More

    ರಾಜಧಾನಿಗೆ ಭಾರತ್ ಬಂದ್​ ಬಿಸಿ: ದೆಹಲಿ ಗಡಿಗಳಲ್ಲಿ ವಾಹನಗಳ ಸಾಲು

    ನವದೆಹಲಿ: ಕೇಂದ್ರ ಸರ್ಕಾರದ ಮೂರು ಕೃಷಿ ಕಾನೂನುಗಳ ವಿರುದ್ಧ ರೈತಸಂಘಟನೆಗಳು ಇಂದು ನಡೆಸುತ್ತಿರುವ ಭಾರತ್ ಬಂದ್​ನ ಬಿಸಿ ದೇಶದ ರಾಜಧಾನಿ ದೆಹಲಿಯ ಜನರಿಗೆ ಹೆಚ್ಚಾಗಿ ತಾಗುತ್ತಿದೆ. ಇಂದು ಬೆಳಿಗ್ಗೆಯಿಂದಲೇ ದೆಹಲಿಯ ಗಡಿಭಾಗಗಳಲ್ಲಿ ಭಾರೀ ಪ್ರಮಾಣದ ಟ್ರಾಫಿಕ್​ ಜ್ಯಾಮ್​ಗಳು ಏರ್ಪಟ್ಟಿರುವುದು ವರದಿಯಾಗಿದೆ.

    ಸಂಯುಕ್ತ ಕಿಸಾನ್​​ ಮೋರ್ಚಾ ವೇದಿಕೆಯಡಿ 40 ರೈತ ಸಂಘಟನೆಗಳು ಒಟ್ಟಾಗಿ, ಇಂದು ಬೆಳಿಗ್ಗೆ 6 ರಿಂದ ಸಂಜೆ 4 ರವರೆಗೆ ಬಂದ್​ಗೆ ಕರೆ ನೀಡಿವೆ. ಸರ್ಕಾರಿ ಕಛೇರಿಗಳು, ಶಾಲೆ-ಕಾಲೇಜು, ವ್ಯಾಪಾರ-ವಹಿವಾಟುಗಳನ್ನು ನಡೆಸದಂತೆ ಆಗ್ರಹಿಸಿವೆ. ವಿವಾದಿತ ಕಾನೂನುಗಳನ್ನು ಅನುಷ್ಠಾನಗೊಳಿಸಿದರೆ, ಕೃಷಿ ಕ್ಷೇತ್ರವನ್ನು ಖಾಸಗಿ ಕಂಪೆನಿಗಳ ಹಿಡಿತಕ್ಕೆ ಒಳಗಾಗಲಿವೆ ಎಂಬುದು ಪ್ರತಿಭಟನಾಕಾರರ ವಾದವಾಗಿದೆ.

    ಇದನ್ನೂ ಓದಿ: ಬೆಂಗಳೂರಲ್ಲಿ ಬೀದಿಗಿಳಿದ ರೈತ ಸಂಘಟನೆಗಳು, ಎಲ್ಲೆಡೆ ಪೊಲೀಸ್​ ಬಂದೋಬಸ್ತ್

    ಇಂದು ಬೆಳಿಗ್ಗೆಯಿಂದಲೇ, ಮುಖ್ಯವಾಗಿ ರೈತರ ಪ್ರತಿಭಟನಾ ಧರಣಿ ನಡೆಯುತ್ತಿರುವ ಘಾಜಿಪುರ ಗಡಿ ಬಳಿಯ ದೆಹಲಿ-ಮೀರತ್​ ಎಕ್ಸ್​ಪ್ರೆಸ್​ವೇ ಬ್ಲಾಕ್​ ಆಗಿತ್ತು. ಇದರಿಂದಾಗಿ ಉತ್ತರ ಪ್ರದೇಶದ ಕಡೆಯಿಂದ ಬರುವ ವಾಹನಗಳು ಸಿಕ್ಕಿಹಾಕಿಕೊಂಡಿದ್ದವು. ದೆಹಲಿಯ ಗುರ್​ಗಾವ್​ ಮತ್ತು ನಾಯ್ಡ ಗಡಿಗಳಲ್ಲಿಯೂ ಭಾರೀ ಜ್ಯಾಮ್​ ಕಂಡುಬಂದಿದ್ದು, ವಾಹನಗಳ ಸಾಲು ರಸ್ತೆಗಳನ್ನು ಆವರಿಸಿವೆ. ಪಂಜಾಬ್​​ ಮತ್ತು ಹರಿಯಾಣದ ಕಡೆಗಿನ ಶಂಭು ಗಡಿ ಕೂಡ ಬ್ಲಾಕ್​ ಆಗಿದೆ ಎನ್ನಲಾಗಿದೆ.

    ಆದಾಗ್ಯೂ ನಗರದ ಒಳಗೆ ಆಟೋರಿಕ್ಷಾಗಳು, ಟ್ಯಾಕ್ಸಿಗಳು ಸಾಮಾನ್ಯದಂತೆಯೇ ಓಡುತ್ತಿವೆ ಮತ್ತು ವ್ಯಾಪಾರ ಮಳಿಗೆಗಳು ತೆರೆದಿವೆ. ಹಲವು ವ್ಯಾಪಾರಿ ಸಂಘಟನೆಗಳು ಬಂದ್​​ಗೆ ಕೇವಲ ಸೈದ್ಧಾಂತಿಕ ಬೆಂಬಲವನ್ನು ಮಾತ್ರ ಸೂಚಿಸಿದ್ದಾರೆ ಎನ್ನಲಾಗಿದೆ. ಇನ್ನು, ಮುನ್ನೆಚ್ಚರಿಕೆಯಾಗಿ ನಗರದ ಮತ್ತು ವಿವಿಧೆಡೆಯ ಹಲವು ರೈಲುಗಳನ್ನು ರದ್ದುಗೊಳಿಸಲಾಗಿದೆ.

    ಇದನ್ನೂ ಓದಿ: ಭಾರತ್​ ಬಂದ್​ಗೆ ಎಮ್ಮೆ-ಕತ್ತೆಗಳನ್ನ ಕರೆತಂದು ಪ್ರತಿಭಟನೆ

    ಕೆಲವು ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳಲ್ಲಿ ಧರಣಿ ಸೇರಿದಂತೆ ಶಾಂತ ಪ್ರತಿಭಟನೆ ನಡೆಸುವುದಾಗಿ ರೈತಮುಖಂಡರು ಹೇಳಿದ್ದಾರೆ. ಪ್ರತಿಭಟನಾಕಾರರು ನಗರದೊಳಕ್ಕೆ ಪ್ರವೇಶಿಸದಂತೆ ಮತ್ತು ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ದೆಹಲಿ ಪೊಲೀಸರೊಂದಿಗೆ, ಹೆಚ್ಚಿನ ಸಂಖ್ಯೆಯಲ್ಲಿ ಪ್ಯಾರಾಮಿಲಿಟರಿ ಜವಾನ್​ರನ್ನೂ ಗಡಿಗಳಲ್ಲಿ ನಿಯುಕ್ತಿಗೊಳಿಸಲಾಗಿದೆ ಎನ್ನಲಾಗಿದೆ. (ಏಜೆನ್ಸೀಸ್)

    ಔಷಧ ತಗೊಂಡು ಮಲಗಿದ್ದವಳ ಲೈಂಗಿಕ ಶೋಷಣೆ: ವಾಯುಸೇನೆ ಅಧಿಕಾರಿ ಬಂಧನ

    ಬಿಜೆಪಿ ಸಂಸದರನ್ನು ಥಳಿಸಿದ ಜನ: ಕಾಂಗ್ರೆಸ್​ ನಾಯಕರ ಚಿತಾವಣೆ ಆರೋಪ

    ಲಸಿಕೆ ತಯಾರಿಕೆ ಸಾಮರ್ಥ್ಯ ಹೆಚ್ಚಿಸಿಕೊಂಡ ಭಾರತಕ್ಕೆ ಬಿಲ್​ ಗೇಟ್ಸ್​ ಪ್ರಶಂಸೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts