More

    ಜಾಗತಿಕ ಪೋಸ್ಟಲ್ ನೆಟ್‌ವರ್ಕ್ ಬಳಸಿ ಗಡಿಯಾಚೆ ಹಣ ರವಾನೆ; ಯುಪಿಐ ಮೌಲ್ಯಮಾಪನಕ್ಕೆ ಒಪ್ಪಿದ ಯುಪಿಯು

    ನವದೆಹಲಿ: ಜಾಗತಿಕ ಪೋಸ್ಟಲ್ ನೆಟ್​ವರ್ಕ್ ಬಳಸಿ ಗಡಿಯಾಚೆ ಹಣ ರವಾನೆ ಮಾಡುವ ಸಂಬಂಧ ಯುಪಿಐ ಮೌಲ್ಯಮಾಪನಕ್ಕೆ ಯುನಿವರ್ಸಲ್ ಪೋಸ್ಟಲ್ ಯೂನಿಯನ್ (ಯುಪಿಯು) ಒಪ್ಪಿಗೆ ಸೂಚಿಸಿದೆ.

    ಯುನಿವರ್ಸಲ್ ಪೋಸ್ಟಲ್ ಯೂನಿಯನ್ ಡೈರೆಕ್ಟರ್ ಜನರಲ್ (ಡಿಜಿ ಯುಪಿಯು) ಮಸಾಹಿಕೊ ಮೆಟೋಕಿ ಅವರು ಇಂದು ನವದೆಹಲಿಯಲ್ಲಿ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ಭೇಟಿಯಾದ ಸಂದರ್ಭದಲ್ಲಿ ಈ ಮಹತ್ವದ ಮಾತುಕತೆ ನಡೆದಿದೆ. ಯುಪಿಯು ಪ್ರಾದೇಶಿಕ ಕಚೇರಿ ಉದ್ಘಾಟನೆಗೆ ಆಗಮಿಸಿರುವ ಮೆಟೋಕಿ ಮೂರು ದಿನಗಳ ಕಾಲ ಭಾರತದಲ್ಲಿ ಇರಲಿದ್ದಾರೆ.

    ಇದನ್ನೂ ಓದಿ: ಚಿಕಿತ್ಸೆಗೆಂದು ದಾಖಲಾಗಿದ್ದ ಡಾಕ್ಟರ್​ ಬೆಳಗಾಗುವಷ್ಟರಲ್ಲಿ ಇಲ್ಲ!; ಪತ್ನಿಗೆ ಶವ ಸಿಗುವವರೆಗೂ ಆಸ್ಪತ್ರೆಯವರಿಗೆ ವಿಷ್ಯ ಗೊತ್ತಾಗ್ಲಿಲ್ಲ!

    ಅಂಚೆ ಕಛೇರಿಗಳನ್ನು ಡಿಜಿಟಲ್ ಚಾಲಿತ ನೆಟ್‌ವರ್ಕ್ ಆಗಿ ಪರಿವರ್ತಿಸುವ ಕುರಿತು ಅಶ್ವಿನಿ ವೈಷ್ಣವ್ ಮಾಹಿತಿ ಹಂಚಿಕೊಂಡರು. ಇದು ದೂರದ ಪ್ರದೇಶಗಳಲ್ಲಿ ಸರ್ಕಾರಿ ಸೇವೆಗಳನ್ನು ಮನೆ ಬಾಗಿಲಿಗೆ ತಲುಪಿಸುವ ಸಾಮರ್ಥ್ಯ ಹೊಂದಿದೆ. ಭಾರತದಲ್ಲಿನ ಅಂಚೆ ಕಚೇರಿಗಳು ಯುಪಿಐ ಮತ್ತು ಐಪಿಪಿಬಿ ಮೂಲಕ ಹಣಕಾಸಿನ ಸೇರ್ಪಡೆಗೆ ಯಶಸ್ವಿ ಮಾದರಿಯಾಗಿದೆ ಎಂದೂ ಹೇಳಿದರು.

    ಇದನ್ನೂ ಓದಿ: ಯಾವುದೇ ಕಾರಣಕ್ಕೂ ಹನುಮ ಜಯಂತಿ ನಿಲ್ಲಬಾರದು; ಮುಂದಿನ ಸಲ ಇನ್ನೂ ಅದ್ಧೂರಿ ಆಗಿರಬೇಕು: ಚಕ್ರವರ್ತಿ ಸೂಲಿಬೆಲೆ

    ಡಿಜಿಟಲ್ ಮೂಲಸೌಕರ್ಯದ ಅಲೆಗಳ ಮೇಲೆ ನಡೆಯುವ ಭಾರತದ ಭೌತಿಕ ಅಂಚೆ ಕಚೇರಿಗಳ ವಿಸ್ತರಣೆಯನ್ನು ಮೆಟೋಕಿ ಶ್ಲಾಘಿಸಿದ್ದಲ್ಲದೆ, ಇತರ ದೇಶಗಳಲ್ಲಿ ಇದೇ ಮಾದರಿಗಳ ಪ್ರತಿರೂಪವನ್ನು ಪ್ರತಿಪಾದಿಸಿದರು. ಜೊತೆಗೆ ಪೋಸ್ಟಲ್ ಚಾನೆಲ್‌ಗಳ ಮೂಲಕ ಗಡಿಯಾಚೆಗಿನ ಹಣ ರವಾನೆಯೊಂದಿಗೆ ಯುಪಿಐ ಪ್ಲಾಟ್‌ಫಾರ್ಮ್ ಸಂಯೋಜಿಸಲು ಮೌಲ್ಯಮಾಪನಕ್ಕಾಗಿ ಒಪ್ಪಿಕೊಂಡರು.

    ಮಕ್ಕಳನ್ನು ಡೌನ್​ಲೋಡ್ ಮಾಡಿಕೊಳ್ಳುವ ಕಾಲ ಬರಬಹುದಾ?; ಇದೇನಿದು ಅಪ್ಪ-ಅಮ್ಮ ಇಲ್ಲದೆ ಮಗು ಹುಟ್ಟಿಸೋ ಪ್ರಯತ್ನ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts