More

    ಕೇರಳದ ನೂತನ ಆರೋಗ್ಯ ಸಚಿವರಾಗಿ ವೀಣಾ ಜಾರ್ಜ್

    ತಿರುವನಂತಪುರಂ : ಮಾಜಿ ಪತ್ರಕರ್ತೆ ಮತ್ತು ಅರಣಮುಲಾ ಕ್ಷೇತ್ರದ ಶಾಸಕಿ ವೀಣಾ ಜಾರ್ಜ್​ ಅವರನ್ನು ಕೇರಳದ ನೂತನ ಆರೋಗ್ಯ ಸಚಿವೆಯಾಗಿ ಆಯ್ಕೆ ಮಾಡಲಾಗಿದೆ. ಸಿಎಂ ಪಿಣರಾಯಿ ವಿಜಯನ್ ಅವರ ನೇತೃತ್ವದ ಎಲ್​ಡಿಎಫ್ ಸರ್ಕಾರದ ಹಿಂದಿನ ಆರೋಗ್ಯ ಸಚಿವರಾಗಿದ್ದ ಕೆ.ಕೆ.ಶೈಲಜಾ ಅವರು ಗಳಿಸಿದ್ದ ವರ್ಚಸ್ಸಿಗೆ ಸರಿಸಮನಾಗಿ ಕಾರ್ಯನಿರ್ವಹಿಸುವುದರಲ್ಲಿ ವೀಣಾ ಜಾರ್ಜ್​ ಯಶಸ್ವಿಯಾಗುವರೇ ಎಂದು ಕಾದುನೋಡಬೇಕಿದೆ.

    ಹಿಂದಿನ ಅವಧಿಯ ಆರೋಗ್ಯ ಸಚಿವೆ 64 ವರ್ಷದ ಶೈಲಜಾ ಅವರನ್ನೇ ಆರೋಗ್ಯ ಸಚಿವರಾಗಿ ಮುಂದುವರೆಸುವರೆಂಬ ಅಪೇಕ್ಷೆ ಹಲವರಲ್ಲಿತ್ತು. ಅವರು ಕರೊನಾ ಸಾಂಕ್ರಾಮಿಕದ ಪರಿಸ್ಥಿತಿಯನ್ನು ಸಮರ್ಥವಾಗಿ ನಿರ್ವಹಿಸಿದ್ದಾರೆಂಬ ಅಭಿಪ್ರಾಯ ಹಲವು ನಾಯಕರಿಗಿತ್ತು ಎನ್ನಲಾಗಿದೆ. ಆದರೆ, ಇದೀಗ ಆರೋಗ್ಯ ಸಚಿವಾಲಯದ ದಾಯಿತ್ವವು ಜಾರ್ಜ್​ ಅವರ ತೆಕ್ಕೆಗೆ ಬಿದ್ದಿದೆ.

    ಇದನ್ನೂ ಓದಿ: ಕರ್ನಾಟಕಕ್ಕೆ ಇಂದು ಬರಲಿದೆ 2 ಲಕ್ಷ ಡೋಸ್​ ಕೋವಿಶೀಲ್ಡ್

    ಎಡಪಕ್ಷಗಳು ಸಂಪುಟ ರಚನೆಯನ್ನು ಆರಂಭಿಸಿದಾಗಿನಿಂದ, ವೀಣಾ ಅವರ ಹೆಸರು ಕೇಳಿಬರುತ್ತಿತ್ತು ಎನ್ನಲಾಗಿದೆ. ತಮ್ಮ ನಾಯಕತ್ವ ಗುಣಗಳಿಗೆ ಖ್ಯಾತರಾದ ಜಾರ್ಜ್​, 15 ವರ್ಷ ಪ್ರಮುಖ ಮಲಯಾಳಂ ಚಾನೆಲ್​ಗಳಲ್ಲಿ ನ್ಯೂಸ್ ಆ್ಯಂಖರ್​ ಆಗಿ ಜನಪ್ರಿಯರಾಗಿದ್ದು, 2016 ರಲ್ಲಿ ಮೊದಲ ಬಾರಿಗೆ ಶಾಸಕಿಯಾಗಿದ್ದರು. ಸಿಪಿಐ(ಎಂ)ನ ಪಟ್ಟನಂತಿಟ್ಟ ಪ್ರದೇಶ ಸಮಿತಿಯ ಸದಸ್ಯರಾಗಿರುವ ಅವರು, 2018 ಮತ್ತು 2019 ರಲ್ಲಿ ಪಟ್ಟನಂತಿಟ್ಟದಲ್ಲಿ ಪ್ರವಾಹ ಉಂಟಾದಾಗ ಮಾಡಿದ ಸೇವೆಗೆ ಗುರುತಿಸಲ್ಪಟ್ಟಿದ್ದಾರೆ ಎನ್ನಲಾಗಿದೆ. (ಏಜೆನ್ಸೀಸ್)

    ಭವಾನಿಪುರದಿಂದ ಮತ್ತೆ ಸ್ಪರ್ಧಿಸಲಿದ್ದಾರೆ ಮಮತಾ ಬ್ಯಾನರ್ಜಿ

    ವಿವಾಹೇತರ ಸಂಬಂಧ ಬೆಳೆಸಿದ ಪೊಲೀಸ್​​ಗೆ ಇನ್​ಕ್ರಿಮೆಂಟ್ ಕಟ್ !

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts