More

    ಕ್ರಾಂತಿಕಾರಿ ಬರಹಗಾರ ವರವರ ರಾವ್ ಆರೋಗ್ಯ ಸ್ಥಿತಿ ಏರು ಪೇರು.. ನಿಷ್ಕಾಳಜಿ ವಹಿಸಿದ ಕಾರಾಗೃಹ ಅಧಿಕಾರಿಗಳ ವಿರುದ್ಧ ಕುಟುಂಬದವರ ಆರೋಪ

    ಮುಂಬೈ: ಕಳೆರೆದಡು ವರ್ಷಗಳಿಂದ ಜೈಲಿನಲ್ಲಿದ್ದ 78 ವರ್ಷದ ರಾಜಕೀಯ ಕಾರ್ಯಕರ್ತ, ಕವಿ ಮತ್ತು ಬರಹಗಾರ ವರವರ ರಾವ್ ಅವರ ಆರೋಗ್ಯ ಹದಗೆಟ್ಟಿದೆ.
    ಅವರ ಆರೋಗ್ಯ ಸ್ಥಿತಿಗತಿಯ ಮಾಹಿತಿ ಹಂಚಿಕೊಳ್ಳಲು ಕಾರಾಗೃಹ ಇಲಾಖೆ ಸ್ಪಂದಿಸುತ್ತಿಲ್ಲ ಎಂದು ಅವರ ಕುಟುಂಬ ಆರೋಪಿಸಿದೆ.
    ಮೇ 28 ರಂದು ಜೈಲಿಗೆ ಹೋದ ನಂತರ ರಾವ್ ಆರೋಗ್ಯ ಸ್ಥಿತಿ ಹದಗೆಡಲಾರಂಭಿಸಿತು. ಕಾರಾಗೃಹಕ್ಕೆ ಮರಳಿ ಕರೆತರುವುದಕ್ಕೂ ಸ್ವಲ್ಪ ದಿನಗಳ ಮುನ್ನ ಸರ್ಕಾರಿ ಜೆ.ಜೆ. ಆಸ್ಪತ್ರೆಗೆ ಸೇರಿಸಿದಾಗ ಅವರು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರು.
    ರಾವ್ ಅವರಿಗೆ ಜೈಲಿನಲ್ಲಿ ಸಾಕಷ್ಟು ಉತ್ತಮ ಆರೈಕೆ ನೀಡಿಲ್ಲ. ಆದ್ದರಿಂದ ಅವರ ಆರೋಗ್ಯ ಸ್ಥಿತಿಗತಿಯಲ್ಲಿ ಏರುಪೇರುಂಟಾಗುತ್ತಿದೆ ಎಂದು ಅವರ ಮಗಳು ಪಾವನಾ ಸುದ್ದಿ ಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.

    ಇದನ್ನೂ ಓದಿ: ಭೀಕರ ರಸ್ತೆ ಅಪಘಾತದಲ್ಲಿ ಬದುಕುಳಿದ ಒಂದೇ ಕುಟುಂಬದ ಐವರು: ನಡೆಯಿತು ಪವಾಡ!

    “ಅವರಿಂದ ಇಂದು ಕರೆ ಬಂದಿತ್ತು. ಆದರೆ ಅವರು ಕೇವಲ ಒಂದು ನಿಮಿಷ ಮಾತ್ರ ತುಂಬಾ ಕಷ್ಟಪಟ್ಟು ಮಾತನಾಡಿದರು. ಅವರ ಆರೋಗ್ಯ ಸ್ಥಿತಿ ಅಸ್ಥಿರವಾಗಿದೆ. ಅವರನ್ನು ನೋಡಿಕೊಳ್ಳಲು ಕರ್ತವ್ಯ ವಹಿಸಲಾಗಿರುವ ಅವರ ಸಹ-ಆರೋಪಿಗಳಲ್ಲಿ ಒಬ್ಬರು ಹೆಜ್ಜೆ ಇಡಬೇಕಾಯಿತು ಮತ್ತು ಉತ್ತಮ ಚಿಕಿತ್ಸೆಗಾಗಿ ಅವರನ್ನು ತುರ್ತಾಗಿ ಆಸ್ಪತ್ರೆಗೆ ಸ್ಥಳಾಂತರಿಸಬೇಕಾಗಿದೆ ಎಂದು ನಮಗೆ ತಿಳಿಸಬೇಕಾಯಿತು ಎಂದು ಪಾವನಾ ಹೇಳಿದರು.
    ಮೇ ತಿಂಗಳಲ್ಲಿ ಅವರ ಆರೋಗ್ಯವು ಹದಗೆಟ್ಟ ನಂತರ, ಕುಟುಂಬವು ತುರ್ತು ಜಾಮೀನು ಕೋರಿ ನ್ಯಾಯಾಲಯಕ್ಕೆ ಮೊರೆ ಹೋಗಿತ್ತು. ಅವರ ಜಾಮೀನು ಅರ್ಜಿಯನ್ನು ವಿರೋಧಿಸುವ ಸಲುವಾಗಿ, ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಅವರನ್ನು ಮತ್ತೆ ಜೈಲಿಗೆ ಸ್ಥಳಾಂತರಿಸಿದೆ.

    ಇದನ್ನೂ ಓದಿ:  ಬೆಂಗಳೂರಲ್ಲಿ ಸ್ವಪ್ನ-ಸಂದೀಪ್​ ಬಂಧನ; ಕೇರಳದಲ್ಲಿ ರಾಜಕೀಯ ತಲ್ಲಣ

    “ನಾವು ಇಲ್ಲಿ ತಜ್ಞರನ್ನು ಸಂಪರ್ಕಿಸಿದ್ದು ಮತ್ತು ಅವರಿಗೆ ಸೋಡಿಯಂ ಮತ್ತು ಕ್ರಿಟಿನೈನ್ ಮಟ್ಟವು ಸಾಮಾನ್ಯ ಮಟ್ಟಕ್ಕಿಂತ ಕಡಿಮೆಯಾಗಿದೆ ಮತ್ತು ಅವರ ಆರೋಗ್ಯ ಸ್ಥಿತಿಯ ಕುರಿತು ಸರಿಯಾದ ತನಿಖೆ ನಡೆಸಬೇಕಾಗಿದೆ ಎಂಬುದು ತಿಳಿದುಬಂದಿದೆ ಎಂದು ಪವನಾ ಹೇಳಿದರು. ರಾವ್, ವಯಸ್ಸಿಗೆ ಸಂಬಂಧಿಸಿದ ಮತ್ತು ಇತರ ಆರೋಗ್ಯ ಸಮಸ್ಯೆಗಳನ್ನು ಹೊಂದಿದ್ದಾರೆ ಎಂದು ಅವರ ಕುಟುಂಬ ಹೇಳಿದೆ.
    ಜೈಲು ಇಲಾಖೆಯು ಅವರ ಆರೋಗ್ಯದ ಬಗ್ಗೆ ಮಾಹಿತಿಯನ್ನು ಬಹಿರಂಗಪಡಿಸುತ್ತಿಲ್ಲ ಎಂದು ಕುಟುಂಬ ಮತ್ತು ರಾವ್ ಪರ ವಕೀಲರು ಆರೋಪಿಸಿದ್ದಾರೆ. ರಾವ್ ಅವರ ಆರೋಗ್ಯ ಸ್ಥಿತಿಯ ಮಾಹಿತಿಯು ಈ ತಿಂಗಳ ಆರಂಭದಲ್ಲಿ ವಕೀಲ ಸುಸಾನ್ ಅಬ್ರಹಾಂ ವೆರ್ನಾನ್ ಗೊನ್ಸಾಲ್ವೆಸ್, ಅವರ ಪತಿ ಮತ್ತು ಪ್ರಕರಣದ ಇತರ ಆರೋಪಿಗಳೊಂದಿಗೆ ಮಾತನಾಡಿದಾಗ ತಿಳಿದುಬಂತು. “ಅವರನ್ನು ನೋಡಿಕೊಳ್ಳಲು ಆಸ್ಪತ್ರೆಯಲ್ಲಿ ರಾವ್ ಅವರೊಂದಿಗೆ ತಮ್ಮನ್ನು ಕಳುಹಿಸಲಾಗಿದೆ ಎಂದು ವೆರ್ನನ್ ಹೇಳಿದ್ದರು. ರಾವ್ ಅವರ ಸ್ಥಿತಿ ಹದಗೆಟ್ಟಿರುವುದರಿಂದ ಅವರ ಜತೆ ಸಹ ಆರೋಪಿಗಳನ್ನು ಜೈಲಿನ ಆಸ್ಪತ್ರೆಯಲ್ಲಿ ಇರಿಸಲಾಗಿದೆ,”ಎಂದು ಅವರು ಮಾಹಿತಿ ನೀಡಿದರು.

    ಇದನ್ನೂ ಓದಿ:  ಅಮಿತಾಭ್‌ ನಂತರ ಬಂದಿದೆ ಅನುಪಮ್‌ ಖೇರ್‌ ಕುಟುಂಬದ ಕರೊನಾ ಸುದ್ದಿ!

    “ಮೇ ತಿಂಗಳಲ್ಲಿ ಅವರು ಅನಾರೋಗ್ಯಕ್ಕೊಳಗಾದಾಗ, ಪೊಲೀಸರು ಆತುರದಿಂದ ಅವರನ್ನು ಮರಳಿ ಕಳಿಸಿದ್ದರು. ಅಂದಿನಿಂದ ಅವರು ಜೈಲು ಆಸ್ಪತ್ರೆಯಲ್ಲಿದ್ದಾರೆ. ಆದಾಗ್ಯೂ ಅವರ ಗಂಭೀರ ಆರೋಗ್ಯ ಸ್ಥಿತಿಯ ಕುರಿತು ಕುಟುಂಬಕ್ಕೆ ಇಂದು ಮಾತ್ರ ಗೊತ್ತಾಗಿದೆ, “ಎಂದು ಅವರ ಮಗಳು ಹೇಳಿದರು.
    ಮಹಾರಾಷ್ಟ್ರದ ಎಲ್ಗರ್ ಪರಿಷತ್-ಕೊರೆಗಾಂವ್ ಭೀಮಾ ಪ್ರಕರಣದಲ್ಲಿ ಪಾತ್ರವಹಿಸಿದ ಆರೋಪದ ಮೇರೆಗೆ 2018 ರ ಜೂನ್‌ನಲ್ಲಿ ಬಂಧನಕ್ಕೊಳಗಾಗಿ ಜೈಲಿನಲ್ಲಿದ್ದ ರಾವ್, ಈ ವರ್ಷದ ಆರಂಭದಲ್ಲಿ, ಭಾರತದಲ್ಲಿ COVID-19 ಸಾಂಕ್ರಾಮಿಕ ರೋಗವು ಸ್ಫೋಟಗೊಳ್ಳುವ ಕೆಲವೇ ದಿನಗಳ ಮೊದಲು ಮುಂಬೈ ಇತರ ಆರೋಪಿಗಳೊಂದಿಗೆ ಪುಣೆಯ ಯರವಾಡಾ ಕಾರಾಗೃಹದಿಂದ ಮುಂಬೈ ಹೊರವಲಯದಲ್ಲಿರುವ ತಾಲೋಜ ಕೇಂದ್ರ ಕಾರಾಗೃಹಕ್ಕೆ ತೆರಳಿದ್ದರು.

    ಇದನ್ನೂ ಓದಿ:  ಹೋಮ್‌ ಕ್ವಾರಂಟೈನ್‌ ಬದಲು ಅಮಿತಾಭ್‌ ಆಸ್ಪತ್ರೆಯನ್ನೇ ಆಯ್ಕೆ ಮಾಡಿಕೊಂಡಿದ್ದೇಕೆ?

    ಸದ್ಯ ಮುಂಬೈಯಲ್ಲಿ ಕರೊನಾ ಸ್ಥಿತಿಗತಿ ಆತಂಕಕಾರಿಯಾಗಿದೆ. ಕಾರಾಗೃಹಗಳಲ್ಲಿ ಅಂದಾಜು 500 ಜನ ಕರೊನಾವೈರಸ್ ಸೋಂಕಿಗೆ ಒಳಗಾಗಿದ್ದಾರೆ ಮತ್ತು ಈಗಾಗಲೇ ನಾಲ್ಕು ಜನರು ಸಾವನ್ನಪ್ಪಿದ್ದಾರೆ. ಆರೋಗ್ಯದ ಸ್ಥಿತಿಗತಿ ಆಧಾರದ ಮೇಲೆ ರಾವ್ ಅವರ ಜಾಮೀನು ಅರ್ಜಿ ಸದ್ಯ ಬಾಂಬೆ ಹೈಕೋರ್ಟ್ ಮುಂದಿದೆ.
    ಇಂದು, ಫೋನ್ ಕರೆ ಸ್ವೀಕರಿಸಿದ ನಂತರ, ಅವರ ವಕೀಲ ನಿಹಾಲ್ಸಿಂಗ್ ರಾಥೋಡ್ ಜೈಲಿನ ಅಧಿಕಾರಿಗಳಿಗೆ ಇಮೇಲ್ ಸಂದೇಶ ಕಳುಹಿಸಿ ಅವರ ಇತ್ತೀಚಿನ ವೈದ್ಯಕೀಯ ವರದಿ ಯನ್ನು ತುರ್ತು ಕಳುಹಿಸಲು ಕೋರಿದ್ದಾರೆ. “ಅವರ ಆರೋಗ್ಯ ಸ್ಥಿತಿಯ ನಿಖರವಾದ ವಿವರಣೆಯನ್ನು ನಮಗೆ ಒದಗಿಸಿ” ಎಂದು ರಾಥೋಡ್ ಬರೆದಿದ್ದಾರೆ. ರಾವ್ ಮತ್ತು ಅವರ ಕುಟುಂಬ ಸದಸ್ಯರ ನಡುವೆ ವಿಡಿಯೋ ಕಾಲ್ ಸಂಪರ್ಕ ವ್ಯವಸ್ಥೆ ಮಾಡಲು ಅವರು ಕೋರಿದ್ದಾರೆ.

    ಊರಿಗೆ ವಾಪಸಾದ ಅಮ್ಮ-ಮಗ ಸ್ಮಶಾನದಲ್ಲಿ ಮಲಗಿದರು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts