More

    ಯಾರೋ ಮಾಡಿದ ತಪ್ಪಿಗೆ ತಂದೆ ನನ್ನನ್ನು ನೀಲಿಚಿತ್ರ ನಟಿ ಎಂದು ಹೊಡೆಯುತ್ತಿದ್ದರು: ಊರ್ಫಿ ಜಾವೇದ್!

    ನವದೆಹಲಿ: ಊರ್ಫಿ ಜಾವೇದ್ 15 ವರ್ಷದವರಿದ್ದಾಗ ಯಾರೋ ಪಾರ್ನ್ ಸೈಟ್‌ನಲ್ಲಿ ಅವರ ಚಿತ್ರವನ್ನು ಅಪ್‌ಲೋಡ್ ಮಾಡಿದ್ದರು. ಈ ಸಂದರ್ಭದಲ್ಲಿ ಅವರನ್ನು ಮನೆಯಲ್ಲಿ ಥಳಿಸಿದ ಬಗ್ಗೆ ಉರ್ಫಿ ಜಾವೇದ್ ಮಾತನಾಡಿದ್ದಾರೆ.

    ಉರ್ಫಿ ಜಾವೇದ್ ಬಿಗ್ ಬಾಸ್ ಕಾಣಿಸಿಕೊಂಡ ನಂತರ ಅವರ ವಿಚಿತ್ರ ತುಂಡುಡುಗೆಗಳಿಂದಾಗಿ ಅವರು ಅತ್ಯಂತ ಜನಪ್ರಿಯ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದಾರೆ. .ಆದರೂ, ಅವಳ ಬಾಲ್ಯ ಮತ್ತು ಹದಿಹರೆಯದಲ್ಲಿ ತುಂಬಾ ಕಷ್ಟವನ್ನು ಅನುಭವಿಸಿದ್ದಾರೆ ಎಂದು ಇತ್ತೀಚೆಗಿನ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ಊರ್ಫಿ 17 ನೇ ವಯಸ್ಸಿನಲ್ಲಿದ್ದಾಗ ಮನೆಯಿಂದ ಓಡಿಹೋಗುವ ನಿರ್ಧಾರದ ಬಗ್ಗೆ ಮಾತನಾಡಿದ್ದು ಅವರು ಏಕೆ ಈ ಹೆಜ್ಜೆ ಇಟ್ಟರು ಎಂಬುದನ್ನೂ ಈ ಸಂದರ್ಶನದಲ್ಲಿ ಬಿಚ್ಚಿಟ್ಟಿದ್ದಾರೆ.

    ಊರ್ಫಿ ಜಾವೇದ್ ಚಿಕ್ಕ ವಯಸ್ಸಿನಲ್ಲಿ ಅನುಭವಿಸಿದ್ದೇನು?

    ಹ್ಯೂಮನ್ಸ್ ಆಫ್ ಬಾಂಬೆ ಜತೆಗೆ ಮಾತನಾಡಿದ ಊರ್ಫಿ, ಯಾರೋ ಪಾರ್ನ್ ಸೈಟ್‌ನಲ್ಲಿ ನನ್ನ ಫೋಟೋಗಳನ್ನು ಹಾಕಿದಾಗ ಎಲ್ಲಾ ಸಮಸ್ಯೆಗಳೂ ಪ್ರಾರಂಭವಾಸವು. ನಾನು 15 ವರ್ಷದವಳಾಗಿದ್ದಾಗ ಪಾರ್ನ್ ಸೈಟ್‌ನಲ್ಲಿ ನನ್ನ ಚಿತ್ರವನ್ನು ಯಾರೋ ಅಪ್‌ಲೋಡ್ ಮಾಡಿದ್ದಾರೆ. ಅದು ಸಾಮಾನ್ಯ ಚಿತ್ರವಾಗಿತ್ತು. ಅದು ನನ್ನ ಫೇಸ್‌ಬುಕ್ ಪ್ರೊಫೈಲ್ ಫೋಟೋ ಆಗಿತ್ತು. ಅದರಲ್ಲಿ ನಾನು ಟ್ಯೂಬ್ ಟಾಪ್ ಧರಿಸಿದ್ದೆ. ಯಾರೋ ಅದನ್ನು ಡೌನ್‌ಲೋಡ್ ಮಾಡಿ ಮಾರ್ಫಿಂಗ್ ಮಾಡದೆ ಪೋರ್ನ್ ಸೈಟ್‌ನಲ್ಲಿ ಅಪ್‌ಲೋಡ್ ಮಾಡಿದ್ದಾರೆ. ನಿಧಾನವಾಗಿ ಎಲ್ಲರಿಗೂ ವಿಷಯ ತಿಳಿಯಿತು.ಎಲ್ಲರೂ ನನ್ನನ್ನು ತುಂಬಾ ಕೆಟ್ಟದಾಗಿ ಬೈದುಕೊಳ್ಳಲು ಶುರುಮಾಡಿದರು. ನಾನು ಪಾರ್ನ್ ಸ್ಟಾರ್ ಅಂತ ಹೇಳಿದಾಗ ‘ವೀಡಿಯೋ ಎಲ್ಲಿದೆ?’ ಎಂದು ಕೇಳಿದೆ. ಆದರೆ ಅವರು, ‘ಇಲ್ಲ, ಇಲ್ಲ ನೀನು ಪೋರ್ನ್ ಸ್ಟಾರ್’ ಎಂದು ನನ್ನನ್ನು ಕರೆದರು”

    “ನನ್ನ ತಂದೆ ಕೂಡ ನಾನು ಪಾರ್ನ್ ಸ್ಟಾರ್ ಎಂಬಂತೆ ಇದ್ದರು. ನನ್ನ ತಂದೆ ಇದೆಲ್ಲದರಿಂದ ಸಹಾನುಭೂತಿ ಪಡೆಯಲು ಪ್ರಯತ್ನಿಸುತ್ತಿದ್ದಾರೆ ಎಂದು ನಾನು ಭಾವಿಸುತ್ತೇನೆ. ಪಾರ್ನ್ ಸೈಟ್​ನವರು ಫೋಟೊ ತೆಗೆದುಹಾಕಲು ₹ 50 ಲಕ್ಷ ಕೇಳುತ್ತಿದ್ದಾರೆ ಎಂದು ಎಲ್ಲರಿಗೂ ಹೇಳುತ್ತಿದ್ದರು. ಇದೆಲ್ಲಾ ಸುಳ್ಳು ಎಂಬಂತೆ ನಾನಿದ್ದೆ. ಆದರೆ ಮನೆಯಲ್ಲಿ ಅವರು ನನ್ನನ್ನು ಹೊಡೆಯುತ್ತಿದ್ದರಿಂದ ನಾನು ಏನನ್ನೂ ಹೇಳಲು ಸಾಧ್ಯವಾಗುತ್ತಿರಲಿಲ್ಲ. ‘ಇಲ್ಲಿ ನಾನೇ ಬಲಿಪಶು, ಯಾಕೆ ಹೊಡೆಯುತ್ತಿದ್ದೀಯಾ?’ ಎಂದು ಕೇಳುತ್ತಿದ್ದೆ. ಅಷ್ಟು ಗೊಂದಲದಲ್ಲಿದ್ದೆ ನಾನು. ಆದರೆ ಯಾರೂ ಅದನ್ನು ನಂಬಲು ಸಿದ್ಧರಿರಲಿಲ್ಲ. ನಾನು ಅದನ್ನು ಎರಡು ವರ್ಷಗಳ ಕಾಲ ಸಹಿಸಿಕೊಂಡೆ. ಸಂಬಂಧಿಕರಿಂದ, ನನ್ನ ಸ್ವಂತ ತಂದೆಯಿಂದ ಅಪಮಾನ ಸಹಿಸಲು ತುಂಬಾ ಕಷ್ಟವಾಯಿತು. ನಾನು ಓಡಿಹೋದಾಗ ನನಗೆ 17 ವರ್ಷ, ”ಎಂದು ಅವರು ಹೇಳಿದರು.

    ಸಹೋದರಿಯರಿಗೂ ಜೀವನ ಕಟ್ಟಿಕೊಟ್ಟ ಊರ್ಫಿ

    ಊರ್ಫಿ ತಮ್ಮ ಸಹೋದರಿಗೂ ಮನೆ ಬಿಟ್ಟು ಲಕ್ನೋದಲ್ಲಿ ವಾಸಿಸಲು ಸ್ಥಳವನ್ನು ಹುಡುಕಿಕೊಟ್ಟಿದ್ದಾರೆ. ಅವರು ಮಕ್ಕಳಿಗೆ ಪಾಠ ಹೇಳುವ ಮೂಲಕ ಬಾಡಿಗೆ ಪಾವತಿಸಿದ್ದರು. ನಂತರ ಅವರು ದೆಹಲಿಗೆ ತೆರಳಿ ಅಲ್ಲಿ ಅವರು ಸ್ವಲ್ಪ ಸಮಯದವರೆಗೆ ಒಬ್ಬ ಸ್ನೇಹಿತನ ಫ್ಲಾಟ್‌ನಲ್ಲಿದ್ದರು. ಅಲ್ಲಿಂದ ಇನ್ನೊಂದು ಫ್ಲಾಟ್​ಗೆ ಸ್ಥಳಾಂತರಗೊಂಡರು. ನಂತರ ಕಾಲ್ ಸೆಂಟರ್​ನಲ್ಲೂ ಕೆಲಸ ಮಾಡಿದರು. ಅದಾದ ಮೇಲೆ ಅವರು ಮುಂಬೈಗೆ ತೆರಳಿ ಪಿಜಿಯಲ್ಲಿ ವಾಸಿಸುತ್ತಿದ್ದರು. ಸಣ್ಣಪುಟ್ಟ ಪಾತ್ರಗಳಿಗಾಗಿ ಆಡಿಷನ್ ಮಾಡಿದರು. ಈ ಸಂದರ್ಭದಲ್ಲಿ ಅವರು ದೂರದರ್ಶನದಲ್ಲಿ ಸಣ್ಣ ಕೆಲಸವನ್ನು ಕಂಡುಕೊಂಡರು.

    ಅವರು ಈಗ ಅಜಿಯೋ ಮತ್ತು ಅಬು ಜಾನಿ ಮತ್ತು ಸಂದೀಪ್ ಖೋಸ್ಲಾ ಅವರಂತಹ ಬ್ರ್ಯಾಂಡ್‌ಗಳೊಂದಿಗೆ ಕೆಲಸ ಮಾಡುತ್ತಿದ್ದಾರೆ. ಅವರು ಇತ್ತೀಚೆಗೆ OTT ಪ್ಲೇ ಚೇಂಜ್ ಮೇಕರ್ಸ್ ಪ್ರಶಸ್ತಿಗಳ ಭಾಗವಾಗಿದ್ದರು. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts