More

    ಊರಿಗೆ ಹೋಗಿ ಡ್ರಗ್ಸ್​ ವಿರುದ್ಧ ಸಮರ ಸಾರಲಿ … ಕಂಗನಾಗೆ ಊರ್ಮಿಳಾ ಸವಾಲ್​

    ಚುನಾವಣೆಗಳಲ್ಲಿ ಸೋತ ನಂತರ ಮರೆಯಾಗಿದ್ದ ಬಾಲಿವುಡ್​ ನಟಿ ಊರ್ಮಿಳಾ ಮಾತೋಂಡ್ಕರ್​ ಈಗ ಬಹಳ ದಿನಗಳ ನಂತರ ಮಾಧ್ಯಮಗಳೆದುರು ಕಾಣಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ, ಈ ಬಾರಿ ನಟಿ ಕಂಗನಾ ರಣಾವತ್​ಗೆ ತಮ್ಮ ಮಾತುಗಳಿಂದ ತಿರುಗೇಟು ಕೊಟ್ಟಿದ್ದಾರೆ.

    ಇದನ್ನೂ ಓದಿ: ಹಿಂದಿ ಹೇರಲು ಬಂದರೆ ನಾವೆಂದೂ ಸುಮ್ಮನೆ ಕೂರುವುದಿಲ್ಲ: ‘ದುನಿಯಾ’ ವಿಜಯ್​

    ಸುಶಾಂತ್​ ಸಿಂಗ್​ ರಜಪೂತ್​ ನಿಧನರಾಗಿ ಈ ಮೂರು ತಿಂಗಳಲ್ಲಿ ಕಂಗನಾ, ಹಲವು ವಿಷಯಗಳ ಕುರಿತು ಸಾಕಷ್ಟು ಮಾತನಾಡಿದ್ದಾರೆ. ಕೆಲವು ವಿಷಯಗಳ ಬಗ್ಗೆ ಅವರಾಡಿರುವ ಮಾತುಗಳು ಸಾಕಷ್ಟು ಚರ್ಚೆಯಾಗಿದೆ. ಅದರಲ್ಲೂ ಬಾಲಿವುಡ್​ನಲ್ಲಿ ಡ್ರಗ್ಸ್​ ಬಳಕೆ ಬಗ್ಗೆ ದೊಡ್ಡ ಮಟ್ಟದಲ್ಲಿ ಪರ-ವಿರೋಧ ಚರ್ಚೆಗಳು ಕೇಳಿ ಬರುತ್ತಿದ್ದು, ಈಗ ಊರ್ಮಿಳಾ ಕೂಡಾ ತಮ್ಮ ಧ್ವನಿಗೂಡಿಸಿದ್ದಾರೆ.

    ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, ‘ಬರೀ ಬಾಲಿವುಡ್​ ಅಷ್ಟೇ ಅಲ್ಲ, ಇಡೀ ದೇಶವೇ ಡ್ರಗ್ಸ್​ ಸಮಸ್ಯೆಯನ್ನು ಎದುರಿಸುತ್ತಿದೆ. ಕಂಗನಾ ಮೂಲತಃ ಹಿಮಾಚಲ ಪ್ರದೇಶದವರು. ಡ್ರಗ್ಸ್​ನ ಮೂಲ ಇರುವುದು ಅಲ್ಲೇ ಮತ್ತು ಅಲ್ಲಿಂದಲೇ ಅವರು ಡ್ರಗ್ಸ್​ ವಿರುದ್ಧ ಸಮರಸಾರಲಿ. ಅಲ್ಲ, ಅವರಿಗೆ ವೈ ಸೆಕ್ಯುರಿಟಿ ನೀಡಲಾಗಿದೆ. ಹಾಗಿರುವಾಗ ಅವರ್ಯಾಕೆ ಪೊಲಿಸರಿಗೆ ಈ ಜಾಲದ ಬಗ್ಗೆ ಹೇಳುತ್ತಿಲ್ಲ’ ಎಂದು ಪ್ರಶ್ನಿಸಿದ್ದಾರೆ.

    ಇನ್ನು ಮುಂಬೈ ನಗರವನ್ನು ಪಾಕ್​ ಆಕ್ರಮಿತ ಕಾಶ್ಮೀರ ಎಂದು ಕಂಗನಾ ಹೇಳಿರುವ ಬಗ್ಗೆ ಮಾತನಾಡಿರುವ ಅವರು, ‘ಈ ಮುಂಬೈ ಎಲ್ಲರಿಗೂ ಸೇರಿದ್ದು. ಯಾರ್ಯಾರು ಈ ನಗರವನ್ನು ಪ್ರೀತಿಸುತ್ತಾರೋ, ಅವರು ತಮ್ಮದೇ ರೀತಿಯಲ್ಲಿ ಕೊಡುಗೆಯನ್ನು ಕೊಡುವ ಪ್ರಯತ್ನ ಮಾಡುತ್ತಾರೆ. ಈ ನಗರದ ಬಗ್ಗೆ ಕೆಟ್ಟದಾಗಿ ಮಾತನಾಡಿದರೆ ನಾನು ಸುಮ್ಮನಿರೋಲ್ಲ. ಈ ತರಹ ಮಾತನಾಡುವುದರಿಂದ ಬರೀ ಆ ನಗರವನ್ನಷ್ಟೇ ಅಲ್ಲ, ಅಲ್ಲಿನ ಜನರನ್ನೂ ಅಪಮಾನ ಮಾಡುತ್ತಿದ್ದಾರೆ ಎಂಬುದನ್ನು ಮರೆಯಬಾರದು’ ಎಂದು ಊರ್ಮಿಳಾ ಹೇಳಿದ್ದಾರೆ.

    ಇದನ್ನೂ ಓದಿ: ಇವತ್ತೂ ಸಿಗಲಿಲ್ಲ ರಿಲೀಫ್​ … ಇನ್ನೂ ಮೂರು ದಿನಗಳ ಕಾಲ ರಾಗಿಣಿ ಜೈಲುವಾಸ

    ಕಂಗನಾ ಕುರಿತು ಮಾತನಾಡಿರುವ ಊರ್ಮಿಳಾ, ‘ಒಬ್ಬರು ಯಾವಾಗಲೂ ಜೋರಾಗಿ ಮಾತನಾಡುತ್ತಾರೆ ಎಂದರೆ, ಅವರು ಯಾವಾಗಲೂ ನಿಜ ಹೇಳುತ್ತಿದ್ದಾರೆ ಎಂದರ್ಥವಲ್ಲ. ಕೆಲವರಿಗೆ ಕೊರಗುವುದು ಅಭ್ಯಾಸವಾಗಿದೆ. ಹಾಗಾಗಿ ಒಂದಲ್ಲಾ ಒಂದು ಕಾರಣಕ್ಕೆ ಮಾತನಾಡುತ್ತಲೇ ಇರುತ್ತಾರೆ’ ಎಂದು ಹೇಳಿದ್ದಾರೆ.

    ರಾಮ್​ಗೋಪಾಲ್​ ವರ್ಮಾ ಬಯೋಪಿಕ್​ನಲ್ಲಿ ಹೀರೋ ಇವರೇ …

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts