More

    ಮತದಾನ ಪ್ರಕ್ರಿಯೆಯಿಂದ ದೂರವಿರದಿರಿ

    ಗಂಗಾವತಿ: ಹದಿನೆಂಟು ವರ್ಷ ತುಂಬಿದ ಪ್ರತಿಯೊಬ್ಬರೂ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿ ಗುರುತಿನ ಚೀಟಿ ಪಡೆದು ಹಕ್ಕು ಚಲಾಯಿಸಲು ಸಿದ್ಧರಾಗಬೇಕು ಎಂದು ಚುನಾವಣೆ ವಿಭಾಗದ ಸಂಪನ್ಮೂಲ ವ್ಯಕ್ತಿ ಮತ್ತು ಎಸ್‌ಕೆಎನ್‌ಜಿ ಸರ್ಕಾರಿ ಪದವಿ ಕಾಲೇಜಿನ ಪ್ರಾಧ್ಯಾಪಕ ಡಾ.ಜಾಜಿ ದೇವೇಂದ್ರಪ್ಪ ಸಲಹೆ ನೀಡಿದರು.

    ನಗರದ ಎಸ್‌ಕೆಎನ್‌ಜಿ ಸರ್ಕಾರಿ ಪದವಿ ಕಾಲೇಜಿನಲ್ಲಿ ತಾಪಂ ಮತ್ತು ಸ್ವೀಪ್ ಸಮಿತಿ ಮಂಗಳವಾರ ಆಯೋಜಿಸಿದ್ದ ಇವಿಎಂ ಮಷಿನ್ ಹಾಗೂ ವಿವಿ ಪ್ಯಾಟ್ ಯಂತ್ರಗಳ ನಿರ್ವಹಣೆ ಕುರಿತು ಪ್ರಾತ್ಯಕ್ಷಿಕೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಸದೃಢ ದೇಶಕ್ಕಾಗಿ ಶೇ.100 ಮತದಾನವಾಗಬೇಕಿದ್ದು, ಯಾರೊಬ್ಬರೂ ಮತದಾನ ಪ್ರಕ್ರಿಯೆಯಿಂದ ಹೊರಗುಳಿಯಬಾರದು. ವಿದ್ಯಾವಂತರು ಮೊದಲು ಮತದಾನ ಪಟ್ಟಿಗೆ ಸೇರ್ಪಡೆಯಾಗಬೇಕು. ಈ ನಿಟ್ಟಿನಲ್ಲಿ ಜಿಪಂ, ಸ್ವೀಪ್ ಸಮಿತಿ ಹಾಗೂ ತಾಪಂನಿಂದ ಜಾಗೃತಿ ಹಾಗೂ ಪ್ರಾತ್ಯಕ್ಷಿಕೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದರು.

    ಪ್ರಾಧ್ಯಾಪಕ ಡಾ.ಇಮ್ಯಾನುವೆಲ್ ಸಂಜಯಾನಂದ ಮಾತನಾಡಿ, ಯುವಕರು ಮತದಾನ ಪ್ರಕ್ರಿಯೆಯಲ್ಲಿ ಕಡ್ಡಾಯ ಪಾಲ್ಗೊಳ್ಳುವಂತೆ ಸಲಹೆ ನೀಡಿದರು. ವಿದ್ಯಾರ್ಥಿಗಳಿಗೆ ಮತದಾನದ ಪ್ರತಿಜ್ಞಾವಿಧಿ ಬೋಧಿಸಲಾಯಿತು. ನಂತರ ಕಲ್ಪಿತ ಮತದಾನದಲ್ಲಿ 116 ವಿದ್ಯಾರ್ಥಿಗಳು ಹಕ್ಕು ಚಲಾಯಿಸಿದರು.

    ಸಿಡಿಪಿಒ ವಿರೂಪಾಕ್ಷಯ್ಯಸ್ವಾಮಿ, ತಾಪಂ ಸಹಾಯಕ ನಿರ್ದೇಶಕ ಸುರೇಶ ಉಪ್ಪಾರ್, ಚುನಾವಣೆ ವಿಭಾಗದ ಪ್ರತಿನಿಧಿ ಚಂದ್ರಶೇಖರ್, ಉಪನ್ಯಾಸಕರಾದ ಶಿವಕುಮಾರ, ಅಕ್ಕಿ ಮಾರುತಿ, ಐಇಸಿ ಸಂಯೋಜಕ ಬಾಳಪ್ಪ ತಾಳಕೇರಿ, ತಾಪಂ ಸಿಬ್ಬಂದಿ ರಾಘವೇಂದ್ರ, ಹನುಮೇಶ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts