More

    ಪರಿಶಿಷ್ಟರ ಹಣ ಬಳಕೆ: ಕಾನೂನು ಉಲ್ಲಂಘಿಸುವ ಪ್ರಶ್ನೆಯೇ ಇಲ್ಲ: ಖರ್ಗೆ

    ಬೆಂಗಳೂರು: ಪರಿಶಿಷ್ಟರ ಹಣ ಬಳಕೆ ವಿಚಾರದಲ್ಲಿ ನಾನು ಕಾನೂನು ಉಲ್ಲಂಘಿಸುವ ಪ್ರಶ್ನೆಯೇ ಇಲ್ಲ. ಪರಿಶಿಷ್ಟ ಲಾನುಭವಿಗಳಿಗೇ ಆ ಹಣ ಬಳಕೆ ಮಾಡುತ್ತೇವೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಸ್ಪಷ್ಟಪಡಿಸಿದರು. ಎಸ್‌ಸಿ/ಎಸ್‌ಟಿ ಹಣವನ್ನು ಆ ವರ್ಗದ ಲಾನುಭವಿಗಳಿಗೇ ಬಳಕೆ ಮಾಡುವುದಾಗಿ ಈಗಾಗಲೇ ನಾವು ಹೇಳಿದ್ದೇವೆ. ಕಾನೂನು ಪ್ರಕಾರವೇ ಖರ್ಚು ಮಾಡುತ್ತೇವೆ ಎಂದು ವಿಧಾನಸೌಧದಲ್ಲಿ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.

    ಜೆಡಿಎಸ್, ಬಿಜೆಪಿಯವರು ಎಸ್‌ಸಿಎಸ್‌ಪಿ/ಟಿಎಸ್‌ಪಿ ಕಾನೂನನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು. ಅರ್ಥ ಮಾಡಿಕೊಂಡಿದ್ದಾರೊ ಇಲ್ಲವೋ ನನಗೆ ಗೊತ್ತಿಲ್ಲ ಎಂದು ಟಾಂಗ್ ಕೊಟ್ಟರು.

    ನಾವು 10 ಸಾವಿರ ಕೋಟಿಗೂ ಹೆಚ್ಚು ಹಣವನ್ನ ಎಸ್‌ಸಿಪಿ/ ಎಸ್‌ಟಿಪಿ ಹಣ ಬೇರೆ ಕಾರ್ಯಕ್ರಮಗಳಿಗೆ ಬಳಕೆ ಮಾಡಿದ್ದೇವೆ ಎಂದು ಹಿಂದಿನ ಸರ್ಕಾರದಲ್ಲಿ ಸದನದಲ್ಲೇ ಬಿಜೆಪಿಯವರು ಒಪ್ಪಿಕೊಂಡಿದ್ದಾರೆ. ಅವರು ಒಪ್ಪುವುದರ ಜತೆಗೆ ಎಜಿ ವರದಿ ಕೂಡ ಇದೆ. ನಾವು ಬಹಳ ಸ್ಪಷ್ಟವಾಗಿ ಹೇಳುತ್ತಿದ್ದೇವೆ. ಮೊದಲು ಅವರು ಕಾಯ್ದೆ ಬಗ್ಗೆ ತಿಳಿದುಕೊಳ್ಳಲಿ ಎಂದು ಹೇಳಿದರು.

    ಶಕ್ತಿ ಯೋಜನೆಗೆ ಪಾಸ್ ವಿತರಣೆ
    ಈಗ ಬಳಕೆ ಮಾಡುತ್ತೇವೆ ಎಂದು ಎಲ್ಲೂ ಹೇಳಿಲ್ಲ. ಸಾರಿಗೆ ಮತ್ತು ಸಮಾಜ ಕಲ್ಯಾಣ ಸಚಿವರು ಈ ಬಗ್ಗೆ ಈಗಾಗಲೇ ಸ್ಪಷ್ಟವಾಗಿ ಹೇಳಿದ್ದಾರೆ. ಶಕ್ತಿ ಯೋಜನೆಗೆ ನಾವು ಪಾಸ್ ವಿತರಣೆ ಮಾಡುತ್ತೇವೆ. ವಿತರಣೆ ಮಾಡಬೇಕಾದಾಗ ಎಲ್ಲ ಮಾಹಿತಿ ಪಡೆದುಕೊಳ್ಳುತ್ತೇವೆ. ಕಾರ್ಡ್‌ನಲ್ಲಿ ಜಾತಿ ನಮೂನೆ ಇರುವುದಿಲ್ಲ. ಆದಾರ್ ಕಾರ್ಡ್, ವೋಟರ್ ಐಡಿ ಯಲ್ಲಿರುವ ಮಾಹಿತಿ ಪಡೆದುಕೊಳ್ಳುತ್ತೇವೆ. ಯಾವುದೇ ಕಾನೂನು ಉಲ್ಲಂಘನೆ ಅಗುವುದಿಲ್ಲ ಎಂದರು.

    ಗ್ಯಾರಂಟಿಗಳಿಂದ ಬಿಜೆಪಿಯಲ್ಲಿ ಆತಂಕ
    ಬಿಜೆಪಿಯವರಿಗೆ ಆತಂಕ ಶುರುವಾಗಿದೆ. ಗ್ಯಾರಂಟಿಗಳು ಮೂರು ನಾಲ್ಕು ಕೋಟಿ ಜನಕ್ಕೆ ಹೊಗುತ್ತಿದೆ. ಬಿಜೆಪಿಯವರಿಗೆ ಎಲ್ಲಿ ನೆಲ ಕಚ್ಚುತ್ತೇವೆ ಎಂಬ ಭಯದಿಂದ ಈ ರೀತಿ ಆರೋಪ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
    ಈ ಸರ್ಕಾರ ಎಸ್‌ಸಿ, ಎಸ್‌ಟಿ ಯೋಜನೆಗಳ ಜಾರಿಗೆ ಕಟಿಬದ್ಧವಾಗಿದೆ ಎಂದು ಪ್ರಿಯಾಂಕ್ ಖರ್ಗೆ ಸ್ಪಷ್ಟಪಡಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts