More

    ಸತ್ಯವನ್ನೂ ಮೀರಿಸುವಂತೆ ಸುಳ್ಳು ಹೇಳುವುದು ಈ ಸರ್ಕಾರದ ಅಭ್ಯಾಸವಾಗಿದೆ: ಮಲ್ಲಿಕಾರ್ಜುನ ಖರ್ಗೆ

    ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಫೆಬ್ರವರಿ 01ರಂದು ದಾಖಲೆಯ ಆರನೇ ಬಾರಿಗೆ ಬಜೆಟ್​ ಮಂಡಿಸಿದ್ದು, ಪ್ರಮುಖ ಘೋಷಣೆಗಳನ್ನು ಮಾಡಿದ್ಧಾರೆ. ಇನ್ನೂ ಈ ಕುರಿತು ಪ್ರತಿಕ್ರಿಯಿಸಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರತಿ ವರ್ಷದಂತೆ ಮೋದಿ ಸರ್ಕಾರದ ಮಧ್ಯಂತರ ಬಜೆಟ್ ಕೇವಲ ಬಣ್ಣಬಣ್ಣದ ಮಾತುಗಳ ಮಾಯಾಜಾಲವಾಗಿದೆ ಎಂದು ಹೇಳಿದ್ದಾರೆ.

    ಬಜೆಟ್​ನಲ್ಲಿ ಗಟ್ಟಿತನವಿಲ್ಲ, ದೊಡ್ಡದಾಗಿ ಮಾತನಾಡುವುದು, ಸತ್ಯವನ್ನೂ ಮೀರಿಸುವಂತೆ ಸುಳ್ಳು ಹೇಳುವುದು ಈ ಸರ್ಕಾರದ ಅಭ್ಯಾಸವಾಗಿದೆ ಎಂದು ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.

    ನಾನು ಬಜೆಟ್ ಭಾಷಣವನ್ನು ಕೇಳಿಸಿಕೊಂಡಿದ್ದೇನೆ. ಹಣಕಾಸು ಸಚಿವರು ಬಡವರು ಮತ್ತು ಮಧ್ಯಮ ವರ್ಗದವರಿಗಾಗಿ ಕೆಲವು ಹೊಸ ಯೋಜನೆಗಳನ್ನು ತರುತ್ತಾರೆ, ಅವರ ಸಂಕಷ್ಟಗಳಿಗೆ ಅಲ್ಲಿ ಒಂದಷ್ಟಾದರೂ ಪರಿಹಾರಗಳು ಇರುತ್ತವೆ ಎಂದು ಭಾವಿಸಿದ್ದೆ. ಆದರೆ ಈ ಬಜೆಟ್‌ನಲ್ಲಿ ಅಂಥದ್ದೇನೂ ಇಲ್ಲ. ಪ್ರತಿ ವರ್ಷದಂತೆ ಮೋದಿ ಸರ್ಕಾರದ ಮಧ್ಯಂತರ ಬಜೆಟ್ ಕೇವಲ ಬಣ್ಣಬಣ್ಣದ ಮಾತುಗಳ ಮಾಯಾಜಾಲವಾಗಿದೆ. ಬಜೆಟ್​ನಲ್ಲಿ ಟ್ಟಿತನವಿಲ್ಲ, ದೊಡ್ಡದಾಗಿ ಮಾತನಾಡುವುದು, ಸತ್ಯವನ್ನೂ ಮೀರಿಸುವಂತೆ ಸುಳ್ಳು ಹೇಳುವುದು ಈ ಸರ್ಕಾರದ ಅಭ್ಯಾಸವಾಗಿದೆ ಎಂದು ಕಿಡಿಕಾರಿದ್ದಾರೆ.

    ಇದನ್ನೂ ಓದಿ: BBKS10| ಕಿಚ್ಚನ ಕೊನೆ ಪಂಚಾಯಿತಿಗೆ ಸಿಕ್ಕ ಟಿಆರ್​ಪಿ ಎಷ್ಟು ಗೊತ್ತಾ?; ಇಲ್ಲಿದೆ ಪೂರ್ಣ ವಿವರ

    ಮೋದಿ ಸರ್ಕಾರ ಅಸ್ತಿತ್ವಕ್ಕೆ ಬಂದಾಗಿನಿಂದಲೂ ದೊಡ್ಡ ದೊಡ್ಡ ಕನಸುಗಳನ್ನು ತೋರಿಸಲಾಗುತ್ತಿದೆ. ಕೇವಲ ಹೆಸರುಗಳನ್ನು ಬದಲಾಯಿಸುವ ಮೂಲಕ ಯೋಜನೆಗಳನ್ನು ಪ್ರಾರಂಭಿಸಲಾಗುತ್ತದೆ. ಆದರೆ ಹಳೆಯ ಭರವಸೆಗಳು ಏನಾಯಿತು ಎಂದು ಹೇಳಲಾಗಿಲ್ಲ? ತೋರಿಸುತ್ತಿರುವ ಹೊಸ ಕನಸುಗಳು ಹೇಗೆ ಈಡೇರುತ್ತವೆ ಎಂದು ಪ್ರಶ್ನಿಸಿದ್ದಾರೆ.

    ವಾಸ್ತವವಾಗಿ, ಯಾವುದೇ ಬಜೆಟ್‌ನಲ್ಲಿ ಎರಡು ವಿವರಗಳಿರುತ್ತವೆ. ಒಂದು ಕಳೆದ ವರ್ಷದ ವಿವರಗಳು ಮತ್ತು ಇನ್ನೊಂದು ಮುಂಬರುವ ವರ್ಷದ ದೃಷ್ಟಿ. ಈ ಎರಡೂ ವಿಷಯಗಳು ಈ ಬಜೆಟ್‌ನಲ್ಲಿ ಕಾಣೆಯಾಗಿವೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts