More

    “ನಾವು ಮತ ಹಾಕಲು ಮಾತ್ರ ಇರೋದಾ?” ಮುಸ್ಲಿಂ ಮುಖಂಡರ ಕೆಂಗಣ್ಣು!

    ಬೆಂಗಳೂರು: ರಾಜ್ಯದಲ್ಲಿ ಚುನಾವಣೆ ನಡೆಯುತ್ತಿದ್ದು ಈ ಹಿನ್ನಲೆಯಲ್ಲಿ ರಾಜ್ಯ ಸುನ್ನಿ ಉಲ್ಲಾ ಬೋರ್ಡ್ ವತಿಯಿಂದ ಪತ್ರಿಕಾಗೋಷ್ಠಿ ನಡೆಸಿದರು. ಈ ಸಂದರ್ಭ ಕಾಂಗ್ರೆಸ್​ಗೆ ಇನ್ನಷ್ಟು ಮುಸಲ್ಮಾನರಿಗೆ ಟಿಕೆಟ್​ ನೀಡುವಂತೆ ಮುಖಂಡರು ಒತ್ತಾಯ ಮಾಡಿದ್ದಾರೆ. 

    ಪಕ್ಷಗಳು ಇನ್ನಷ್ಟು ಮುಸಲ್ಮಾನರಿಗೆ ಟಿಕೆಟ್​ ನೀಡಬೇಕು

    ಈ ಸಂದರ್ಭ ಮುಸ್ಲಿಂ ನಾಯಕರಿಗೆ ಟಿಕೇಟ್ ನೀಡುವಂತೆ ಒತ್ತಾಯ ಮಾಡಲಾಗಿದ್ದು ಕಾಂಗ್ರೆಸ್ ಆಯ್ಕೆ ಸಮಿತಿಯಲ್ಲಿ ಒಬ್ಬ ಮುಸ್ಲಿಂ ಮುಖಂಡ ಇಲ್ಲದಿರುವ ಬಗ್ಗೆ ಆಕ್ರೋಶ ವ್ಯಕ್ತವಾಗಿದೆ. 116 ಸೀಟ್ ಗಳಲ್ಲಿ 11 ಜನ ಮುಸ್ಲಿಂ ಅಭ್ಯರ್ಥಿಗಳಿಗೆ ಟಿಕೆಟ್ ನೀಡಲಾಗಿದ್ದು ರಾಜ್ಯದಲ್ಲಿ ಒಟ್ಟು 21 ಮುಸ್ಲಿಂ ನಾಯಕರಿಗೆ ಟಿಕೆಟ್ ನೀಡಲು ಮುಸ್ಲಿಂ ಮುಖಂಡರು ಆಗ್ರಹಿಸಿದ್ದಾರೆ.

    ಸದ್ಯ ಕೇವಲ 11 ಮುಸ್ಲಿಂ ನಾಯಕರಿಗೆ ಮಾತ್ರ ಟಿಕೇಟ್ ನೀಡಲಾಗಿದ್ದು ಮುಸ್ಲಿಂ ಸಮುದಾಯಕ್ಕೆ ಅನ್ಯಾಯವಾಗಿದೆ ಎಂದು ಮುಖಂಡರು ಸಿಡಿಮಿಡಿಗೊಂಡಿದ್ದಾರೆ. ಇದೇ ಸಂದರ್ಭ ಮಸ್ಲಿಂ ಮುಖಂಡರು ಟಿಕೆಟ್ ಕೊಡುವುದು ಮಾತ್ರವಲ್ಲ ಅಭ್ಯರ್ಥಿಯ ಗೆಲುವಿಗೆ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷ ಶ್ರಮಿಸಬೇಕು ಎಂದೂ ಆಗ್ರಹಿಸಿದ್ದಾರೆ.

    ಕೆಜಿಎಫ್​ ಬಾಬುಗೆ ಟಿಕೆಟ್​ ಯಾಕೆ ನೀಡಿಲ್ಲ?

    ಶಿಗ್ಗಾವ್, ಚಿಕ್ಕ ಪೇಟೆ, ಮಂಗಳೂರು, ದಾವಣಗೆರೆ, ಹುಮುನಬಾದ್ ನಲ್ಲಿ ಮುಸ್ಲಿಂ ಅಭ್ಯರ್ಥಿಯ ಗೆಲುವು ಖಚಿತ ಎಂದೇ ಹೇಳಲಾಗುತ್ತಿದ್ದರೂ ಆದರೆ ಆ ಕ್ಷೇತ್ರದಲ್ಲಿ ಮುಸ್ಲಿಂರಿಗೆ ಟಿಕೇಟ್ ನೀಡಿಲ್ಲ ಎಂದು ಮುಸಲ್ಮಾನ ಮುಖಂಡರು ಪ್ರಶ್ನಿಸಿದ್ದಾರೆ. ಇದೇ ವೇಳೆ ಕೆಜಿಎಫ್ ಬಾಬುಗೆ ಯಾಕೆ ಟಿಕೇಟ್ ನೀಡಿಲ್ಲ ಎನ್ನುವ ಪ್ರಶ್ನೆಯೂ ಎದ್ದಿದ್ದು ಚಿಕ್ಕ ಪೇಟೆಯಲ್ಲಿ ಕೆಜಿಎಫ್ ಬಾಬುಗೆ ಟಿಕೇಟ್ ನೀಡಬೇಕು ಎಂದು ಒತ್ತಾಯಿಸಲಾಗಿದೆ.

    ಮುಸ್ಲಿಮರು ಕೇವಲ ಮತ ಹಾಕಲು ಮಾತ್ರ ಇರೋದಾ?

    ಈ ಸಂದರ್ಭ ಕರ್ನಾಟಕ ವರ್ಕ್ಫ್ ಬೋರ್ಡ್ ಅಧ್ಯಕ್ಷ ಶಾಫಿ ಸ ಅದಿ “ಮುಸ್ಲಿಮರು ಕೇವಲ ಮತ ಹಾಕಲು ಮಾತ್ರ ಇರೋದಾ? ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಕೇವಲ‌ ಮುಸ್ಲಿಂರನ್ನು ವೋಟ್ ಬ್ಯಾಂಕ್ ಆಗಿ ಬಳಸುತ್ತಿವೆ” ಎಂದು ಹೇಳಿಕೆ ನೀಡಿದ್ದಾರೆ.

    ಇನ್ನು ಚಿಕ್ಕಪೇಟೆ ಟಿಕೆಟ್ ವಿಚಾರವಾಗಿ ಮಾತನಾಡಿರುವ ಮುಸ್ಲಿಂ ಮುಖಂಡರು “ನೂರಾರು ಕೋಟಿ ಖರ್ಚು ಮಾಡ್ತೀ‌ನಿ ಅಂದ್ರೂ ಟಿಕೆಟ್ ಕೊಡ್ತಾ ಇಲ್ಲ. ಜಾತಿ ನೋಡಿ, ಟಿಕೆಟ್ ಕೊಡ್ತಾ ಇಲ್ವಾ? ಎರಡು ಪಕ್ಷಗಳನ್ನು ನಾವು ಟಿಕೆಟ್ ಗಾಗಿ ಬೇಡಿಕೊಳ್ಳುವ ಪರಿಸ್ಥಿತಿ ಬಂದಿದೆ. ಇನ್ನು 70 ಟಿಕೆಟ್ ಕಾಂಗ್ರೆಸ್ ಘೋಷಣೆ ಮಾಡಲು ಬಾಕಿ‌ ಇದೆ. ಈ ಮೂರನೇ ಪಟ್ಟಿಯಲ್ಲಿ ಮುಸ್ಲಿಂ ಸಮೂದಾಯದ ಅಭ್ಯರ್ಥಿಗಳಿಗೆ ಟಿಕೆಟ್ ನೀಡಬೇಕು. ಕಾಂಗ್ರೆಸ್ ನ ಬಾವುಟ, ಬ್ಯಾನರ್, ಜಾಹೀರಾತುಗಳಲ್ಲಿ ನಮ್ಮ ಸಮುದಾಯದ ಮುಖಂಡರ ಫೋಟೋ ಇರಲ್ಲ. ಈ ಕಾಂಗ್ರೆಸ್ ನ ಮಲತಾಯಿ ಧೋರಣೆಯನ್ನ ಸುನ್ನಿ ಉಲ್ಮಾ ಬೋರ್ಡ್ ಖಂಡಿಸುತ್ತೆ” ಎಂದು ಹೇಳಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts