನಾವಣಾಧಿಕಾರಿಗೆ ಚುನಾವಣಾ ಕಾನೂನು ತಿದ್ದುಪಡಿ ಕಾಯ್ದೆ ಅನ್ವಯ ಚುನಾವಣಾ ಅಧಿಕಾರಿಗೆ ಅವಕಾಶ ಇದೆ. ಮತ್ತು ಇದು ಆಗಸ್ಟ್ 1ರಿಂದ ಜಾರಿಯೂ ಆಗಿದ್ದು, ನಮೂನೆ 6ಬಿಯಲ್ಲಿ ಆಧಾರ ದೃಢೀಕರಣವನ್ನು ನೀಡಬಹುದು. ಇದನ್ನು ವ್ಯಕ್ತಿಯ ಗುರುತಿನ ಸಾಬೀತಿಗಾಗಿ ಇದನ್ನು ಪಡೆಯಲಾಗುತ್ತದೆ. ಆದರೆ, ಇದು ಸ್ವಯಂಪ್ರೇರಿತ. ಕಡ್ಡಾಯವಲ್ಲ. ಆಧಾರ್ ಹಂಚಿಕೆ ನೀಡಿದ ಸಮ್ಮತಿಯನ್ನು ಹಿಂಪಡೆಯಲು ಅವಕಾಶ ಇಲ್ಲ ಎಂದು ಮತದಾರರ ಚೀಟಿ ಮತ್ತು ಆಧಾರ್ ಸಂಖ್ಯೆ ಕುರಿತ ಪ್ರಶ್ನೆಗೆ ಕಾನೂನು ಸಚಿವ ಕಿರಣ್ ರಿಜಿಜು ಲೋಕಸಭೆಗೆ ಉತ್ತರಿಸಿದರು.

    95 ಕೋಟಿ ಮತದಾರರ ಪೈಕಿ 54 ಕೋಟಿ ಮತದಾರರು ಈಗಾಗಲೇ ಆಧಾರ್ ಜೋಡಣೆ ಮಾಡಿದ್ದಾರೆ. ಮತದಾರರ ಚೀಟಿಗೆ ಆಧಾರ್ ಜೋಡಣೆಯು ಪ್ರಕ್ರಿಯೆ ಭಾಗವಷ್ಟೆ ಹೊರತು, ಚುನಾವಣಾ ಅಧಿಕಾರಿಗಳಿಗೆ ಆಧಾರ್ ಲಿಂಕ್ ಮಾಡುವ ಕುರಿತು ಯಾವುದೇ ಗುರಿಯನ್ನು ನೀಡಿಲ್ಲ. ಆಧಾರ್ ಡೇಟಾ ವಿಷಯದಲ್ಲಿ ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರದ (ಯುಐಡಿಎಐ) ಸೂಚನೆಯನ್ನು ಚುನಾವಣಾ ಆಯೋಗ ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದು, ಡೇಟಾಬೇಸ್​ನಲ್ಲಿ ಇದನ್ನು ಸಂಗ್ರಹಿಸಿಡುತ್ತಿಲ್ಲ. ಇದನ್ನು ಗುರುತಿನ ಉದ್ದೇಶಕ್ಕಾಗಿ ಬಳಸಲಾಗುತ್ತಿದೆಯೇ ಹೊರತು, ಮತದಾರರ ವೈಯಕ್ತಿಕ ಮಾಹಿತಿಗೆ ಬಾಧಕ ಇಲ್ಲ ಎಂದು ಅವರು ಹೇಳಿದರು. ಸೇವಾ ಕಾಯ್ದೆ ಅನ್ವಯ ಸಾಮಾಜಿಕ ಭದ್ರತಾ ಯೋಜನೆಗಳ ಫಲಾನುಭವಿಗಳು ಆಧಾರ ಸಂಖ್ಯೆ ನೀಡುವುದು ಕಡ್ಡಾಯ. ಈ ರೀತಿ ಪಡೆದ ಆಧಾರ್ ಮಾಹಿತಿಯನ್ನು ಆಧಾರ್ ಡೇಟಾ ವಾಲ್ಟ್​ನಲ್ಲಿ ಸಂಗ್ರಹಿಸಲಾಗಿದೆ.

    ಮತದಾನೋತ್ತರ ಸಮೀಕ್ಷೆ ನಿಷೇಧ ಇಲ್ಲ: ಮತದಾನೋತ್ತರ ಸಮೀಕ್ಷೆಯನ್ನು ನಿಷೇಧಿಸುವಂತಹ ಪ್ರಸ್ತಾವನೆ ಇಲ್ಲ. ಆದರೆ, ಚುನಾವಣೆಗೆ 48 ತಾಸು ಇರುವಾಗ ಮತದಾನಪೂರ್ವ ಸಮೀಕ್ಷೆಯನ್ನು ಪ್ರಕಟಿಸುವಂತಿಲ್ಲ ಎಂದು ಮಾದರಿ ನೀತಿ ಸಂಹಿತೆಯಲ್ಲಿ ಚುನಾವಣಾ ಆಯೋಗ ಹೇಳಿದೆ ಎಂದು ಸಚಿವ ಕಿರಣ್ ರಿಜಿಜು ತಿಳಿಸಿದರು. ಚುನಾವಣಾ ವೇಳಾಪಟ್ಟಿ ಘೋಷಣೆ ಮತ್ತು ಅಂತಿಮ ಹಂತದ ಮತದಾನದ ಮಧ್ಯೆ ಮತದಾರರ ಆಶಯವನ್ನು ಬಹಿರಂಗ ಪಡಿಸುವಂತಹ ಸಮೀಕ್ಷೆಗಳ ವರದಿಯನ್ನು ಪ್ರಕಟಿಸದಂತಹ ಕಾನೂನು ಅಗತ್ಯ ಎಂದು ಆಯೋಗ ಒತ್ತಾಯಿಸಿದೆ.

    ಸಂಸತ್​ಗೆ ಸರ್ಕಾರದ ಉತ್ತರ

    • ಮೌಲಾನಾ ಆಜಾದ್ ಹೆಸರಿನ ಫೆಲೋಶಿಪ್ ರದ್ದತಿಯ ಹಿಂದೆ ಬಿಜೆಪಿಯ ಮುಸ್ಲಿಂ ವಿರೋಧಿ ನೀತಿ ಇದೆ ಎಂದು ಆರೋಪಿಸಿದ ಕಾಂಗ್ರೆಸ್
    • ರೈತರ ಸಮಸ್ಯೆ ಬಗೆಹರಿಸುವ ಸೋಗು ಹಾಕುತ್ತಿರುವ ಕಾಂಗ್ರೆಸ್ ಸುಳ್ಳಿನ ರಾಜಕೀಯ ಮಾಡುತ್ತಿದೆ ಎಂದು ಬಿಜೆಪಿ ಆರೋಪ
    • ಬಿಸಿಜಿ ಲಸಿಕೆಯು ಮಕ್ಕಳನ್ನು ಕ್ಷಯರೋಗದಿಂದ ರಕ್ಷಣೆ ನೀಡುತ್ತದೆ. ಆದರೆ, ಕಾಲಾಂತರದಲ್ಲಿ ಇದರ ಪರಿಣಾಮವೂ ಕುಗ್ಗುತ್ತದೆ ಎಂದು ಸರ್ಕಾರ ಮಾಹಿತಿ
    • ದೆಹಲಿ ಏಮ್ಸ್​ನ ಎಲ್ಲ ಡೇಟಾಗಳು ಪುನರ್​ಪ್ರಾಪ್ತಿಯಾಗಿದೆ. ಎರಡು ವಾರದ ಹಿಂದ ಏಮ್್ಸ ಸರ್ವರ್ ಮೇಲೆ ಉಗ್ರರು ಕನ್ನಹಾಕಿದರು.

    ರಾಜ್ಯಸಭೆ ಕಲಾಪ ಮುಂದೂಡಿಕೆ: ತವಾಂಗ್​ನ ಗಡಿ ಬಳಿ ಭಾರತ ಮತ್ತು ಚೀನಾ ಸೈನಿಕರ ಘರ್ಷಣೆ ಸಂಬಂಧವಾಗಿ ನಿಯಮ 267ರ ಅಡಿ ಚರ್ಚೆಗೆ ಅವಕಾಶ ನೀಡಬೇಕು ಎಂಬ ಮನವಿಗೆ ಸರ್ಕಾರ ಸ್ಪಂದಿಸದ ಕಾರಣ ಸಿಟ್ಟಿಗೆದ್ದ ಪ್ರತಿಪಕ್ಷಗಳ ನಾಯಕರು ರಾಜ್ಯಸಭೆಯ ಕಲಾಪದಿಂದ ಹೊರನಡೆದರು. ಶುಕ್ರವಾರ ಕೂಡ ಎಂಟು ಹೊಸ ದೂರುಗಳು ದಾಖಲಾಗಿವೆ. 267ರಡಿ ನೀಡಿದ ನೋಟಿಸ್ ಅನ್ನು ಸಭಾಧ್ಯಕ್ಷರು ಅಂಗೀಕರಿಸಿದರೆ. ಸದನದ ಇತರ ಕಲಾಪವನ್ನು ಬದಿಗಟ್ಟು ಇಡೀ ದಿನ ಈ ವಿಷಯ ಕುರಿತೇ ರ್ಚಚಿಸಬೇಕಾಗುತ್ತದೆ.

    ಮಾತನಾಡಲು ಬಿಡುತ್ತಿಲ್ಲ ಎಂದ ಖರ್ಗೆ: ರಾಜ್ಯಸಭೆಯ ಅಧ್ಯಕ್ಷರಾದ ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಅವರ ನಿರ್ದೇಶನವಿದ್ದರೂ ಸದನದಲ್ಲಿ ನನಗೆ ಮಾತನಾಡಲು ಅವಕಾಶ ನೀಡುತ್ತಿಲ್ಲ ಎಂದು ಪ್ರತಿಪಕ್ಷದ ನಾಯಕ ಎಂ. ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದರು. ಡಿ. 9ರಂದು ತವಾಂಗ್ ಗಡಿಯಲ್ಲಿ ಚೀನಾ ಅತಿಕ್ರಮಣದ ಕುರಿತು ಮಾತನಾಡಲು ಮೂರು ದಿನದಿಂದ ಬಯಸುತ್ತಿರುವೆ. ಆದರೆ, ಉಪಸಭಾಧ್ಯಕ್ಷ ಹರಿವಂಶ ಇದಕ್ಕೆ ಅವಕಾಶ ನೀಡಲಿಲ್ಲ. ಯಾವುದೇ ನೋಟಿಸ್ ನೀಡಿಲ್ಲವೆಂದು ಅವರು ಹೇಳಿದರು. ಆದರೆ, ನಾನು ಮತ್ತು ಇನ್ನಿಬರು ಹಿರಿಯ ಸಂಸದರಿಗೆ ಯಾವುದೇ ವಿಷಯದ ಬಗ್ಗೆ ಯಾವುದೇ ಸಮಯದಲ್ಲಿ ಮಾತನಾಡಲು ಸಭಾಧ್ಯಕ್ಷರ ಸೂಚನೆ ಇದೆ ಎಂದು ಖರ್ಗೆ ಮತ್ತೆ ಹೇಳಿದರು.

    ಎನ್​ಆರ್​ಐ ಮತದಾನ ಪರಿಶೀಲನೆಯಲ್ಲಿ ಇಲ್ಲ

    ಅನಿವಾಸಿ ಭಾರತೀಯರ (ಎನ್​ಆರ್​ಐ) ಪರವಾಗಿ ಅವರು ನಿಯೋಜಿಸಿದ ವ್ಯಕ್ತಿ ಮತದಾನ ಮಾಡುವುದಕ್ಕೆ (ಪ್ರಾಕ್ಸಿ ವೋಟಿಂಗ್) ಅವಕಾಶ ನೀಡುವ ಯಾವುದೇ ಪ್ರಸ್ತಾವ ಸರ್ಕಾರದ ಪರಿಶೀಲನೆಯಲ್ಲಿ ಇಲ್ಲ ಎಂದು ಸರ್ಕಾರ ಲೋಕಸಭೆಯಲ್ಲಿ ತಿಳಿಸಿದೆ. 2018ರ ಆಗಸ್ಟ್ ನಲ್ಲಿ ಸಾಗರೋತ್ತರ ನಿವಾಸಿಗಳಾದ ಭಾರತೀಯರ ಪರವಾಗಿ ಮತದಾನ ಮಾಡಲು ಅವಕಾಶ ಕಲ್ಪಿಸುವ ಮಸೂದೆಯನ್ನು ಲೋಕಸಭೆ ಅಂಗೀಕರಿಸಿತ್ತು. ಆದರೆ, ಈ ಮಸೂದೆ ರಾಜ್ಯಸಭೆಯಲ್ಲಿ ಮಂಡನೆ ಆಗಲಿಲ್ಲ. ಆದ್ದರಿಂದ ಸದ್ಯೋಭವಿಷ್ಯದಲ್ಲಿ ಪ್ರಾಕ್ಸಿ ಮತದಾನದ ಬಗ್ಗೆ ಸರ್ಕಾರದ ಮುಂದೆ ಯಾವುದೇ ಪ್ರಸ್ತಾವ ಇಲ್ಲ ಎಂದು ಕಾನೂನು ಸಚಿವ ಕಿರಣ್ ರಿಜಿಜು ತಿಳಿಸಿದರು. ಎನ್​ಆರ್​ಐಗಳಿಗೆ ವಿದ್ಯುನ್ಮಾನ ಮೂಲಕ ಅಂಚೆ ಮತ ಪತ್ರ (ಇಟಿಪಿಬಿಎಸ್)ದ ಮುಖೇನ ಮತದಾನ ಮಾಡಲು ಅವಕಾಶ ಕಲ್ಪಿಸಬೇಕು ಎಂದು ಚುನಾವಣಾ ಆಯೋಗ ಪ್ರಸ್ತಾವನೆ ಸಲ್ಲಿಸಿತ್ತು. ಇದಕ್ಕೆ ಚುನಾವಣಾ ಕಾನೂನಿನಲ್ಲಿ ಅಗತ್ಯ ಬದಲಾವಣೆಗಳು ಆಗಬೇಕಿದ್ದು, ಸರ್ಕಾರ ಈ ಕುರಿತು ನಿರ್ಧಾರ ಕೈಗೊಂಡಲ್ಲ ಎಂದು ಸ್ಪಷ್ಟ ಪಡಿಸಿದರು. ಹಾಲಿ ಎನ್​ಆರ್​ಐ ಮತದಾರರು ತಮ್ಮ ಹೆಸರಿರುವ ಕ್ಷೇತ್ರದಲ್ಲಿ ಭೌತಿಕವಾಗಿ ಮತದಾನ ಮಾಡಬಹುದಾಗಿದೆ.

    ‘ನಾನು ಜೀವಂತ ಇದ್ದೇನೆ, ಮಗ ನನ್ನನ್ನು ಕೊಂದಿಲ್ಲ’ ಎಂದ ಹಿರಿಯ ನಟಿ; ಪೊಲೀಸರಿಗೂ ದೂರು

    ‘ಸತ್ತವಳು’ 6 ವರ್ಷಗಳ ಬಳಿಕ 2ನೇ ಗಂಡನೊಂದಿಗೆ ಪತ್ತೆ!; ಈಕೆಯ ಕೊಲೆ ಪ್ರಕರಣ ಭೇದಿಸಿದ್ದ ಪೊಲೀಸರಿಗೆ ಸಿಕ್ಕಿತ್ತು ಬಹುಮಾನ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts