More

    ಎಲ್ಲ ಶಿಕ್ಷಣ ಸಂಸ್ಥೆಗಳನ್ನು ಮೇ 15ರವರೆಗೆ ಮುಚ್ಚಿ: ಸಚಿವರ ಗುಂಪಿನಿಂದ ಕೇಂದ್ರ ಸರ್ಕಾರಕ್ಕೆ ಸಲಹೆ

    ನವದೆಹಲಿ: ಕರೊನಾ ವಿರುದ್ಧದ ಹೋರಾಟಕ್ಕಾಗಿ ವಿಧಿಸಲಾಗಿರುವ 21 ದಿನಗಳ ಲಾಕ್​ಡೌನ್​ ವಿಸ್ತರಣೆ ಅಥವಾ ತೆರವಾದರೂ ದೇಶಾದ್ಯಂತ ಎಲ್ಲ ಶಿಕ್ಷಣ ಸಂಸ್ಥೆಗಳನ್ನು ಮೇ 15ರವರೆಗೆ ಮುಚ್ಚುವಂತೆ ಕೋವಿಡ್​ -19 ಪರಾಮರ್ಶೆಗೆ ಸಭೆ ಸೇರಿದ್ದ ಸಚಿವರ ಗುಂಪು ಕೇಂದ್ರ ಸರ್ಕಾರಕ್ಕೆ ಸಲಹೆ ನೀಡಿದೆ.
    ರಕ್ಷಣಾ ಸಚಿವ ರಾಜ್​ನಾಥ್​ ಸಿಂಗ್​ ನೇತೃತ್ವದಲ್ಲಿ ಮಂಗಳವಾರ ನಡೆದ ಸಚಿವರ ಸಭೆಯಲ್ಲಿ ಈ ಸಲಹೆ ನೀಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

    ಏಪ್ರಿಲ್​ 14ರ ನಂತರವೂ ನಾಲ್ಕು ವಾರಗಳ ಶಾಪಿಂಗ್​ ಮಾಲ್​ ಹಾಗೂ ಶಿಕ್ಷಣ ಸಂಸ್ಥೆಗಳನ್ನು ಆರಂಭಿಸಲು ಅನುಮತಿ ನೀಡಬಾರದೆಂದು ತಿಳಿಸಲಾಗಿದೆ. ಇದಲ್ಲದೇ, ಮೇ ಮಧ್ಯಭಾಗದಿಂದ ಸಾಮಾನ್ಯವಾಗಿ ಶಾಲಾ- ಕಾಲೇಜುಗಳಿಗೆ ರಜೆ ಘೋಷಿಸಲಾಗುತ್ತದೆ. ಜೂನ್​ ಮೊದಲ ವಾರದಲ್ಲಿ ಪುನಾರಂಭಗೊಳ್ಳಲಿವೆ. ಈ ಕಾರಣದಿಂದಾಗಿ ಶಿಕ್ಷಣ ಸಂಸ್ಥೆಗಳನ್ನು ಮುಚ್ಚುವುದರಿಂದ ಅಂಥ ತೊಂದರೆ ಎದುರಾಗುವುದಿಲ್ಲ ಎಂಬುದು ಸಚಿವರ ಗುಂಪಿನ ಅಭಿಪ್ರಾಯವಾಗಿದೆ.

    ಆದರೆ, ಹಲವು ರಾಜ್ಯಗಳಲ್ಲಿ 10 ಹಾಗೂ 12ನೇ ತರಗತಿ ಪರೀಕ್ಷೆಗಳು ನಡೆದಿಲ್ಲ. ಇವುಗಳನ್ನು ನಡೆಸದೆ ರಜೆ ಮುಂದುವರಿಸಿದರೆ ನೂತನ ಶೈಕ್ಷಣಿಕ ವರ್ಷಾರಂಭಕ್ಕೆ ಕಾಲೇಜುಗಳಿಗೆ ತೊಂದರೆಯಾಗಲಿದೆ. ಪ್ರವೇಶಕ್ಕೆ ವಿದ್ಯಾರ್ಥಿಗಳೇ ಇರದ ಸನ್ನಿವೇಶ ಸೃಷ್ಟಿಯಾಗಲಿದೆ. ಇದಕ್ಕೆ ಯಾವ ಪರಿಹಾರ ಕಂಡುಕೊಳ್ಳಲಾಗುತ್ತದೆ ಎಂಬುದು ಕೂಡ ಕುತೂಹಲ ಮೂಡಿಸಿದೆ.

    ಇದಲ್ಲದೇ, ಏಪ್ರಿಲ್​ 14ರ ನಂತರದ ಒಂದು ತಿಂಗಳ ಅವಧಿಗೆ ಯಾವುದೇ ಧಾರ್ಮಿಕ ಚಟುವಟಿಕೆಗಳಿಗೂ ಅವಕಾಶ ನೀಡದಂತೆ ಸಚಿವರು ಸೂಚಿಸಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ಹಲವು ರಾಜ್ಯಗಳು ಲಾಕ್​ಡೌನ್​ ಮುಂದುವರಿಸುವಂತೆ ಕೋರಿವೆ. ರಾಜ್ಯಗಳಿಂದ ದೊರೆಯುವ ಮಾಹಿತಿ ಹಾಗೂ ಸೋಂಕು ತಡೆಗೆ ಕೈಗೊಳ್ಳಲಾಗುತ್ತಿರುವ ಕ್ರಮಗಳನ್ನು ಆಧರಿಸಿ ಕ್ರಮ ಕೈಗೊಳ್ಳಲು ಕೇಂದ್ರ ಸರ್ಕಾರ ನಿರ್ಧರಿಸಿದೆ.(ಏಜೆನ್ಸೀಸ್)

    ಚೀನಾ ಮೂಲದ ಕರೊನಾಕ್ಕೆ ‘ಸಂಜೀವಿನಿ’ ಆಯ್ತೇ ಭಾರತದ ಹೈಡ್ರೋಕ್ಸಿಕ್ಲೋರೋಕ್ವಿನ್​ ?!

    ಆನ್​ಲೈನ್​ ಪಾಠ ಮಾಡುತ್ತಿದ್ದೀರಾದರೆ ವಿವರ ನೀಡಿ: ಬೋಧಕರ ಮೇಲೆ ತಾಂತ್ರಿಕ ಶಿಕ್ಷಣ ಇಲಾಖೆ ನಿಗಾ

    ಸೂಪರ್ ಲವ್ ಸ್ಟೋರಿ!: ಸಿನಿಮಾವನ್ನೂ ಮೀರಿದ ಕಥೆ ಈಕೆಯದ್ದು..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts