More

    ಕಾಲಿನ ಮಾಂಸಖಂಡಗಳನ್ನು ಪಳಗಿಸುವ ವೀರಭದ್ರಾಸನ

    ವೀರಭದ್ರಾಸನ ಮಾಡಿದರೆ ಕಾಲುಗಳ ಮಾಂಸಖಂಡಗಳು ಚೆನ್ನಾಗಿ ಪಳಗುತ್ತವೆ. ಈ ಯೋಗಾಸನದ ನಿತ್ಯ ಅಭ್ಯಾಸದಿಂದ ಸೊಂಟ ಮತ್ತು ಕಾಲುಗಳ ಆಕಾರವು ಉತ್ತಮಗೊಳ್ಳುತ್ತದೆ. ದೇಹಕ್ಕೆ ಮೃದು ವ್ಯಾಯಾಮವಾಗುತ್ತದೆ.

    ಉಪಯೋಗಗಳು: ವೀರಭದ್ರಾಸನ ಅಭ್ಯಾಸ ಮಾಡುವುದರಿಂದ ಕಾಲುಗಳ ನರದೋಷ ನಿವಾರಣೆಯಾಗುತ್ತದೆ. ಮಾಂಸಖಂಡಗಳು ಬಲಗೊಳ್ಳುತ್ತವೆ. ಸೊಂಟದ ಮತ್ತು ಹೊಟ್ಟೆಯ ಒಳಗಿನ ಅಂಗಗಳು ಚೈತನ್ಯಭರಿತವಾಗಿ ಹುರುಪುಗೊಳ್ಳುತ್ತವೆ. ಬೆನ್ನು, ಭುಜ ಹಾಗೂ ಕೈಕಾಲುಗಳಿಗೆ ಮೃದುವಾದ ವ್ಯಾಯಾಮ ದೊರೆಯುತ್ತದೆ. ನಿತ್ಯ ಅಭ್ಯಾಸ ಮಾಡುವುದರಿಂದ ಸೊಂಟದ ಹಾಗೂ ಕಾಲಿನ ಆಕಾರ ಉತ್ತಮಗೊಳ್ಳುತ್ತದೆ. ಬೆನ್ನು ನೋವಿನ ಬಿಗಿತವನ್ನು ಹೋಗಲಾಡಿಸಲು ಈ ಆಸನ ಸಹಕಾರಿ. ಗರ್ಭಿಣಿ ಸ್ತ್ರೀಯರ ಆರೋಗ್ಯಕ್ಕೂ ಇದು ಪ್ರಯೋಜನಕಾರಿ.

    ಇದನ್ನೂ ಓದಿ: ಬೆನ್ನು, ಸೊಂಟ ನೋವು ನಿಯಂತ್ರಣಕ್ಕೆ ಈ ಆಸನ ಉಪಯುಕ್ತ

    ಅಭ್ಯಾಸ ಕ್ರಮ: ಪ್ರಥಮವಾಗಿ ತಾಡಾಸನದಲ್ಲಿ ನಿಲ್ಲಬೇಕು. ಆಮೇಲೆ 3-4 ಅಡಿಗಳಷ್ಟು ಅಂತರ ಇರುವಂತೆ ಕಾಲುಗಳನ್ನು ವಿಸ್ತರಿಸಿ. ಕೈಗಳು ಭುಜಗಳ ಮಟ್ಟಕ್ಕೆ ನೇರವಾಗಿರಬೇಕು. ನಂತರ ಬಲಗಾಲನ್ನು ಬಲಬದಿಗೆ 90 ಡಿಗ್ರಿಗಳಷ್ಟು ತಿರುಗಿಸಿ, ಎಡಗಾಲು ಸ್ವಲ್ಪ ಒಳಗಡೆ ಸರಿಸಬೇಕು. ಶಿರಸ್ಸನ್ನು ಬಲಬದಿಗೆ ತಿರುಗಿಸಿ ಬಲಗೈ ಬೆರಳುಗಳನ್ನು ನೋಡುತ್ತಿರಬೇಕು. ಉಸಿರನ್ನು ಬಿಡುತ್ತಾ ನಿಧಾನವಾಗಿ, ಬಲಮಂಡಿಯನ್ನು ಬಾಗಿಸಿ, ಎಡಗಾಲನ್ನು ನೇರವಾಗಿಸಬೇಕು. ಕಣ್ಣುಗಳಿಂದ ಬಲಗೈಯ ಬೆರಳುಗಳನ್ನು ನೋಡುತ್ತಾ ಹಾಯಾಗಿರಿ. ಈ ಸ್ಥಿತಿಯಲ್ಲಿ ಸುಮಾರು 20 ರಿಂದ 30 ಸೆಕೆಂಡುಗಳ ಕಾಲ ಸಹಜ ಉಸಿರಾಟ ನಡೆಸುವುದು. ಉಸಿರನ್ನು ತೆಗೆದುಕೊಳ್ಳುತ್ತಾ ಮೇಲೆ ಬರಬೇಕು. ಇನ್ನೊಂದು ಬದಿಯಲ್ಲಿ ಇದೇ ರೀತಿ ಅಭ್ಯಾಸ ಮಾಡಬೇಕು. ಈ ರೀತಿ ಎರಡು ಅಥವಾ ಮೂರು ಬಾರಿ ಅಭ್ಯಾಸ ನಡೆಸಿ, ಆಮೇಲೆ ವಿಶ್ರಾಂತಿ ಪಡೆಯಬೇಕು.

    ತೀರ ಸೊಂಟ ಅಥವಾ ಕುತ್ತಿಗೆ ನೋವು ಇರುವವರು ಮಾಡಬಾರದು.

    ಸಂಸ್ಕೃತ ಕಲಿಯಬೇಕೆ? ಇಲ್ಲಿವೆ ಸರಳ ಮಾರ್ಗಗಳು!

    ಕಾಲು ನೋವು, ಕಿಬ್ಬೊಟ್ಟೆಯ ನೋವು ನಿಯಂತ್ರಿಸಲು ಈ ಯೋಗಾಸನ ಸಹಕಾರಿ!

    ಸರ್ಕಾರಿ ನೌಕರಿಗಾಗಿ ನಕಲಿ ಅಂಕಪಟ್ಟಿ ಸಲ್ಲಿಕೆ! ಮೂರು ವರ್ಷದ ನಂತರ ಕೃತ್ಯ ಬೆಳಕಿಗೆ

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts