More

  ದಾಖಲೆ ಇಲ್ಲದ 2.71 ಲಕ್ಷ ರೂ. ವಶ

  ಹನೂರು : ತಾಲೂಕಿನಿಂದ ತಮಿಳುನಾಡಿಗೆ ಸಂಪರ್ಕ ಕಲ್ಪಿಸುವ ಮಲೆಮಹದೇಶ್ವರ ಬೆಟ್ಟ ಸಮೀಪದ ಪಾಲಾರ್ ಚೆಕ್‌ಪೋಸ್ಟ್ ಬಳಿ ಶುಕ್ರವಾರ ರಾತ್ರಿ ಚುನಾವಣಾಧಿಕಾರಿಗಳು ದಾಖಲೆಯಿಲ್ಲದ 2.71 ಲಕ್ಷ ರೂ. ವಶಪಡಿಸಿಕೊಂಡಿದ್ದಾರೆ.
  ತಾಲೂಕಿನ ರಾಮಾಪುರ ಸಮೀಪದ ಗೆಜ್ಜಲನತ್ತ ಗ್ರಾಮದ ಶಿವಮೂರ್ತಿ ಅವರು ರಾತ್ರಿ ಗೂಡ್ಸ್ ವಾಹನದಲ್ಲಿ ತಮಿಳುನಾಡಿನಿಂದ ಗ್ರಾಮಕ್ಕೆ ಆಗಮಿಸುತ್ತಿದ್ದರು. ಈ ವೇಳೆ ಪಾಲಾರ್ ಚೆಕ್‌ಪೋಸ್ಟ್ ಬಳಿ ಫ್ಲೆಯಿಂಗ್ ಸ್ಕ್ವಾಡ್ ತಂಡದ ಅಧಿಕಾರಿಗಳು ವಾಹನವನ್ನು ಪರಿಶೀಲಿಸಿದಾಗ 2,71,670 ರೂ. ನಗದು ದೊರೆತಿದೆ. ಆದರೆ ಈ ಬಗ್ಗೆ ದಾಖಲೆಯಿಲ್ಲದ ಪರಿಣಾಮ ಅಧಿಕಾರಿಗಳು ವಶಕ್ಕೆ ಪಡೆದಿದ್ದು, ಈ ಸಂಬಂಧ ಮ.ಬೆಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಫ್ಲೇಯಿಂಗ್ ಸ್ಕ್ವಾಡ್ ತಂಡದ ಶಾಂತರಾಜು, ಇನ್ಸ್‌ಪೆಕ್ಟರ್ ಜಗದೀಶ್ ಹಾಗೂ ಚುನಾವಣಾ ಕರ್ತವ್ಯ ಸಿಬ್ಬಂದಿ ಇದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts