More

    ಒಬ್ಬರಲ್ಲ, 26 ‘ಅನಾಮಿಕ’ರು ಬಲೆಗೆ; ಉತ್ತರಪ್ರದೇಶದಲ್ಲಿ ನಡೆದಿದೆ ಕರ್ನಾಟಕದಂಥದ್ದೇ ಶಿಕ್ಷಕರ ನೇಮಕಾತಿ ಹಗರಣ

    ಬೆಂಗಳೂರು: 15 ವರ್ಷಗಳ ಹಿಂದೆ ಕರ್ನಾಟಕದಲ್ಲಿ ಶಿಕ್ಷಕರ ನೇಮಕಾತಿಯಲ್ಲಿ ಭಾರಿ ಹಗರಣ ನಡೆದಿತ್ತು. ಆಸ್ತಿತ್ವದಲ್ಲಿ ಇಲ್ಲದ ಶಿಕ್ಷಣ ಸಂಸ್ಥೆಗಳಿಂದ ಪ್ರಮಾಣ ಪತ್ರ, ವರ್ಗಾವಣೆ ಪತ್ರ ಪಡೆದು ಸರ್ಕಾರಿ ಉದ್ಯೋಗ ಗಿಟ್ಟಿಸಿದ್ದರು. ಈಗ ಅಂಥದ್ದೇ ಹಗರಣ ಉತ್ತರಪ್ರದೇಶದಲ್ಲೂ ವರದಿಯಾಗಿದೆ.

    ಅನಾಮಿಕಾ ಶುಕ್ಲಾ ಎಂಬಾಕೆ 25 ಶಾಲೆಗಳಲ್ಲಿ ಏಕಕಾಲಕ್ಕೆ ಕೆಲಸ ನಿರ್ವಹಿಸಿ ಒಂದು ವರ್ಷಕ್ಕೂ ಹೆಚ್ಚು ಕಾಲದಿಂದ ಒಂದು ಕೋಟಿ ರೂ. ಅಧಿಕ ಸಂಬಳ ಪಡೆದಿದ್ದಾಳೆ ಎಂಬ ಸುದ್ದಿ ಕೆಲ ದಿನಗಳಿಂದ ಭಾರಿ ಸುದ್ದಿಯಲ್ಲಿದೆ. ಅಸಲಿಗೆ ಅಲ್ಲಿರುವುದು ಒಬ್ಬ ಅನಾಮಿಕಾ ಅಲ್ಲ ಬದಲಿಗೆ 26ಕ್ಕೂ ಹೆಚ್ಚು ಜನರನ್ನು ವಿಶೇಷ ತನಿಖಾ ದಳದವರು ಬಂಧಿಸಿದ್ದಾರೆ.

    ಇದನ್ನೂ ಓದಿ; ಒಂದೇ ವರ್ಷದಲ್ಲಿ 1.25 ಕೋಟಿ ರೂ. ಗಳಿಸಿದ ವಿಜ್ಞಾನ ಶಿಕ್ಷಕಿಯ ವಂಚನಾ ಕಲೆ; ಬೆಳಕಿಗೆ ಬಂದೇ ಇಲ್ಲ ಅನಾಮಿಕಾ 

    ಎರಡು ದಿನಗಳ ಹಿಂದಷ್ಟೇ ಪ್ರಿಯಾ ಸಿಂಗ್​ ಎಂಬಾಕೆ ಪೊಲೀಸರ ಬಲೆಗೆ ಬಿದ್ದಿದ್ದಳು. ಅನಾಮಿಕಾ ಶುಕ್ಲಾ ಹೆಸರಿನ ಅಂಕಪಟ್ಟಿ, ಪ್ರಮಾಣ ಪತ್ರ ಪಡೆದು ಕಸ್ತೂರಬಾ ಬಾಲಿಕಾ ವಿದ್ಯಾಲಯದಲ್ಲಿ ಶಿಕ್ಷಕಿಯ ಉದ್ಯೋಗ ಗಿಟ್ಟಿಸಿರುವುದಾಗಿ ಹೇಳಿದ್ದಳು. ಇದಕ್ಕಾಗಿ ಮಧ್ಯವರ್ತಿಗೆ ಐದು ಲಕ್ಷ ರೂ. ಲಂಚ ನೀಡಿದ್ದಾಗಿ ತಿಳಿಸಿದ್ದಳು. ಅಲ್ಲಿಗೆ ಇದು ನಕಲಿ ಪ್ರಮಾಣ ಪತ್ರ ಸಲ್ಲಿಸಿ ಉದ್ಯೋಗ ಪಡೆದಿರುವ ಪ್ರಕರಣ ಎಂದು ಪೊಲೀಸರಿಗೆ ಗೊತ್ತಾಗಿದೆ. ತನಿಖೆ ಚುರುಕುಗೊಳಿಸುತ್ತಿದ್ದಂತೆ ಇದೇ ತಂತ್ರ ಬಳಸಿ ಅಂದರೆ ನಕಲಿ ಪ್ರಮಾಣ ಪತ್ರಗಳನ್ನು ಸಲ್ಲಿಸಿ ಉದ್ಯೋಗ ಪಡೆದ 26 ಮಂದಿಯನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.

    ಬಂಧಿತರಿಗೆ ಶಿಕ್ಷಕರಾಗುವ ಅರ್ಹತೆಯೇ ಇಲ್ಲ. ಅವರಲ್ಲಿ ಒಬ್ಬರು ಮುಂದಿನ ವರ್ಷ ನಿವೃತ್ತರಾಗಲಿದ್ದಾರೆ. ಕೆಲವರು 15, 20 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. 13 ಜನರು ದೂರದ ಜಿಲ್ಲೆಗಳಲಿರುವ ಶಿಕ್ಷಕರ ದಾಖಲೆಗಳನ್ನು ಫೋರ್ಜರಿ ಮಾಡಿ ಸಲ್ಲಿಸಿದ್ದಾರೆ. 10 ಜನ ಹೆಚ್ಚು ಅಂಕ ಪಡೆದವರ ದಾಖಲೆಗಳನ್ನು ಸಲ್ಲಿಸಿದ್ದರೆ, ಮೂವರು ನಕಲಿ ವರ್ಗಾವಣೆ ಪ್ರಮಾಣ ಪತ್ರಗಳನ್ನು ನೀಡಿದ್ದಾರೆ.

    ಇದನ್ನೂ ಓದಿ; ಹತ್ತು ವರ್ಷ 3.5 ಲಕ್ಷ ಜನ ಆ ನಿಧಿಗಾಗಿ ಹುಡುಕಿದ್ದರು; ಅಷ್ಟಕ್ಕೂ ಎಲ್ಲಿತ್ತು? ಎಷ್ಟಿತ್ತು?

    ಸರ್ವ ಶಿಕ್ಷಣ ಅಭಿಯಾನದಲ್ಲಿ ಶಿಕ್ಷಕರ ಮಾಹಿತಿಯನ್ನೆಲ್ಲ ಕ್ರೋಡೀಕರಿಸುತ್ತಿದ್ದಾಗ ಅನಾಮಿಕಾ ಶುಕ್ಲಾ ಹೆಸರಿನ ಶಿಕ್ಷಕಿ 25 ಕಡೆಗಳಲ್ಲಿ ಕೆಲಸ ಮಾಡುತ್ತಿರುವುದು ಗೊತ್ತಾದಾಗ ತನಿಖೆ ನಡೆಸಲಾಗಿತ್ತು. ಅಲ್ಲಿ ಇವರ ಬಂಡವಾಳ ಬಯಲಾಗಿದೆ.

    ಈ ಹಗರಣದಲ್ಲಿ ಅಧಿಕಾರಿಗಳು ಹಾಗೂ ಮಧ್ಯವರ್ತಿಗಳ ಪಾತ್ರವನ್ನು ಅಲ್ಲಗೆಳೆಯುವಂತಿಲ್ಲ. ಸದ್ಯ ಉತ್ತರಪ್ರದೇಶದಲ್ಲಿ ಸರ್ಕಾರಿ ಶಿಕ್ಷಕರಿಗೆ ಆರಂಭದಲ್ಲಿಯೇ 40 ಸಾವಿರ ರೂ. ಸಂಬಳವಿದ್ದರೆ, ಹಿರಿಯರಿಗೆ 70 ಸಾವಿರ ರೂ.ವರೆಗೆ ನಿಡಲಾಗುತ್ತದೆ. ಇದೊಂದು ಬಹುಕೋಟಿ ರೂ. ವಂಚನೆ ಪ್ರಕರಣವೆಂಬುದು ಖಚಿತವಾಗಿದೆ.

    ನನ್ನ ವಿಮಾನದ ಟಿಕೆಟ್​ಗಾಗಿ ತಂದೆ ವರ್ಷದ ಸಂಬಳ ಖರ್ಚು ಮಾಡಿದ್ದರು; ಸಂಕಷ್ಟದ ದಿನ ನೆನೆದ ಗೂಗಲ್​ ಸಿಇಒ ಸುಂದರ್​ ಪಿಚಾಯಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts