More

    15 ವರ್ಷ ಮೀರಿದ 13 ಲಕ್ಷ ಹಳೆಯ ವಾಹನಗಳು ಗುಜರಿಗೆ: ನಿಮ್ಮದೂ ಇದೆಯಾ? ಚೆಕ್ ಮಾಡ್ಕೊಳ್ಳಿ!

    ಬೆಂಗಳೂರು: ಸ್ಕ್ರಾಪಿಂಗ್ ಪಾಲಿಸಿ ಜಾರಿ ಬಗ್ಗೆ ಕೇಂದ್ರ ಬಜೆಟ್‌ನಲ್ಲಿ ಸೋಮವಾರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ೋಷಿಸಿದ್ದು, ಅದರ ವ್ಯಾಪ್ತಿಗೆ ರಾಜ್ಯದಲ್ಲಿರುವ 13 ಲಕ್ಷ ವಾಹನಗಳು ಒಳಪಡಲಿವೆ ಎಂಬುದು ಗಮನಾರ್ಹ ಅಂಶ. ಬಜೆಟ್‌ನಲ್ಲಿ ತಿಳಿಸಿರುವಂತೆ ವಾಹನಗಳನ್ನು 2 ಬಗೆಯಲ್ಲಿ ವಿಂಗಡಿಸಿ ಸ್ಕ್ರಾಪಿಂಗ್ ಪಾಲಿಸಿ ವ್ಯಾಪ್ತಿಗೆ ತರಲಾಗಿದೆ. ವೈಯಕ್ತಿಕ ಬಳಕೆ ಮಾಡುತ್ತಿರುವ ವಾಹನಗಳು 20 ವರ್ಷ ದಾಟಿದ್ದರೆ ಹಾಗೂ ವಾಣಿಜ್ಯ ಉದ್ದೇಶಕ್ಕೆ ಬಳಸಲಾಗುವ ವಾಹನಗಳ ಜೀವಿತಾವಧಿಯನ್ನು 15 ವರ್ಷಕ್ಕೆ ನಿಗದಿ ಮಾಡಲಾಗಿದೆ. ಅಷ್ಟು ವರ್ಷ ದಾಟಿದ ವಾಹನಗಳನ್ನು ಸಾರಿಗೆ ಇಲಾಖೆ ಸೂಚನೆ ಮೇರೆಗೆ ಸ್ಕ್ರಾಪ್ ಮಾಡಬೇಕಿದೆ.

    ರಾಜ್ಯದಲ್ಲಿ ಸಾರಿಗೆ ಇಲಾಖೆ 2019ರ ಮಾರ್ಚ್‌ವರೆಗೆ ಗುರುತಿಸಿರುವಂತೆ 47,49,996 ವಾಹನಗಳು 15 ವರ್ಷ ಮೀರಿವೆ. ಅದರಲ್ಲಿ ಜನರಿಗೆ ಸಾರಿಗೆ ಸೇವೆ ನೀಡದ ಸಾರಿಗೆಯೇತರ ವಾಹನಗಳೇ ಹೆಚ್ಚಿವೆ. ಅವುಗಳಲ್ಲಿ 43.20 ಲಕ್ಷ ಬೈಕ್, ಕಾರು, ಜೀಪ್, ಟ್ಯ್ರಾಕ್ಟರ್, ಟ್ರೈಲರ್ಸ್‌, ಕಟ್ಟಡ ನಿರ್ಮಾಣ ವಾಹನಗಳು ಸೇರಿವೆ. ಅದರಲ್ಲಿ 34.81 ಲಕ್ಷ ದ್ವಿಚಕ್ರ ವಾಹನಗಳಿವೆ. ಇದನ್ನೂ ಓದಿರಿ ಶೃಂಗೇರಿಯಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಮೇಲೆ 30ಕ್ಕೂ ಹೆಚ್ಚು ಜನರಿಂದ ಸಾಮೂಹಿಕ ಅತ್ಯಾಚಾರ!

    ಉಳಿದಂತೆ 6.52 ಲಕ್ಷ ಕಾರುಗಳು, ಸಾರಿಗೆಯೇತರ ವಾಹನಗಳಾದ ಮಲ್ಟಿಆ್ಯಕ್ಸಲ್ ವಾಹನ, ಟ್ರಕ್, ಲಾರಿಗಳು 1.25 ಲಕ್ಷ, ಲಘು ಗೂಡ್ಸ್ ವಾಹನಗಳು 1.54 ಲಕ್ಷ, ಸ್ಟೇಜ್ ಕ್ಯಾರೇಜ್, ಕಾಂಟ್ರ್ಯಾಕ್ಟ್ ಕ್ಯಾರೇಜ್, ಶಿಕ್ಷಣ ಸಂಸ್ಥೆಗಳ ಬಸ್‌ಗಳು ಸೇರಿ ಇನ್ನಿತರ ವಾಹನಗಳು 29,560, ಮೋಟಾರ್ ಕ್ಯಾಬ್, ಮ್ಯಾಕ್ಸಿ ಕ್ಯಾಬ್‌ಗಳು 69,123, ಆಂಬ್ಯುಲೆನ್ಸ್ 1,706, ಮೂರು ಮತ್ತು ಆರು ಆಸನದ ವಾಹನಗಳು 1.26 ಲಕ್ಷ ಹಾಗೂ ಇನ್ನಿತರ ವಾಹನಗಳು 15,809 ವಾಹನಗಳಿವೆ. ಒಟ್ಟಾರೆ 4.83 ಲಕ್ಷ ಸಾರಿಗೆ ವಾಹನಗಳು 15 ವರ್ಷ ಮೀರಿವೆ. 13 ಲಕ್ಷ ವಾಹನಗಳು ಕೇಂದ್ರದ ಸ್ಕ್ರಾಪಿಂಗ್ ಪಾಲಿಸಿ ವ್ಯಾಪ್ತಿಗೆ ಬರಲಿವೆ.

    ವಾಯುಮಾಲಿನ್ಯ ತಡೆಯುವ ನಿಟ್ಟಿನಲ್ಲಿ ಹಳೆಯ ವಾಹನಗಳನ್ನು ಗುಜರಿಗೆ ಹಾಕುವಂತೆ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ ಈ ಹಿಂದೆಯೇ ಆದೇಶಿಸಿತ್ತು. ಅದಕ್ಕೆ ತಕ್ಕಂತೆ ಕೇಂದ್ರ ಸರ್ಕಾರ ಸ್ಕ್ರಾಪಿಂಗ್ ಪಾಲಿಸಿ ರೂಪಿಸಿದೆ. ಅದರಂತೆ, ದ್ವಿಚಕ್ರ ವಾಹನ ಹೊರತುಪಡಿಸಿ 15ರಿಂದ 20 ವರ್ಷದ ವಾಹನಗಳೆಲ್ಲವೂ ಗುಜರಿಗೆ ಸೇರಬೇಕಿದೆ. ಆ ಮೂಲಕ ವಾಹನಗಳ ಸಾಮರ್ಥ್ಯ ಪ್ರಮಾಣ ಪತ್ರವನ್ನು ನವೀಕರಿಸಬಾರದು ಎಂದು ರಾಜ್ಯ ಸಾರಿಗೆ ಇಲಾಖೆಗಳಿಗೆ ಸೂಚಿಸಲಾಗುತ್ತದೆ.

    ಇದನ್ನೂ ಓದಿರಿ ಕೈ ಕೊಟ್ಟ ಪ್ರೇಯಸಿಯ ಬರ್ತ್​ ಡೇ ಪಾರ್ಟಿಗೆ ಮಾಜಿ ಲವರ್ ಎಂಟ್ರಿ! ನೋಡನೋಡುತ್ತಿದ್ದಂತೆ ನಡೆಯಿತು ದುರಂತ

    ಕೇಂದ್ರ ಸರ್ಕಾರ ರೂಪಿಸಿರುವ ಸ್ಕ್ರಾಪಿಂಗ್ ಪಾಲಿಸಿ ಪ್ರಕಾರ, ವಾಹನಗಳನ್ನು ಸ್ಕ್ರಾಪ್ ಮಾಡಲು ಬೇಕಾಗುವ ಯಂತ್ರಗಳನ್ನು ರಾಜ್ಯ ಸರ್ಕಾರ ಅಳವಡಿಸಲಿದೆ. ಬಳಿಕ 15 ವರ್ಷದ ಹಳೆಯ ವಾಹನಗಳನ್ನು ಗುರುತಿಸಿ, ಅವುಗಳ ಫಿಟ್ನೆಸ್ ಸರ್ಟಿಫಿಕೇಟ್ ರದ್ದು ಮಾಡಿ ವಶಕ್ಕೆ ಪಡೆಯಲಾಗುತ್ತದೆ. ಅವುಗಳನ್ನು ಸರ್ಕಾರ ನಿರ್ಮಿಸಿದ ಕೇಂದ್ರಗಳಲ್ಲಿ ಒಂದೊಂದೇ ಬಿಡಿಭಾಗವನ್ನು ಬೇರ್ಪಡಿಸಿ ಸ್ಕ್ರಾಪ್ ಮಾಡಲಾಗುತ್ತದೆ. ಹೀಗೆ ಸ್ಕ್ರಾಪ್ ಮಾಡುವಾಗ ವಾಹನಗಳ ಮೌಲ್ಯಮಾಪನ ಮಾಡಿ, ಆ ಮೊತ್ತವನ್ನು ವಾಹನ ಮಾಲೀಕರಿಗೆ ನೀಡಲಾಗುತ್ತದೆ.

    ಕೇಂದ್ರ ಬಜೆಟ್​: ಮನೆ ನಿರ್ಮಾಣದ ಕನಸುಳ್ಳವರಿಗೆ ಅಗ್ಗದ ಗೃಹಸಾಲ

    ಕೇಂದ್ರ ಬಜೆಟ್​: ಹಳೇ ವಾಹನಗಳಿಗೆ ಸ್ಕ್ರ್ಯಾಪಿಂಗ್​ ನೀತಿ ಜಾರಿ

    ಕೇಂದ್ರ ಬಜೆಟ್: 75 ವರ್ಷ ಮೇಲ್ಪಟ್ಟವರಿಗೆ ಆದಾಯ ತೆರಿಗೆಯಿಂದ ವಿನಾಯಿತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts