More

    ನಿರ್ಮಲಾ ಸೀತಾರಾಮನ್​ ಮಂಡಿಸಿದ ಬಜೆಟ್​ ಬಾಟಲಿಯೂ ಹಳೇದು, ವೈನೂ ಹಳೆಯದ್ದು ಎನ್ನುವಂತಿದೆ: ರಾಜ್ಯ ಕಾಂಗ್ರೆಸ್

    ಬೆಂಗಳೂರು: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಫೆಬ್ರವರಿ 01ರಂದು ಮಧ್ಯಂತರ ಬಜೆಟ್ ಮಂಡಿಸಿದ್ದು, ಪ್ರಮುಖ ಘೋಷಣೆಗಳನ್ನು ಮಾಡಿದ್ಧಾರೆ. ಇನ್ನೂ ಈ ಕುರಿತು ಪ್ರತಿಕ್ರಿಯಿಸಿರುವ ರಾಜ್ಯ ಕಾಂಗ್ರೆಸ್​ ಘಟಕ ಕನ್ನಡಿಗರ ಬೆವರಿನ ಹಣವನ್ನು ಕನ್ನಡಿಗರಿಗೇ ಸಾಲವಾಗಿ ಕೊಡುವುದು ಯಾವ ಸೀಮೆಯ ಅರ್ಥ ಶಾಸ್ತ್ರ ಎಂದು ಪ್ರಶ್ನಿಸಿದೆ.

    ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಬರೆದುಕೊಂಡಿರುವ ಕಾಂಗ್ರೆಸ್​, ಹಿಂದಿನ ಬಜೆಟ್ಟನ್ನೇ ಇಂದು ಓದಿದ ನಿರ್ಮಲಾ ಸೀತಾರಾಮನ್​ ಅವರು ಕರ್ನಾಟಕದಿಂದ ಆಯ್ಕೆಯಾದ ಋಣಕ್ಕೆ ದ್ರೋಹ ಮಾಡಿದ್ದಾರೆ ಎಂದು ಕಿಡಿಕಾರಿದೆ.

    ಕರ್ನಾಟಕದಿಂದ ಅತಿ ಹೆಚ್ಚು ತೆರಿಗೆ ಸಂಗ್ರಹಿಸುವ ಒಕ್ಕೂಟ ಸರ್ಕಾರ ಮರಳಿ ಕರ್ನಾಟಕಕ್ಕೆ ಕೊಡುತ್ತಿರುವುದು ಚಿಪ್ಪು ಮಾತ್ರ. ಕನ್ನಡಿಗರ ಬೆವರಿನ ಹಣವನ್ನು ಕನ್ನಡಿಗರಿಗೇ ಸಾಲವಾಗಿ ಕೊಡುವುದು ಯಾವ ಸೀಮೆಯ ಅರ್ಥ ಶಾಸ್ತ್ರ. ಹಿಂದಿನ ಬಜೆಟ್ಟನ್ನೇ ಇಂದು ಓದಿದ ನಿರ್ಮಲಾ ಸೀತಾರಾಮನ್​ ಅವರು ಕರ್ನಾಟಕದಿಂದ ಆಯ್ಕೆಯಾದ ಋಣಕ್ಕೆ ದ್ರೋಹ ಮಾಡಿದ್ದಾರೆ.

    ಇದನ್ನೂ ಓದಿ: ಉದ್ಘಾಟನೆಯಾದ 11 ದಿನದಲ್ಲಿ ಬಾಲರಾಮನ ದರ್ಶನ ಪಡೆದ 25 ಲಕ್ಷಕ್ಕೂ ಅಧಿಕ ಭಕ್ತರು; ಸಂಗ್ರಹವಾದ ಕಾಣಿಕೆ ಎಷ್ಟು ಗೊತ್ತಾ?

    ಕೇಂದ್ರ ಬಿಜೆಪಿ ಸರ್ಕಾರದ ಬಜೆಟ್ ನಲ್ಲಿ ಹೊಸತೇನೂ ಇಲ್ಲ, ಹಿಂದಿನ ಬಜೆಟ್ ಪ್ರತಿಯನ್ನೇ ಮತ್ತೊಮ್ಮೆ ಓದಿದ್ದಾರೆ ಅಷ್ಟೇ. ಹೊಸ ಚಿಂತನೆಗಳು, ಹೊಸ ಯೋಜನೆಗಳಿಲ್ಲದ ಈ ಬಜೆಟ್ ನಿಂದ ತಿಳಿದಿದ್ದೇನೆಂದರೆ ಬಿಜೆಪಿಗೆ ಭಾರತದ ಭವಿಷ್ಯದ ದೂರದೃಷ್ಟಿಯೂ ಇಲ್ಲ, ದೇಶ ಕಟ್ಟುವ ಮಹತ್ವಾಕಾಂಕ್ಷೆಯೂ ಇಲ್ಲ ಎಂಬುದು. ಬಾಟಲಿಯೂ ಹಳೇದು, ವೈನೂ ಹಳೆಯದ್ದು ಎನ್ನುವಂತಿದೆ ಈ ಬಜೆಟ್.

    ನೀರಾವರಿ ಯೋಜನೆಗಳಿಗೆ ಹಣವಿಲ್ಲ, ಅಭಿವೃದ್ಧಿ ಕಾರ್ಯಕ್ರಮಗಳ ಸುಳಿವಿಲ್ಲ, ಜನ ಕಲ್ಯಾಣ ಕಾರ್ಯಕ್ರಮಗಳಿಲ್ಲ, ರೈಲ್ವೆ, ರಸ್ತೆ ವಿಸ್ತರಣೆಯ ಪ್ರಸ್ತಾಪವಿಲ್ಲ. ಕರ್ನಾಟಕಕ್ಕಂತೂ ಬಿಡಿಗಾಸು ದೊರೆತಿಲ್ಲ, ಉಪನಗರ ರೈಲಿನ ಬಗ್ಗೆ ಚಕಾರವಿಲ್ಲ, ಕರ್ನಾಟಕಕ್ಕೆ ಅನುದಾನ ವಂಚನೆಯದರೂ ಬಾಯಿ ಮುಚ್ಚಿಕೊಂಡು ಕುಳಿತ ಬಿಜೆಪಿಯ A + B ಟೀಮಿನ 27 ಸಂಸದರಿಂದ ಕರ್ನಾಟಕಕ್ಕೆ ಮಹಾದ್ರೋಹವಾಗುತ್ತಿದೆ ಎಂದು ಆರೋಪಿಸಿದೆ.

    ಒಕ್ಕೂಟ ಸರ್ಕಾರದ 2024ರ ಬಜೆಟ್ ನಲ್ಲಿ ಎನೂ ಇಲ್ಲ ಇಲ್ಲದ ಕಾರಣ ವಿತ್ತ ಸಚಿವರು ಕೇವಲ 59 ನಿಮಿಷದಲ್ಲಿ ಬಜೆಟ್ ಓದಿ ಮುಗಿಸಿಬಿಟ್ಟರು! ಈ ಬಜೆಟ್ ನಲ್ಲಿ ಕರ್ನಾಟಕಕ್ಕೆ ಎಳ್ಳು ಕಾಳಿನಷ್ಟು ಉಪಯೋಗವಿಲ್ಲ, ಉದ್ಯಮಿ ಗೆಳೆಯರ ಆದಾಯ ದುಪ್ಪಟ್ಟಾಗಿದ್ದನ್ನು ದೇಶದ ಜನರ ತಲಾದಾಯವೆನ್ನುತ್ತಿರುವುದು ಹಾಸ್ಯಸ್ಪದ ಎಂದು ರಾಜ್ಯ ಕಾಂಗ್ರೆಸ್​ ವಾಗ್ದಾಳಿ ನಡೆಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts