More

    ಟ್ರಂಪ್​ ರಾಜೀನಾಮೆ ನೀಡದಿದ್ದರೆ ನಾವೇ ಅವರನ್ನು ಪದಚ್ಯುತಿ ಮಾಡುತ್ತೇವೆ; ಸ್ಪೀಕರ್​ ನ್ಯಾನ್ಸಿ ಪೆಲೋಸಿ ಎಚ್ಚರಿಕೆ

    ವಾಷಿಂಗ್ಟನ್: ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಸೋಲುಂಡಿರುವ ಡೊನಾಲ್ಟ್​ ಟ್ರಂಪ್​ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡದಿದ್ದರೆ, ನಾವಾಗಿಯೇ ಅವರನ್ನು ಪದಚ್ಯುತಿ ಮಾಡಲಾಗುವುದು ಎಂದು ಅಮೆರಿಕದ ಸಂಸತ್​​ ಸಭೆಯ (ಹೌಸ್ ಆಫ್ ರೆಪ್ರೆಸೆಂಟೆಟೀವ್ಸ್) ಸ್ಪೀಕರ್ ನ್ಯಾನ್ಸಿ ಪೆಲೋಸಿ ಎಚ್ಚರಿಕೆ ನೀಡಿದ್ದಾರೆ.

    ಇದನ್ನೂ ಓದಿ: ಲಡಾಖ್​ನಲ್ಲಿ ಗಡಿ ದಾಟಿ ಭಾರತಕ್ಕೆ ಬಂದ ಚೀನಾ ಸೈನಿಕ; ವಶಕ್ಕೆ ಪಡೆದ ಭಾರತೀಯ ಸೇನೆ

    ನವೆಂಬರ್​ 3ರಂದು ನಡೆದ ಚುನಾವಣೆಯಲ್ಲಿ ರಿಪಬ್ಲಿಕ್​ ಪಕ್ಷದ ಜೋ ಬೈಡೆನ್​ ಬಹುಮತದೊಂದಿಗೆ ವಿಜಯ ಸಾಧಿಸಿದ್ದಾರೆ. ಅವರು ಸಂವಿಧಾನದ ಆದೇಶದಂತೆ ಜನವರಿ 20 ರಂದು ಅಧಿಕಾರ ಸ್ವೀಕರಿಸಬೇಕಿದೆ. ಆದರೆ ಇನ್ನೂ ಅಧ್ಯಕ್ಷ ಸ್ಥಾನದಲ್ಲಿರುವ ಟ್ರಂಪ್​ ಅವರು ರಾಜೀನಾಮೆ ನೀಡಿಲ್ಲ. ಈ ಮಧ್ಯೆ ಸಂಸತ್​ ಭವನದ ಮೇಲೆ ಟ್ರಂಪ್​ ಅನುಯಾಯಿಗಳು ಮುತ್ತಿಗೆ ಹಾಕಲಾರಂಭಿಸಿದ್ದಾರೆ. ಹೀಗಾಗಿ ತಕ್ಷಣವೇ ಟ್ರಂಪ್​ ಅವರು ರಾಜೀನಾಮೆ ನೀಡಬೇಕು. ಇಲ್ಲವಾದಲ್ಲಿ ತಮ್ಮ ಅನುಯಾಯಿಗಳಿಗೆ ಸಂಸತ್​ ಭವನಕ್ಕೆ ಮುತ್ತಿಗೆ ಹಾಕಲು ಪ್ರಚೋದಿಸಿದ್ದಾರೆ ಎನ್ನುವ ಆರೋಪದ ಮೇಲೆ ಅವರನ್ನು ಪದಚ್ಯುತಿ ಮಾಡಲಾಗುವುದು ಎಂದು ನ್ಯಾನ್ಸಿ ಅವರು ತಿಳಿಸಿದ್ದಾರೆ. ಸಂವಿಧಾನದ 25ನೇ ತಿದ್ದುಪಡಿಯ ಅಸ್ತ್ರ ಹಾಗೂ ಮಹಾಭಿಯೋಗ(ಪದಚ್ಯುತಿ) ನಿರ್ಣಯದೊಂದಿಗೆ ಮುಂದುವರಿಯಲು ನಿಯಮಗಳ ಸಮಿತಿಗೆ ಸೂಚಿಸಿದ್ದೇನೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ಇದನ್ನೂ ಓದಿ: ಗ್ಯಾಂಗ್​ ರೇಪ್​ ಮಾಡಿ ಗುಪ್ತಾಂಗಕ್ಕೆ ಗ್ಲಾಸಿನ ಚೂರು ತುಂಬಿದ ಪಾಪಿಗಳು! ಸಾವು ಬದುಕಿನ ನಡುವೆ ಮಹಿಳೆಯ ಹೋರಾಟ

    ಸಂಸತ್ ಭವನದ ಮೇಲೆ ಮುತ್ತಿಗೆ ಹಾಕಿರುವುದನ್ನು ಖಂಡಿಸಿರುವ ಡೆಮಾಕ್ರಟಿಕ್​ ಪಕ್ಷದ ನಾಯಕರು, ಟ್ರಂಪ್​ ಅವರನ್ನು ಪಕ್ಷದ ಅಧ್ಯಕ್ಷ ಸ್ಥಾನದಿಂದಲೂ ತೆಗೆದುಹಾಕಬೇಕು ಎಂದು ಒತ್ತಾಯಿಸುತ್ತಿದ್ದಾರೆ. (ಏಜೆನ್ಸೀಸ್​)

    ಪಾರ್ಟಿಗೆ ಮಗಳನ್ನು ಕರೆದು ಹತ್ಯೆ ಮಾಡಿ, ಪ್ರಿಯಕರನನ್ನು ರೇಪ್​ ಮಾಡಿ ಕೊಂದ ಕುಟುಂಬ: ಬೆಚ್ಚಿಬೀಳಿಸುವ ಪ್ರಕರಣವಿದು!

    ಬಂಧಿತ ಯುವತಿಯರ ಮೊಬೈಲ್​, ಲ್ಯಾಪ್​ಟಾಪ್​ ತುಂಬಾ ಪೋರ್ನ್​ ವಿಡಿಯೋಗಳು: ಎಫ್​ಎಸ್​ಎಲ್​ ಸ್ಫೋಟಕ ವರದಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts