More

    ಸವಣೂರ ಪಿಎಲ್‌ಡಿ ಬ್ಯಾಂಕ್‌ಗೆ ಅವಿರೋಧ ಆಯ್ಕೆ

    ಸವಣೂರ: ಪಟ್ಟಣದ ದಿ. ಸವಣೂರ ತಾಲೂಕು ಪ್ರಾಥಮಿಕ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಅಧ್ಯಕ್ಷರಾಗಿ ಬಸನಗೌಡ ಪಾಟೀಲ, ಉಪಾಧ್ಯಕ್ಷರಾಗಿ ವೀರಣ್ಣ ಪಟ್ಟಣಶೆಟ್ಟಿ ಅವಿರೋಧವಾಗಿ ಆಯ್ಕೆಯಾದರು.

    ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ಮಂಗಳವಾರ ನಿಗದಿಯಾಗಿದ್ದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಕಲ್ಮಡವು ಗ್ರಾಮದ ಬಸನಗೌಡ ಪಾಟೀಲ, ಉಪಾಧ್ಯಕ್ಷ ಸ್ಥಾನಕ್ಕೆ ಹತ್ತಮತ್ತೂರ ಗ್ರಾಮದ ವೀರಣ್ಣ ಪಟ್ಟಣಶೆಟ್ಟಿ ನಾಮಪತ್ರ ಸಲ್ಲಿಸಿದ್ದರು. ಉಭಯ ಸ್ಥಾನಗಳಿಗೆ ತಲಾ ಒಂದು ನಾಮಪತ್ರ ಮಾತ್ರ ಸಲ್ಲಿಕೆಯಾಗಿದ್ದರಿಂದ ಅಧ್ಯಕ್ಷರಾಗಿ ಬಸನಗೌಡ ಪಾಟೀಲ, ಉಪಾಧ್ಯಕ್ಷರಾಗಿ ವೀರಣ್ಣ ಪಟ್ಟಣಶೆಟ್ಟಿ ಅವಿರೋಧ ಆಯ್ಕೆಯನ್ನು ಚುನಾವಣೆ ರಿಟರ್ನಿಂಗ್ ಅಧಿಕಾರಿ ಎಫ್.ಡಿ. ರಾಯಣ್ಣನವರ ಘೋಷಿಸಿದರು.

    ಪಿಎಲ್‌ಡಿ ಬ್ಯಾಂಕ್ ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರಿಗೆ ಬ್ಯಾಂಕ್ ಸದಸ್ಯರು, ಬಿಜೆಪಿ ತಾಲೂಕು ಘಟಕದ ಪದಾಕಾರಿಗಳು, ಮುಖಂಡರು, ಹಿರಿಯರು ಸಿಹಿ ತಿನಿಸಿ, ಮಾಲಾರ್ಪಣೆ ಮಾಡಿ ಅಭಿನಂದಿಸಿದರು.

    ನೂತನ ಅಧ್ಯಕ್ಷ ಬಸನಗೌಡ ಪಾಟೀಲ ಮಾತನಾಡಿ, ಅಧ್ಯಕ್ಷ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆಗೊಳ್ಳಲು ಕಾರಣಿರಾದ ಮಾಜಿ ಮುಖ್ಯಮಂತ್ರಿ, ಶಾಸಕ ಬಸವರಾಜ ಬೊಮ್ಮಾಯಿ ಹಾಗೂ ಬ್ಯಾಂಕ್‌ನ ಎಲ್ಲ ನಿರ್ದೇಶಕರಿಗೆ ಮತ್ತು ಬಿಜೆಪಿ ಪದಾಧಿಕಾರಿಗಳಿಗೆ, ಮುಖಂಡರಿಗೆ ಧನ್ಯವಾದಗಳು. ಬ್ಯಾಂಕ್‌ನ ಆರ್ಥಿಕ ಪ್ರಗತಿಗಾಗಿ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ ಎಂದರು.

    ಕೆಸಿಸಿ ಬ್ಯಾಂಕ್ ನಿರ್ದೇಶಕ ಸುಭಾಸ ಗಡೆಪ್ಪನವರ, ಬಿಜೆಪಿ ಸವಣೂರು ಮಂಡಲ ಅಧ್ಯಕ್ಷ ಗಂಗಾಧರ ಬಾಣದ, ಟಿಎಪಿಎಂಎಸ್ ಅಧ್ಯಕ್ಷ ಧರಿಯಪ್ಪಗೌಡ ಪಾಟೀಲ, ಪುರಸಭೆ ಮಾಜಿ ಉಪಾಧ್ಯಕ್ಷ ಸದಾನಂದ ಕೆಮ್ಮಣ್ಣಕೇರಿ, ಪಿಎಲ್‌ಡಿ ಬ್ಯಾಂಕ್ ನಿರ್ದೇಶಕರಾದ ಬಸವರಾಜ ಸವೂರ, ಸಂತೋಷ ಗುಡಿಸಾಗರ, ಎಸ್.ಬಿ. ಪಾಟೀಲ, ಸಿ.ಸಿ. ಅಂಗಡಿ, ಎಂ.ವೈ. ದೊಡ್ಡಮನಿ, ಬಿ.ಎಸ್. ಕೊಪ್ಪದ, ಕೆ.ಆರ್. ಬಿಕ್ಕಿಮಟ್ಟಿ, ಎನ್.ಡಿ. ಬಿರಾದರ, ಎನ್.ವಿ. ಪಾಟೀಲ, ನಾಗರತ್ನಾ ಗಡೆಪ್ಪನವರ, ಮಾದೇವಕ್ಕ ಜಕ್ಕಣ್ಣನವರ, ತೆಗ್ಗಿಹಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ಗಿರೀಶಗೌಡ ಪಾಟೀಲ, ತಾಪಂ ಮಾಜಿ ಅಧ್ಯಕ್ಷರಾದ ಎಂ.ಕೆ. ಬಿಜ್ಜೂರ, ತಿಪ್ಪಣ್ಣ ಸುಬ್ಬಣ್ಣನವರ, ರುದ್ರಗೌಡ ಪಾಟೀಲ, ಮುಖಂಡರಾದ ಶಿವಪುತ್ರಪ್ಪ ಕಲಕೋಟಿ, ಮಂಜುನಾಥ ಗಾಣಗೇರ, ಬಸನಗೌಡ ಪಾಟೀಲ, ರುದ್ರಗೌಡ ಪಾಟೀಲ ಚನ್ನಬಸಯ್ಯ ಪ್ರಭಯ್ಯನವರಮಠ, ಬಸವರಾಜ ಕೋಳಿವಾಡ, ನಾಗರಾಜ ವಾಲ್ಮೀಕಿ, ಹನುಮಂತಗೌಡ ಮುದಿಗೌಡ್ರ, ಶ್ರೀಕಾಂತ ಲಕ್ಷ್ಮೇಶ್ವರ, ಚಿದಾನಂದ ಬಡಿಗೇರ, ನಂದೀಶ ಗೊಡ್ಡೆಮ್ಮಿ, ಚನ್ನಬಸಯ್ಯ ದುರ್ಗದಮಠ, ಶ್ರೀನಿವಾಸ ಗಿತ್ತೆ, ಮಹಾಂತೇಶ ಹಾವಣಗಿ, ಫರ್ವತಗೌಡ ಪಾಟೀಲ, ಪ್ರದೀಪ ಸವೂರ, ಫಕೀರಗೌಡ ಪಾಟೀಲ, ಪಿಎಲ್‌ಡಿ ಬ್ಯಾಂಕ್ ವ್ಯವಸ್ಥಾಪಕ ಆರ್.ಎಂ. ಪಾಟೀಲ ಹಾಗೂ ಇತರರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts