More

    ಕಾಂಗ್ರೆಸ್-ಬಿಜೆಪಿ ಪಾಸ್ ಕೆಸರೆರಚಾಟ; ಒಗ್ಗಟ್ಟಿನ ಮಂತ್ರ ಜಪಿಸುತ್ತಲೇ ಏಟು, ತಿರುಗೇಟು | ಆರೋಪ ಅಲ್ಲಗಳೆದ ಕಮಲ

    ಬೆಂಗಳೂರು: ಕರೊನಾ ಹಿನ್ನೆಲೆಯಲ್ಲಿ ತುರ್ತು ಅಗತ್ಯದ ಕೆಲಸಗಳಿಗಾಗಿ ಪಾಸ್ ವಿತರಣೆ ಕುರಿತು ಆಡಳಿತಾ ರೂಢ ಬಿಜೆಪಿ ಹಾಗೂ ಪ್ರತಿಪಕ್ಷ ಕಾಂಗ್ರೆಸ್ ಮಧ್ಯೆ ಕೆಸರೆರಚಾಟ ನಡೆದಿದೆ. ಜನರ ಅನಗತ್ಯ ಓಡಾಟಕ್ಕೆ ನಿರ್ಬಂಧ ಹಾಗೂ ಸಾಮಾಜಿಕ ಅಂತರ ಕಾಪಾಡುವುದರ ಜತೆಗೆ ರಾಜಕೀಯ ಒತ್ತಡ ನಿಭಾಯಿಸುವುದು ಪೊಲೀಸ್ ಇಲಾಖೆಗೆ ಸವಾಲಾಗಿದೆ.

    ಪೊಲೀಸ್ ಇಲಾಖೆ ಮೇಲೆ ಒತ್ತಡ ಹೇರಿ ಜರೂರು ಕೆಲಸದ ಹೆಸರಿನಲ್ಲಿ 1 ಲಕ್ಷ ಪಾಸ್​ಗಳನ್ನು ವಿತರಿಸಲಾಗಿದ್ದು,ಬಹುಪಾಲು ಬಿಜೆಪಿ ಕಾರ್ಯಕರ್ತರ ಪಾಲಾ ಗಿವೆ. ತುರ್ತು ಅಗತ್ಯದ ಕೆಲಸಕ್ಕೆ ತೆರಳಲು ಬಯಸುವ ತಮ್ಮ ಪಕ್ಷದ ಕಾರ್ಯಕರ್ತರಿಗೆ ಕೊಡುತ್ತಿಲ್ಲವೆಂದು ಕಾಂಗ್ರೆಸ್​ನ ಮುಖಂಡರು ಆರೋಪಿಸಿದ್ದಾರೆ.

    ಬೊಮ್ಮಾಯಿ ಕಾರ್ಯತಂತ್ರ: ಪ್ರತಿಪಕ್ಷಗಳ ಆರೋಪ ಗಂಭೀರ ತಿರುವು ಪಡೆಯುವುದಕ್ಕೆ ಮುನ್ನವೇ ಗೃಹ ಸಚಿವ ಬಸವರಾಜ ಬೊಮ್ಮಾಯಿ ವಾಸ್ತವಾಂಶ ಅರಿಯುವುದಕ್ಕಾಗಿ ರಸ್ತೆಗೆ ಇಳಿದರು. ಪೊಲೀಸರೊಂದಿಗೆ ಪ್ರಮುಖ ಪ್ರದೇಶ, ರಸ್ತೆಗಳಲ್ಲಿ ಸಂಚರಿಸಿ ಓಡಾಡುವರನ್ನು ಪರಿಶೀಲಿಸಿದರು. ಕೆಲವರ ಬಳಿ ಪಾಸ್ ಕಲರ್ ಝೆರಾಕ್ಸ್ ಇದ್ದುದನ್ನು ಪತ್ತೆಹಚ್ಚಿ ತನಿಖೆಗೆ ಆದೇಶಿಸಿದ್ದು, ಪಾಸ್​ಗಳ ದುರ್ಬಳಕೆ ಹಾಗೂ ಪೊಲೀಸರ ಪಕ್ಷಪಾತ ಆರೋಪ ಗಳಲ್ಲಿ ಹುರುಳಿಲ್ಲವೆಂದು ಕಾಂಗ್ರೆಸ್​ನ ಅರೋಪ ಅಲ್ಲಗಳೆದಿದ್ದಾರೆ. ತುರ್ತು ಅಗತ್ಯದ ಕೆಲಸಗಳಿಗಾಗಿ ಕಾಂಗ್ರೆಸ್ ಕಾರ್ಯಕರ್ತರ ಕೋರಿಕೆಯಂತೆ ಪಾಸ್ ವಿತರಿಸಲಾಗಿದೆ ಎಂಬ ಸಮಜಾಯಿಷಿ ನೀಡಿದ್ದಾರೆ.

    ಸರ್ಕಾರದ ಪ್ರತಿಯೊಂದು ಹೆಜ್ಜೆ ಬಗ್ಗೆ ಬೊಟ್ಟು ಮಾಡುವುದು ತಮ್ಮ ಕೆಲಸವಲ್ಲ ಎಂದು ಪ್ರತಿಪಕ್ಷಗಳು ಹೇಳಿದರೆ, ಸಂಕಷ್ಟ ಸಮಯದಲ್ಲಿ ಯಾವುದೇ ಪೂರ್ವಾಗ್ರಹ ವಿಲ್ಲದೆ ಪ್ರತಿಪಕ್ಷಗಳು ನೀಡುವ ಸಲಹೆ ಸ್ವೀಕರಿಸಿ, ಗೌರವಿಸುತ್ತೇವೆ ಎಂದು ಅಡಳಿತ ಪಕ್ಷವಾದ ಬಿಜೆಪಿ ವಿವರಣೆ ನೀಡುತ್ತಿದೆ.

    ಚುನಾವಣಾ ಜ್ವರ: ಸಂಕಷ್ಟದ ಸಮಯದಲ್ಲಿ ಜನರ ಆರೋಗ್ಯ ರಕ್ಷಣೆ ಹಾಗೂ ಹಸಿವು ನಿವಾರಣೆ ಮುಖ್ಯವೆಂದು ಮಾನವೀಯತೆ ಕಾಳಜಿಯನ್ನು ರಾಜಕೀಯ ಪಕ್ಷಗಳು ಮೇಲ್ನೋಟಕ್ಕೆ ವ್ಯಕ್ತಪಡಿಸುತ್ತಿವೆ. ಅದರೆ, ಕರೊನಾ ವೈರಸ್​ಗಿಂತ ಹೆಚ್ಚಾಗಿ ಭವಿಷ್ಯತ್ತಿನ ‘ಚುನಾವಣಾ ರಾಜಕೀಯ’ದ ಜ್ವರ ಬಾಧಿಸುತ್ತಿದೆ. ಸರ್ಕಾರದ ಕರೊನಾ ವಾರ್ ರೂಮ್ೆ ಪ್ರತಿಯಾಗಿ ಕಾಂಗ್ರೆಸ್​ನ ವಾರ್ ರೂಮ್ ಪಡಿತರ ಹಂಚಿಕೆಗೆ ಪೈಪೋಟಿಯೇ ಇದಕ್ಕೆ ನಿದರ್ಶನ. ಆದರೆ, ತಮಗೆ ಜನರ ಹಿತರಕ್ಷಣೆಯೇ ಮುಖ್ಯವಾಗಿದ್ದು, ಸರ್ಕಾರದ ಜತೆಗೆ ನಾವೂ ಕೈಜೋಡಿಸಿದ್ದೇವೆ ಎಂದು ಪ್ರತಿಪಕ್ಷಗಳು ಸಮರ್ಥಿಸಿಕೊಳ್ಳುತ್ತಿವೆ. ಕಾರ್ವಿುಕರು, ನಿರ್ಗತಿಕರು, ವಲಸಿಗರು, ರೈತರು ಹೀಗೆ ಪ್ರತಿಯೊಂದು ಕ್ಷೇತ್ರಕ್ಕೆ ನೆರವಾಗಲು ಸರ್ಕಾರಕ್ಕೆ ಸಲಹೆ ನೀಡುತ್ತಲೇ ಪ್ರತಿಪಕ್ಷ ಕಾಂಗ್ರೆಸ್ ಹದ್ದಿನ ಕಣ್ಣಿಟ್ಟಿದೆ. ಪರಸ್ಪರ ವೈಫಲ್ಯ, ಸಾಫಲ್ಯ, ಸಹಕಾರ ಹಾಗೂ ಅಸಹಕಾರದ ಪಟ್ಟಿಯೊಂದಿಗೆ ಜನತಾ ಜನಾರ್ದನರ ಮುಂದಿಡುವುದಕ್ಕೆ ಆಂತರಿಕ ಸಿದ್ಧತೆ ಮಾಡಿಕೊಳ್ಳುತ್ತಿವೆ. ಇವುಗಳೆಲ್ಲದರ ಹಿಂದೆ ಚುನಾವಣಾ ರಾಜಕೀಯದ ಲಾಭ ಮತ್ತು ನಷ್ಟದ ಲೆಕ್ಕಾಚಾರಗಳಿವೆ.

    ಕರೊನಾ ಸಂದರ್ಭದಲ್ಲಿ ತಮಿಳುನಾಡಿನ ಕಿತಾಪತಿ, ರಾಜ್ಯದ ಗಡಿಯೊಳಗೆ ನಾಕಾಬಂದಿ; ತೆರವುಗೊಳಿಸಿದ ಗೃಹ ಸಚಿವ ಬೊಮ್ಮಾಯಿ

    10 ಜಿಲ್ಲೆ ಕಂಪ್ಲೀಟ್ ಸೀಲ್? ಕರೊನಾದ ಕರಾಳತೆ ತಡೆಗೆ ಪೂರ್ವಸಿದ್ಧತೆ, ನಾಳೆ ಅಂತಿಮ ನಿರ್ಧಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts