More

    ಲೋಕ ಸಮರ 2024: ಅಂತ್ಯ ಕಾಣದ ಟಿಕೆಟ್ ಗದ್ದಲ! ಸ್ವತಂತ್ರ ಅಭ್ಯರ್ಥಿಯಾಗಿ ವೀಣಾ ಕಣಕ್ಕೆ?

    ಬಾಗಲಕೋಟೆ: ಇಲ್ಲಿನ ಕ್ಷೇತ್ರದಿಂದ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಟಿಕೆಟ್ ಆಕಾಂಕ್ಷಿಯಾಗಿದ್ದ ಶಾಸಕ ವಿಜಯಾನಂದ ಕಾಶಪ್ಪನವರ್ ಪತ್ನಿ ವೀಣಾ ಕಾಶಪ್ಪನವರ್​ ಕಡೆಗೂ ಟಿಕೆಟ್​ನಿಂದ ವಂಚಿತರಾದರು. ಸಚಿವ ಶಿವಾನಂದ ಪಾಟೀಲ ಪುತ್ರಿ ಸಂಯುಕ್ತಾ ಪಾಟೀಲಗೆ ಕಾಂಗ್ರೆಸ್​ ಅಂತಿಮವಾಗಿ ಟಿಕೆಟ್ ಘೋಷಿಸಿದ ಬೆನ್ನಲ್ಲೇ ಕಣ್ಣೀರಿಟ್ಟ ವೀಣಾ ಇಂದಿಗೂ ತಮ್ಮ ಅಸಮಾಧಾನದಿಂದ ಹೊರಬಂದಿಲ್ಲ. ಸದ್ಯ ಇದು ಕೈ ನಾಯಕರಲ್ಲಿ ತೀವ್ರ ಆತಂಕ ಸೃಷ್ಟಿಸಿದೆ.

    ಇದನ್ನೂ ಓದಿ: ಕೆಯುಡಬ್ಲ್ಯುಜೆ ದತ್ತಿ ನಿಧಿ ಪ್ರಶಸ್ತಿ ಪ್ರಕಟ: ಏಪ್ರಿಲ್ 1ರಂದು ಚಿತ್ರದುರ್ಗದಲ್ಲಿ ಪ್ರದಾನ

    ಬಾಗಲಕೋಟೆ ಲೋಕಸಭೆ ಕ್ಷೇತ್ರದಲ್ಲಿ ಇನ್ನೂ ಕಾಂಗ್ರೆಸ್ ಟಿಕೆಟ್ ಹಂಚಿಕೆಯ ಅಸಮಧಾನ ಅಂತ್ಯಗೊಂಡಿಲ್ಲ. ಟಿಕೆಟ್ ಕೈತಪ್ಪಿದ ವಿಚಾರಕ್ಕೆ ಸಂಬಂಧಿಸಿದಂತೆ ಅಳಲು ತೋಡಿಕೊಂಡ ವೀಣಾ ಕಾಶಪ್ಪನವರ್, ನನಗೆ ಟಿಕೆಟ್ ಕೊಡಬೇಕಿತ್ತು. ಆದರೆ ಅದು ನಡೆದಿಲ್ಲ. ಹಾಗಂತ ನಾನು ಚುನಾವಣಾ ಸ್ಪರ್ಧೆಯಿಂದ ಹೊರಗುಳಿಯಲ್ಲ. ಖಂಡಿತ ಅಖಾಡದಲ್ಲಿ ಇದ್ದೇ ಇರ್ತಿನಿ ಎಂದು ಶಪಥ ಮಾಡಿದ್ದಾರೆ.

    ವೀಣಾ ಹೇಳಿಕೆಯ ಬೆನ್ನಲ್ಲೇ ಸ್ವತಂತ್ರವಾಗಿ ಅಖಾಡಕ್ಕೆ ಇಳಿಯುವಂತೆ ಬೆಂಬಲಿಗರು ಒತ್ತಾಯಿಸಿದ್ದು, ಕಾಶಪ್ಪನವರ ದಂಪತಿ ಅಸಮಧಾನದ ಚಂಡು ಸಿಎಂ ಅಂಗಳಕ್ಕೆ ಬಂದು ಬಿದ್ದಿದೆ. ಇಂದು ಸಂಜೆಯೇ ಈ ವಿಷಯಕ್ಕೆ ಸಂಬಂಧಿಸಿದಂತೆ ಸಿಎಂ, ಡಿಸಿಎಂ ಸಮ್ಮುಖದಲ್ಲಿ ಸಭೆ ನಡೆಯಲಿದೆ. ಸಭೆಗೆ ಕಾಶಪ್ಪನವರ ದಂಪತಿ, ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪುರ, ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತ ಪಾಟೀಲ ಭಾಗಿಯಾಗಲಿದ್ದಾರೆ.

    ಅದೊಂದು ಪಾತ್ರ ನಾನು ಒಪ್ಪಬಾರದಿತ್ತು! ಆ ತಪ್ಪಿಂದ ನನ್ನ ಆಸೆಯೇ ನುಚ್ಚುನೂರಾಯ್ತು: ನಟಿ ಅರ್ಚನಾ

    ಬಾಳೆಹಣ್ಣಿನ ವಿಷಯದಲ್ಲಿ ಈ ತಪ್ಪನ್ನು ಮಾಡಲೇಬೇಡಿ! ಇಲ್ಲಿದೆ ಉಪಯುಕ್ತ ಮಾಹಿತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts