More

    ಟಿಕ್​ಟಾಕ್ ನಿಷೇಧಿಸುವೆನೆಂದ ಟ್ರಂಪ್

    ವಾಷಿಂಗ್ಟನ್: ಚೀನಾ ಮೂಲದ ವಿಡಿಯೋ ಷೇರಿಂಗ್ ಆಪ್ ಟಿಕ್​ಟಾಕ್ ನಿಷೇಧಿಸಲು ಚಿಂತನೆ ನಡೆಸಿರುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ. ನಾವು ಟಿಕ್​ಟಾಕ್​ನತ್ತ ಗಮನ ಹರಿಸಿದ್ದೇವೆ. ಅದನ್ನು ನಿಷೇಧಿಸಲು ಚಿಂತನೆ ನಡೆಸಿದ್ದೇವೆ. ಹಾಗೆಯೇ ಕೆಲವು ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುವುದೆಂದು ಅವರು ಶನಿವಾರ ಪುನರುಚ್ಚರಿಸಿದ್ದಾರೆ.

    ಆಪ್ ಬಳಕೆದಾರರ ಮಾಹಿತಿ ನಿರ್ವಹಣೆ ಮತ್ತು ರಾಷ್ಟ್ರೀಯ ಭದ್ರತೆ ಬಗ್ಗೆ ಕಳೆದ ತಿಂಗಳಷ್ಟೇ ಕಳವಳ ವ್ಯಕ್ತಪಡಿಸಿದ್ದ ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಮೈಕ್ ಪಾಂಪಿಯೊ, ಟಿಕ್​ಟಾಕ್ ಸೇರಿ ಚೀನಾದ ಹಲವು ಮೊಬೈಲ್ ಅಪ್ಲಿಕೇಷನ್ ನಿಷೇಧಿಸುವ ಚಿಂತನೆ ಆರಂಭಿಸಿರುವುದಾಗಿ ಹೇಳಿದ್ದರು. ಟಿಕ್​ಟಾಕ್, ವಿ ಚಾಟ್ ಸೇರಿದಂತೆ ಭಾರತ ಈಗಾಗಲೇ 100ಕ್ಕೂ ಹೆಚ್ಚು ಚೀನಾ ಆಪ್​ಗಳನ್ನು ನಿರ್ಬಂಧಿಸಿದೆ.

    ಇದನ್ನೂ ಓದಿ: PHOTOS: ಶ್ರೀರಾಮಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸದ ತಯಾರಿ ಸಂಭ್ರಮದಲ್ಲಿ ಜಗಮಗಿಸುತ್ತಿದೆ ಅಯೋಧ್ಯೆ

    ಮೈಕ್ರೋಸಾಫ್ಟ್ ತೆಕ್ಕೆಗೆ ಟಿಕ್​ಟಾಕ್?: ಅಮೆರಿಕದಲ್ಲಿ ಚೀನಾ ಆಪ್​ಗಳನ್ನು ನಿಷೇಧಿಸುವ ಕುರಿತು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮುನ್ನಡಿ ಇಟ್ಟಿರುವಂತೆಯೇ ಖ್ಯಾತ ಟೆಕ್ ದಿಗ್ಗಜ ಮೈಕ್ರೋಸಾಫ್ಟ್, ಬೈಟ್​ಡಾನ್ಸ್ ಒಡೆತನದಲ್ಲಿರುವ ಟಿಕ್​ಟಾಕ್ ಖರೀದಿಸಲು ಪ್ರಯತ್ನ ಆರಂಭಿಸಿರುವುದಾಗಿ ತಿಳಿದು ಬಂದಿದೆ. ಅಮೆರಿಕದಲ್ಲಿ ಟಿಕ್​ಟಾಕ್ ಕಾರ್ಯಾಚರಣೆ ಮುಂದುವರಿಸುವ ಹಕ್ಕನ್ನು ಪಡೆದುಕೊಳ್ಳಲು ಮೈಕ್ರೋಸಾಫ್ಟ್ ಚಿಂತನೆ ನಡೆಸಿದ್ದು, ಈ ಸಂಬಂಧ ಮಾತುಕತೆ ಕೂಡ ನಡೆಯುತ್ತಿರುವುದಾಗಿ ಮೂಲಗಳು ತಿಳಿಸಿವೆ.

    ಇದನ್ನೂ ಓದಿ: ತ್ರಿಪುರಾದಲ್ಲಿ ಮರುಸಂಘಟನೆಗೆ ಬಂಡುಕೋರರ ಪ್ರಯತ್ನ: ಮಾಣಿಕ್ ಸರ್ಕಾರ್ ಹೊಸ ರಾಜಕೀಯ ವರಸೆ

    ಈಗಾಗಲೇ ಭಾರತದಲ್ಲಿ ಟಿಕ್​ಟಾಕ್ ನಿಷೇಧಗೊಂಡಿರುವುದರಿಂದ ಅಮೆರಿಕದಲ್ಲೂ ಆಂತರಿಕ ಭದ್ರತೆ ಕಾರಣಕ್ಕೆ ನಿಷೇಧ ಸಾಧ್ಯತೆ ದಟ್ಟವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಟಿಕ್​ಟಾಕ್ ಅನ್ನು ಮೈಕ್ರೋಸಾಫ್ಟ್​ಗೆ ನೀಡಲು ಬೈಟ್​ಡಾನ್ಸ್ ಒಪ್ಪಿಗೆ ಸೂಚಿಸುವ ಸಾಧ್ಯತೆ ಹೆಚ್ಚಿರುವುದಾಗಿ ಹೇಳಲಾಗುತ್ತಿದೆ.

    ವಿಶ್ವಾದ್ಯಂತ 80 ಕೋಟಿ ಟಿಕ್​ಟಾಕ್ ಬಳಕೆದಾರರಿದ್ದಾರೆ. ಆದರೆ ಟಿಕ್​ಟಾಕ್​ನ ಸುರಕ್ಷತೆ ಬಗ್ಗೆಯೇ ಗುಮಾನಿ ಎದ್ದಿದೆ. ಟಿಕ್​ಟಾಕ್ ಮೊಬೈಲ್​ನಿಂದ ಪ್ರತಿ 30 ಸೆಕೆಂಡಿಗೆ ಒಮ್ಮೆ ಲೊಕೇಷನ್​ಗೆ ಸಂಬಂಧಿಸಿದ ಮಾಹಿತಿ ರವಾನೆ ಮಾಡುತ್ತದೆಯಂತೆ. ಜತೆಗೆ ಐಪಿ ವಿಳಾಸ, ವೈಫೈ ಆಕ್ಸೆಸ್ ಪಾಯಿಂಟ್​ಗಳ ಹೆಸರನ್ನೂ ಕದ್ದು ಕಳುಹಿಸುತ್ತದೆ ಎಂಬ ಅಪವಾದವಿದೆ. ಈ ಎಲ್ಲ ಕಾರಣಗಳಿಗಾಗಿಯೇ ಭಾರತ ಈ ಆಪ್ ನಿರ್ಬಂಧಿಸಿದೆ. (ಏಜೆನ್ಸೀಸ್)

    ರಾಷ್ಟ್ರೀಯ ಶಿಕ್ಷಣ ನೀತಿಯ ತಿರಳು ಎಲ್​ಆರ್​ಐ : ಪ್ರಧಾನಿ ನರೇಂದ್ರ ಮೋದಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts