More

    ಇವರ ಪರಿಚಯ ಬಲ್ಲಿರೇನು? ಎರಡು ತಿಂಗಳ ಹಿಂದೆ ಲಾಕ್‌ಡೌನ್ ವೇಳೆ ಸರ್ಕಾರಿ ಹಾಸ್ಟೆಲ್ ಸೇರ್ಪಡೆ

    ಉಡುಪಿ: ಲಾಕ್‌ಡೌನ್‌ನಿಂದ ಮನೆಗೆ ಹೋಗಲಾರದ ಹಿರಿಯ ನಾಗರಿಕರೊಬ್ಬರು ಎರಡು ತಿಂಗಳಿನಿಂದ ಸರ್ಕಾರಿ ಹಾಸ್ಟೆಲ್‌ನಲ್ಲಿಯೇ ವಾಸವಾಗಿದ್ದಾರೆ.

    ಲಾಕ್‌ಡೌನ್ ವೇಳೆ ನಗರದಲ್ಲಿ ಸಿಲುಕಿಕೊಂಡಿದ್ದ ನಿರಾಶ್ರಿತರನ್ನು ಹಲವೆಡೆ ಇರುವ ಸರ್ಕಾರಿ ಹಾಸ್ಟೆಲ್, ಶಾಲೆಗಳಲ್ಲಿ ವಸತಿ ವ್ಯವಸ್ಥೆ ಕಲ್ಪಿಸಲಾಗಿತ್ತು. ಮಾರ್ಚ್ ಆರಂಭದ ಲಾಕ್‌ಡೌನ್ ದಿನಗಳಲ್ಲಿ ನಗರದ ರಸ್ತೆಯ ಬದಿಯಲ್ಲಿ 65-70 ವರ್ಷದ ವೃದ್ಧರೊಬ್ಬರು ದಿಕ್ಕು ತೋಚದೆ ನಿಂತಿದ್ದರು. ಅಧಿಕಾರಿಗಳು ಅವರನ್ನು ಬನ್ನಂಜೆಯ ಸರ್ಕಾರಿ ಹಾಸ್ಟೆಲ್‌ನಲ್ಲಿ ತಂದು ಬಿಟ್ಟಿದ್ದರು. ವಿಚಾರಿಸಿದಾಗ, ಊರು ಕಾಸರಗೋಡು, ಹೆಸರು ಅಶ್ರಫ್ ಕಳ್ನಾಡು ಎಂದು ಹೇಳುತ್ತಾರೆ. ಮಕ್ಕಳ ಹೆಸರು ಲತೀಫ್ (ಆಟೋ ಚಾಲಕ ), ಶರೀಫ್ (ಮೇಸ್ತ್ರಿ) ಮಗಳು ಕುಞಿಮೋಳ್ ಎಂದು ನೆನಪು ಮಾಡಿಕೊಳ್ಳುತ್ತಾರೆ.

    ಇವರ ಬಳಿ ಯಾವುದೇ ಸರ್ಕಾರಿ ಗುರುತಿನ ಚೀಟಿ ಇಲ್ಲ. ಜಿಲ್ಲಾಡಳಿತ ನಿರಾಶ್ರಿತರಿಗೆ ವ್ಯವಸ್ಥೆ ಮಾಡಿದಂತೆ ಊಟೋಪಚಾರ ನಡೆಯುತ್ತಿದೆ. ಇವರು ಹೇಳುವ ವಿಳಾಸ ಆಧರಿಸಿ ಕಾಸರಗೋಡು ಸ್ಥಳೀಯ ಪೊಲೀಸರನ್ನು ಸಂಪರ್ಕಿಸಿದಾಗ ಆ ವಿಳಾಸದಲ್ಲಿ ಯಾರೂ ಇಲ್ಲ ಎಂಬುದು ತಿಳಿದು ಬಂದಿದೆ. ಇವರನ್ನು ಮನೆಗೆ ಸೇರಿಸಲು ಸಾಕಷ್ಟು ಪ್ರಯತ್ನ ನಡೆಯುತ್ತಿದೆ.

    ಆದರೆ ವಿಳಾಸ ಮತ್ತು ಸಂಬಂಧಿಕರು, ಮಕ್ಕಳು ಸಂಪರ್ಕಕ್ಕೆ ಸಿಗುತ್ತಿಲ್ಲ. ಮಾನಸಿಕ ಮತ್ತು ದೈಹಿಕ ಆರೋಗ್ಯ ಸ್ಥಿರವಾಗಿದೆ. ಯಾರಾದರೂ ಈ ವ್ಯಕ್ತಿ ಬಗ್ಗೆ ತಿಳಿದಲ್ಲಿ ಮನೆಗೆ ಸೇರಿಸಲು ನೆರವಾಗುವಂತೆ ಹಿಂದುಪರ ಸಂಘಟನೆ ಮುಖಂಡ ಸಂತೋಷ್ ಸುವರ್ಣ (9964895949) ಮನವಿ ಮಾಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts