More

    KUWJ ದತ್ತಿ ನಿಧಿ ಪ್ರಶಸ್ತಿ ಪ್ರಕಟ: ವಿಜಯವಾಣಿ ಸಹಾಯಕ ಸಂಪಾದಕ ಪ್ರಭುದೇವ ಶಾಸ್ತ್ರಿಮಠಗೆ ಗರುಡನಗಿರಿ ನಾಗರಾಜ್ ಪ್ರಶಸ್ತಿ

    ಬೆಂಗಳೂರು: ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದಿಂದ ಪ್ರತಿ ವರ್ಷ ಕೊಡ ಮಾಡುವ ಕೆಯುಡಬ್ಲ್ಯುಜೆ ದತ್ತಿ ನಿಧಿ ಪ್ರಶಸ್ತಿಯನ್ನು ಪ್ರಕಟಿಸಲಾಗಿದೆ. ದತ್ತಿನಿಧಿ ಪ್ರಶಸ್ತಿಗಳು ತಲಾ 5 ಸಾವಿರ ರೂ ನಗದು, ಪ್ರಶಸ್ತಿ ಫಲಕ ಮತ್ತು ಗೌರವ ಪುರಸ್ಕಾರಗಳನ್ನು ಹೊಂದಿರುತ್ತದೆ. ಚಿತ್ರದುರ್ಗದಲ್ಲಿ ಏಪ್ರಿಲ್ 1 ರಂದು ನಡೆಯಲಿರುವ ಕಾರ್ಯಕ್ರಮದಲ್ಲಿ ದತ್ತಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.

    ವಿಜಯವಾಣಿ ಸಹಾಯಕ ಸಂಪಾದಕ ಪ್ರಭುದೇವ ಶಾಸ್ತ್ರಿಮಠ ಅವರು ಗರುಡನಗಿರಿ ನಾಗರಾಜ್ ಪ್ರಶಸ್ತಿಗೆ ಭಾಜನರಾಗಿದ್ದಾರೆ.

    ಪ್ರಶಸ್ತಿಗಳ ವಿವರ:
    * ಡಾ. ಬಾಬಾ ಸಾಹೇಬ ಅಂಬೇಡ್ಕರ್ ಪ್ರಶಸ್ತಿ: ಬಿ.ಎಂ.ಬಶೀರ್, ಮಂಗಳೂರು.
    * ಗೊಮ್ಮಟ ಮಾಧ್ಯಮ ಪ್ರಶಸ್ತಿ: ಕುಂತಿನಾಥ ಶ್ರೀ ಕಲಮನಿ, ಬೆಳಗಾವಿ
    * ಡಿವಿಜಿ ಪ್ರಶಸ್ತಿ: ವಿ.ವೆಂಕಟೇಶ್, ಬೆಂಗಳೂರು
    * ಸಿ.ಆರ್.ಕೃಷ್ಣರಾವ್(ಸಿಆರ್‌ಕೆ) ಪ್ರಶಸ್ತಿ: ಸಿ.ಜಿ.ಮಂಜುಳ, ಬೆಂಗಳೂರು
    * ಯಶೋಧಮ್ಮ ಜಿ ನಾರಾಯಣ ಪ್ರಶಸ್ತಿ: ಮಲ್ಲಿಗೆ ಮಾಚಮ್ಮ, ಮೈಸೂರು.
    * ಎಸ್.ವಿ.ಜಯಶೀಲರಾವ್ ಪ್ರಶಸ್ತಿ: ಮೋಹನ ಹೆಗಡೆ, ಹುಬ್ಬಳ್ಳಿ
    * ಡಾ.ಎಂ.ಎಂ.ಕಲಬುರ್ಗಿ ಪ್ರಶಸ್ತಿ: ಸನತ್ ಕುಮಾರ್ ಬೆಳಗಲಿ
    * ಕಿಡಿ ಶೇಷಪ್ಪ ಪ್ರಶಸ್ತಿ: ಬಿ.ಎಂ.ನಂದೀಶ್, ಹಾಸನ.
    * ಎಚ್.ಎಸ್.ದೊರೆಸ್ವಾಮಿ ಪ್ರಶಸ್ತಿ: ಆರ್. ಜಯಕುಮಾರ್, ಬೆಂಗಳೂರು.
    * ಪಿ.ಆರ್.ರಾಮಯ್ಯ ಪ್ರಶಸ್ತಿ: ಸಿ.ಕೆ.ಮಹೇಂದ್ರ, ಮೈಸೂರು.
    * ಎಚ್.ಕೆ.ವೀರಣ್ಣಗೌಡ ಪ್ರಶಸ್ತಿ: ಅಶೋಕ್ ರಾಮ್, ರಾಮನಗರ.
    * ರಾಜಶೇಖರಕೋಟಿ ಪ್ರಶಸ್ತಿ: ಶಶಿಕುಮಾರ್ ಬಿ ಕೆರೂರ, ಬಾಗಲಕೋಟೆ
    * ಪಿ.ರಾಮಯ್ಯ ಪ್ರಶಸ್ತಿ: ಮನೋಹರ ಮಲ್ಲಾಡದ, ರಾಣೆಬೆನ್ನೂರು
    * ಮ.ರಾಮಮೂರ್ತಿ ಪ್ರಶಸ್ತಿ: ಎಚ್.ಕೆ.ಬಸವರಾಜು, ಬೆಂಗಳೂರು.
    * ಗರುಡನಗಿರಿ ನಾಗರಾಜ್ ಪ್ರಶಸ್ತಿ: ಪ್ರಭುದೇವ ಶಾಸ್ತ್ರಿಮಠ, ಬೆಂಗಳೂರು
    * ಮಹದೇವ ಪ್ರಕಾಶ್ ಪ್ರಶಸ್ತಿ: ವಿಜಯಕುಮಾರ್ ವಾರದ, ಕಲಬುರಗಿ
    * ಶಿವಮೊಗ್ಗದ ಮಿಂಚು ಶ್ರೀನಿವಾಸ್ ಪ್ರಶಸ್ತಿ: ಎನ್.ಬಾಬು, ಭದ್ರಾವತಿ.
    * ಎಚ್.ಎಸ್.ರಂಗಸ್ವಾಮಿ ಪ್ರಶಸ್ತಿ: ನಾಮದೇವ ವಾಟ್ಕರ್, ಯಾದಗಿರಿ
    * ಎಂ.ನಾಗೇಂದ್ರರಾವ್ ಪ್ರಶಸ್ತಿ: ರವಿ ಆರ್, ದಾವಣಗೆರೆ
    * ಗಿರಿಜಮ್ಮ ರುದ್ರಪ್ಪ ತಾಳಿಕೋಟೆ ಪ್ರಶಸ್ತಿ: ಕೆ.ಗೋಪಿಕಾ ಮಲ್ಲೇಶ್, ಕೋಲಾರ.
    * ಗುರುಲಿಂಗಸ್ವಾಮಿ ಹೊಳಿಮಠ ಪ್ರಶಸ್ತಿ: ಆರ್.ಸಿ.ಪುಟ್ಟರಾಜು, ಚಾಮರಾಜನಗರ

    ವಿಶೇಷ ಪ್ರಶಸ್ತಿ:
    ಚಿಕ್ಕಪ್ಪನಳ್ಳಿ ಷಣ್ಮುಖ, ಎಸ್.ಬಿ.ರವಿಕುಮಾರ್, ಮಂಜುನಾಥ್ ಹಾಗೂ ರವಿ ಮಲ್ಲಾಪುರ.

    ಚಿತ್ರದುರ್ಗದಲ್ಲಿ ಏಪ್ರಿಲ್ 1 ರಂದು ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಹಾಗೂ ಪ್ರಧಾನ ಕಾರ್ಯದರ್ಶಿ ಜಿ.ಸಿ.ಲೋಕೇಶ್​ ಅವರು ತಿಳಿಸಿದ್ದಾರೆ.

    ನ್ಯಾಯಾಂಗದ ಮೇಲೆ ಪ್ರಭಾವ ಬೀರಲು ಪಟ್ಟಭದ್ರ ಹಿತಾಸಕ್ತಿಗಳ ಯತ್ನ: ಸಿಜೆಐಗೆ 600 ವಕೀಲರಿಂದ ಪತ್ರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts