More

    ಗಡುವಿಗೆ ಜಗ್ಗದ ದೇವದಾನ ಗ್ರಾಪಂಗೆ ಕೆಲಸದ ಮೂಲಕವೇ ಗ್ರಾಮಸ್ಥರಿಂದ ತಿರುಗೇಟು

    ಬಾಳೆಹೊನ್ನೂರು: ದೇವದಾನ ಗ್ರಾಪಂ ವ್ಯಾಪ್ತಿಯ ಕಡಬಗೆರೆಯಲ್ಲಿ ತಂಗುದಾಣ ನಿರ್ವಿುಸಬೇಕೆಂದು ಪ್ರಯಾಣಿಕರು ಹಲವು ಬಾರಿ ಸ್ಥಳೀಯ ಗ್ರಾಪಂಗೆ ಮನವಿ ಮಾಡಿದರೂ ತಂಗುದಾಣ ನಿರ್ವಿುಸದ ಹಿನ್ನೆಲೆಯಲ್ಲಿ ಸಾರ್ವಜನಿಕರೇ ತಾತ್ಕಾಲಿಕ ತಂಗುದಾಣ ನಿರ್ವಿುಸಿದ್ದಾರೆ.

    ಬಾಳೆಹೊನ್ನೂರು-ಚಿಕ್ಕಮಗಳೂರು ಮುಖ್ಯ ರಸ್ತೆಯ ಕಡಬಗೆರೆ ಗ್ರಾಮದಲ್ಲಿದ್ದ ಪ್ರಯಾಣಿಕರ ತಂಗುದಾಣವನ್ನು ಮೂರು ವರ್ಷಗಳ ಹಿಂದೆ ರಸ್ತೆ ಅಗಲೀಕರಣದ ವೇಳೆ ಕೆಡವಲಾಗಿತ್ತು. ನಂತರ ಮೂರು ವರ್ಷ ಕಳೆದರೂ ಸ್ಥಳೀಯ ಗ್ರಾಪಂನಿಂದ ತಂಗುದಾಣ ಮರು ನಿರ್ವಣವಾಗಿರಲಿಲ್ಲ. ಇದರಿಂದ ಬಸ್​ಗೆ ತೆರಳುವ ಸಾರ್ವಜನಿಕರು ರಸ್ತೆಯಲ್ಲೇ ನಿಲ್ಲುವ ಪರಿಸ್ಥಿತಿ ನಿರ್ವಣವಾಯಿತು. ನಾಲ್ಕು ತಿಂಗಳ ಹಿಂದೆ ಸ್ಥಳೀಯರು ಕಡಬಗೆರೆಯಲ್ಲಿ ಪ್ರಯಾಣಿಕರ ತಂಗುದಾಣ ನಿರ್ವಿುಸಬೇಕು ಎಂದು ದೇವದಾನ ಗ್ರಾಪಂಗೆ ಮನವಿ ಮಾಡಿದರು. ಮೂರು ತಿಂಗಳಲ್ಲಿ ತಂಗುದಾಣ ನಿರ್ವಿುಸದಿದ್ದಲ್ಲಿ ಸಾರ್ವಜನಿಕರೇ ನಿರ್ವಿುಸುವುದಾಗಿ ಎಚ್ಚರಿಸಿದ್ದರು. ಮನವಿ ಸಲ್ಲಿಸಿ ನಾಲ್ಕು ತಿಂಗಳು ಕಳೆದರೂ ಗ್ರಾಪಂ ತಂಗುದಾಣ ನಿರ್ವಿುಸದ ಕಾರಣ ಸಾರ್ವಜನಿಕರೇ ಒಗ್ಗೂಡಿ ತಾತ್ಕಾಲಿಕ ತಂಗುದಾಣ ನಿರ್ವಿುಸಿದ್ದಾರೆ. ಟಾರ್ಪಲ್ ಹೊದಿಕೆ ಹಾಕಿ, ತಂಗುದಾಣಕ್ಕೆ ಬೋರ್ಡ್ ಅಳವಡಿಸಿದ್ದಾರೆ.

    ಸ್ಥಳೀಯ ಗ್ರಾಪಂ ಸಾರ್ವಜನಿಕ ಸಮಸ್ಯೆಗೆ ಸ್ಪಂದಿಸದ್ದರಿಂದ ಬೋರ್ಡ್​ನಲ್ಲಿ ಕಡಬಗೆರೆ ಆಧುನಿಕ ಬಸ್ ತಂಗುದಾಣ. ದಾನಿಗಳು ದೇವದಾನ ಗ್ರಾಪಂ ಎಂದು ಬರೆಸಿ ಗ್ರಾಪಂ ಆಡಳಿತವನ್ನು ಸಾರ್ವಜನಿಕರು ಪರೋಕ್ಷವಾಗಿ ಟೀಕಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts