More

    ನಾರಿಶಕ್ತಿಯ ಅನಾವರಣ ಆಗಲಿ

    ಕಲಬುರಗಿ: ತೊಟ್ಟಿಲು ತೂಗುವ ಕೈಗಳು ಜಗತ್ತನ್ನು ಆಳಬಲ್ಲವೂ ಎಂಬಂತೆ ಎಲ್ಲೆಡೆ ನಾರಿಶಕ್ತಿಯ ಅನಾವರಣವಾಗುತ್ತಿದೆ. ಪ್ರತಿಯೊಂದು ಕ್ಷೇತ್ರದಲ್ಲಿ ಮಹಿಳೆಯರು ಸಾಧಕರಾಗಿ ಹೊರಹೊಮ್ಮುತ್ತಿದ್ದಾರೆ ಎಂದು ಶ್ರೀ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರಪರ್ಸನ್ ಮಾತೋಶ್ರೀ ಡಾ.ದಾಕ್ಷಾಯಣಿ ಅಪ್ಪ ಹೇಳಿದರು.
    ನಗರದ ಗೋದುತಾಯಿ ಮಹಿಳಾ ಮಹಾವಿದ್ಯಾಲಯದಲ್ಲಿ ನಾಲ್ಕುಚಕ್ರ ಚಾರಿಟೇಬಲ್ ಟ್ರಸ್ಟ್, ಛಪ್ಪರಬಂದಿ ಪ್ರಭಾಕರ ಫೌಂಡೇಶನ್ ಸಹಯೋಗದಲ್ಲಿ ಶನಿವಾರ ಏರ್ಪಡಿಸಿದ್ದ ವಿಶ್ವ ಮಹಿಳಾ ದಿನಾಚರಣೆ ಮತ್ತು ಅಭಿನಂದನಾ ಸಮಾರಂಭದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿ, ಮಹಿಳೆಯರಿಗೆ ನಿರಂತರ ಪ್ರೋತ್ಸಾಹ ದೊರೆತರೇ ಯಾವುದೇ ಸಾಧನೆ ಮಾಡಬಹುದು ಎಂದು ಹೇಳಿದರು.
    ಭಾರತಿ ರೇಷ್ಮೆ ಮಾತನಾಡಿ, ದಾಕ್ಷಾಯಣಿ ಅವ್ವ ಅವರ ಸಾಧನೆಗೆ ಪದ್ಮವಿಭೂಷಣ ಪ್ರಶಸ್ತಿ ದೊರೆಯಲಿ. ಅವ್ವ ಅವರಿಂದ ಪ್ರೇರಣೆ ಪಡೆದು ನಮ್ಮ ಭಾಗದ ಪ್ರತಿ ಮಹಿಳೆಯರೂ ಸಾಧಕರಾಗಿ ಹೊರಹೊಮ್ಮಬೇಕು ಎಂದು ಆಶಯ ವ್ಯಕ್ತಪಡಿಸಿದರು.
    ನಾಲ್ಕುಚಕ್ರ ಮುಖ್ಯಸ್ಥೆ ಮಾಲಾ ಕಣ್ಣಿ ಮಾತನಾಡಿ, ಸ್ತಿ ಸಬಲೀಕರಣಕ್ಕೆ ಪ್ರತಿಯೊಬ್ಬರೂ ಪ್ರೋತ್ಸಾಹ ನೀಡಬೇಕು. ಶಿಕ್ಷಣವಷ್ಟೇ ಅಲ್ಲ ಸಾಮಾಜಿಕ ಕಾರ್ಯಗಳಿಗೆ ಮಾತೋಶ್ರೀ ಡಾ.ಅವ್ವ ಸ್ಫೂರ್ತಿಯಾಗಿದ್ದಾರೆ. ಎಲ್ಲರೂ ಸೇರಿ ಈ ಭಾಗದ ಸಾಮಾಜಿಕ ಸಮಸ್ಯೆಗಳನ್ನು ಬಗೆಹರಿಸಲು ಸಾಥ್ ನೀಡಬೇಕು ಎಂದು ಆಶಯ ವ್ಯಕ್ತಪಡಿಸಿದರು.
    ಡಾ.ಭಾಗ್ಯಶ್ರೀ ಪಾಟೀಲ್ ಊಡಗಿ, ಡಾ.ನೀಲಾಂಬಿಕಾ ಶೇರಿಕಾರ ಮಾತನಾಡಿ, ಮಹಿಳೆಯರು ಯಾವುದರಲ್ಲೂ ಕಡಿಮೆ ಇಲ್ಲ. ಸಮಾಜ ಕಣ್ಣಾಗಿ ಹೆಣ್ಣು ಮುನ್ನುಗುತ್ತಿದ್ದಾಳೆ ಎಂದರು. ಶಶಿಕಲಾ ಟೆಂಗಳಿ ಮಾತನಾಡಿದರು.
    ಪ್ರಮುಖರಾದ ಜಾನಕಿ ಹೊಸುರಕರ, ಕಲ್ಪನಾ ಭೀಮಳ್ಳಿ, ಸುವರ್ಣಾ ಛಪ್ಪರಬಂದಿ, ಮಹೇಶಚಂದ್ರ ಪಾಟೀಲ್ ಕಣ್ಣಿ, ವಿಜಯಲಕ್ಷಿö್ಮÃ ಹಿರೇಮಠ, ರಾಹುಲ್ ರಾಠೋಡ್, ಆನಂದತೀರ್ಥ ಜೋಶಿ, ಪೂರ್ಣಿಮಾ ಕುಲಕರ್ಣಿ, ಜಯಶ್ರೀ ಜೈನ, ಲಿಂಗರಾಜ ಡಾಂಗೆ, ಸುಭಾಷ ಮೈತ್ರೆ, ಅನ್ನಪೂರ್ಣ ಸಂಗೋಳಗಿ, ಸುಧಾರಾಣಿ, ನಿರ್ಮಲ ಮುತ್ತಿನ, ಸುಮಂಗಲ ಚಕ್ರವರ್ತಿ, ಶೀಲಾ ಕಲಬುರಗಿ, ವಿಶ್ವನಾಥ ಗೌನಳ್ಳಿ, ಕಲ್ಯಾಣರಾವ ಶೀಲವಂತ, ಪ್ರಭುಲಿಂಗ ಮೂಲಗೆ ಇತರರಿದ್ದರು.
    ಶರಣರಾಜ ಛಪ್ಪರಬಂದಿ ಸ್ವಾಗತಿಸಿದರು. ಆರ್‌ಜೆ ನಾಗೇಶ್ವರಿ ಕದಮ ನಿರೂಪಣೆ ಮಾಡಿದರು. ಕಲ್ಯಾಣರಾವ ಪಾಟೀಲ್ ಕಣ್ಣಿ ವಂದಿಸಿದರು.

    ಅಭಿನಂದನೆ, ನಾರಿಶಕ್ತಿ ಪ್ರಶಸ್ತಿ ಪ್ರದಾನ: ವಿಜಯಪುರ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪಡೆದ ಮಾತೋಶ್ರೀ ಡಾ.ದಾಕ್ಷಾಯಣಿ ಅಪ್ಪ ಅವರಿಗೆ ನಾಲ್ಕು ಚಕ್ರ ಚಾರಿಟೇಬಲ್ ಟ್ರಸ್ಟ್, ಛಪ್ಪರಬಂಧಿ ಪ್ರಭಾಕರ್ ಫೌಂಡೇಷನ್‌ನಿಂದ ಅಭಿನಂದನೆ ಸಲ್ಲಿಸಲಾಯಿತು. ವಿವಿಧ ಕ್ಷೇತ್ರದ ಸಾಧಕರಾದ ಡಾ.ಶೃತಿ ವೆಂಕಟೇಶಲು (ವೈದ್ಯಕೀಯ ಕ್ಷೇತ್ರ), ಡಾ.ಪುಟ್ಟಮಣಿ ದೇವಿದಾಸ (ಸಾಹಿತ್ಯ), ಡಾ.ಗೀತಾ ಪಾಟೀಲ್ (ಶಿಕ್ಷಣ), ಭಾರತಿ ಪಾಟೀಲ್ (ಸಮಾಜ ಸೇವೆ), ಶೀತಲ್ ಗಿಲ್ಡಾ (ಉದ್ಯಮ), ಮಹಾನಂದಾ ಪಾಟೀಲ್ (ಕೃಷಿ), ಆರ್‌ಜೆ ನಾಗೇಶ್ವರಿ ಕದಮ (ಮಾಧ್ಯಮ), ಭವಾನಿ ಕಡ್ಲೂರು (ವಿಡಿಯೋ ಕ್ರಿಯೇಟರ್) ಅವರಿಗೆ ನಾರಿಶಕ್ತಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

    ಮಹಿಳೆಯರು ಎಲ್ಲ ಕ್ಷೇತ್ರದಲ್ಲೂ ಛಾಪು ಮೂಡಿಸುತ್ತಿದ್ದಾರೆ. ಇದೀಗ ನಮ್ಮ ಕಲಬುರಗಿಯ ಕುವರಿ ಶ್ರೇಯಾಂಕ ಪಾಟೀಲ್ ಐಪಿಎಲ್‌ನಲ್ಲಿ ಅತ್ಯುತ್ತಮ ಪ್ರದರ್ಶನ ತೋರಿ, ರಾಷ್ಟç ಮಟ್ಟದಲ್ಲಿ ಮಿಂಚಿದ್ದು, ತಾಜಾ ಉದಾಹರಣೆ. ನಾಲ್ಕು ಚಕ್ರ ತಂಡ ಸಾಮಾಜಿಕ ಸೇವೆಯಲ್ಲಿ ತೊಡಗಿದ್ದು, ಮಹಿಳೆಯರು ಇಂತಹ ಕಾರ್ಯದಲ್ಲಿ ಸಕ್ರೀಯವಾಗಿ ತೊಡಗಬೇಕು.
    | ಶಶಿಕಲಾ ಟೆಂಗಳಿ
    ಮಹಿಳಾ ನಾಯಕಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts