More

    ಶಾಲೆ- ಕಾಲೇಜು ಜು.31ರ ವರೆಗೂ ಬಂದ್​; ಆನ್​ಲೈನ್​ ಶಿಕ್ಷಣಕ್ಕೆ ಪ್ರೋತ್ಸಾಹ; ಕೇಂದ್ರ ಮಾರ್ಗಸೂಚಿ ಪ್ರಕಟ

    ನವದೆಹಲಿ: ಶಾಲೆ- ಕಾಲೇಜುಗಳು ಸೇರಿ ಎಲ್ಲ ಶಿಕ್ಷಣ ಸಂಸ್ಥೆಗಳು ಹಾಗೂ ಕೋಚಿಂಗ್​ ಸೆಂಟರ್​ಗಳು ಜು.31ರವರೆಗೆ ಮುಚ್ಚಿರಲಿವೆ. ಆದರೆ, ಆನ್​ಲೈನ್​ ಶಿಕ್ಷಣ ಹಾಗೂ ತರಗತಿಗೆ ಅನುಮತಿ ನೀಡಲಾಗಿದೆ.

    ಕೇಂದ್ರ ಗೃಹ ಇಲಾಖೆ ಅನ್​ಲಾಕ್​ 2.0 ಸಂಬಂಧಿಸಿದಂತೆ ಮಾರ್ಗಸೂಚಿಗಳನ್ನು ಹೊರಡಿಸಿದ್ದು, ಶಿಕ್ಷಣ ಸಂಸ್ಥೆಗಳ ಆರಂಭಕ್ಕೆ ಅನುಮತಿ ನೀಡಿಲ್ಲ. ಆದರೆ, ಆನ್​ಲೈನ್​ ತರಗತಿ ನಡೆಸುವುದನ್ನು ಉತ್ತೇಜಿಸಿದೆ.

    ಇದನ್ನೂ ಓದಿ; ಕರೊನಾ ಮಾತ್ರವಲ್ಲ, ಲಾಕ್​ಡೌನ್​ ಕೂಡ ಹೆಚ್ಚುತ್ತಿದೆ….! ಸೇರಿ ಏಳು ರಾಜ್ಯಗಳಲ್ಲಿ ನಿರ್ಬಂಧ ವಿಸ್ತರಣೆ

    ಕೇಂದ್ರ ಹಾಗೂ ರಾಜ್ಯಗಳ ಸರ್ಕಾರಗಳ ತರಬೇತಿ ಕೇಮದ್ರಗಳನ್ನು ಜುಲೈ 15ಕ್ಕೆ ಆರಂಭಿಸಬಹುದು ಎಂದು ಹೇಳಿದ್ದರೂ ಅದಕ್ಕೂ ಪ್ರತ್ಯೇಕವಾಗಿ ಪ್ರಾಮಾಣಿತ ಕಾರ್ಯಾಚರಣೆ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲಾಗುವುದು ಎಂದು ಹೇಳಿದೆ.

    ಇದಲ್ಲದೆ ಮೆಟ್ರೋ, ಅಂತಾರಾಷ್ಟ್ರೀಯ ವಿಮಾನ ಸಂಚಾರಕ್ಕೂ ಅನುಮತಿ ನೀಡಿಲ್ಲ. ಚಿತ್ರಮಂದಿರಗಳು, ಜಿಮ್​ಗಳು, ಸ್ವಿಮ್ಮಿಂಗ್​ ಪೂಲ್​, ಎಂಟರಟೇನ್​ಮೆಂಟ್​ ಪಾರ್ಕ್ಸ್​, ರಂಗ ಮಂದಿರಗಳು, ಬಾರ್​ ಮೊದಲಾದವುಗಳ ಮೇಲಿದ್ದ ನಿರ್ಬಂಧ ಮುಂದುವರಿಸಿದೆ.

    ಇದನ್ನೂ ಓದಿ; ಕರೊನಾಗೆ ಚುಚ್ಚುಮದ್ದಿಗಿಂತ ಮೂಗಿನ ಔಷಧವೇ ಉತ್ತಮ; ಆಕ್ಸ್​ಫರ್ಡ್​ ವಿವಿ ಸಂಶೋಧಕರ ಅಭಿಮತ

    ಸಾರ್ವಜನಿಕ ಸಭೆ, ಸಮಾರಂಭ, ರಾಜಕೀಯ, ಧಾರ್ಮಿಕ ಕಾರ್ಯಕ್ರಮಗಳಿಗೂ ಅವಕಾಶವಿಲ್ಲ. ಈ ಎಲ್ಲ ಚಟುವಟಿಕೆಗಳ ಆರಂಭಕ್ಕೆ ದಿನಾಂಕವನ್ನು ಪ್ರತ್ಯೇಕವಾಗಿ ತಿಳಿಸಲಾಗುವುದು ಹಾಗೂ ಮಾರ್ಗಸೂಚಿಗಳನ್ನು ಜಾರಿಗೊಳಿಸಲಾಗುತ್ತದೆ ಎಂದು ಕೇಂದ್ರ ಗೃಹ ಇಲಾಖೆ ಹೊರಡಿಸಿದ ಆದೇಶದಲ್ಲಿ ಮಾಹಿತಿ ನೀಡಿದೆ.

    ಕಂಟೇನ್​ಮೆಂಟ್​ ಪ್ರದೇಶದಲ್ಲಿ ಲಾಕ್​ಡೌನ್​ ಮುಂದುವರಿಯಲಿದೆ. ಆದರೆ, ರಾಜ್ಯ ಸರ್ಕಾರಗಳು ಪರಿಸ್ಥಿತಿಗೆ ಅನುಗುಣವಾಗಿ ಹೆಚ್ಚುವರಿ ನಿರ್ಬಂಧಗಳನ್ನು ವಿಧಿಸಬಹುದು. ರಾತ್ರಿ 10ರಿಂದ ಬೆಳಗ್ಗಿನ ಐದು ಗಂಟೆವರೆಗೆ ದೇಶಾದ್ಯಂತ ಕರ್ಫ್ಯೂ ಜಾರಿಯಲ್ಲಿರುತ್ತದೆ.

    ಸುಶಾಂತ್​ ಆತ್ಮಹತ್ಯೆಯ ಮೊದಲ ಯತ್ನ ಫಲಿಸಿರಲಿಲ್ಲ…! ಅಲ್ಲಿಗೆ ನಿಂತಿದ್ದರೆ ಬದುಕಿರುತ್ತಿದ್ದರೇ ಬಾಲಿವುಡ್​ ನಟ…?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts