More

    ನೀರವ್ ಮೋದಿಯನ್ನು ಭಾರತಕ್ಕೆ ಹಸ್ತಾಂತರಿಸಲು ಒಪ್ಪಿಗೆ ಸೂಚಿಸಿದ ಇಂಗ್ಲೆಂಡ್ ಸರ್ಕಾರ

    ಲಂಡನ್: ಪಂಜಾಬ್ ನ್ಯಾಷನಲ್ ಬ್ಯಾಂಕ್​ಗೆ 14 ಸಾವಿರ ಕೋಟಿ ರೂಪಾಯಿ ವಂಚಿಸಿ ಇಂಗ್ಲೆಂಡ್​ಗೆ (ಯುಕೆ) ಪರಾರಿಯಾಗಿರುವ ಉದ್ಯಮಿ ನೀರವ್ ಮೋದಿಯನ್ನು ಭಾರತಕ್ಕೆ ಹಸ್ತಾಂತರಿಸಲು ಯುಕೆ ಸರ್ಕಾರ ಹಸಿರು ನಿಶಾನೆ ತೋರಿಸಿದೆ.

    ನೀರವ್ ಮೋದಿಯನ್ನು ಭಾರತಕ್ಕೆ ಹಸ್ತಾಂತರಿಸಬೇಕು ಎನ್ನುವ ಕಡತಕ್ಕೆ ಯುಕೆ ಸರ್ಕಾರದ ಗೃಹ ಕಾರ್ಯದರ್ಶಿ ಪ್ರೀತಿ ಪಟೇಲ್ ಅವರು ಶುಕ್ರವಾರ ಸಹಿ ಮಾಡಿದ್ದಾರೆ ಎಂದು ಎಎನ್​ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

    ಇದನ್ನೂ ಓದಿ: ಎರಡು ಷರ್ಟ್​ ಕದ್ದಿದ್ದಕ್ಕೆ 20 ವರ್ಷ ಜೈಲುವಾಸ! ಬಿಡುಗಡೆಯಾಗುವಷ್ಟರಲ್ಲೇ ಮೃತ್ಯುಕೂಪವಾಗಿದ್ದ ಮನೆ…

    ಕಳೆದ ತಿಂಗಳು ಲಂಡನ್​ನ ವೆಸ್ಟ ಮಿನಿಸ್ಟರ್ ಕೋರ್ಟ್​ ನೀರವ್ ಮೋದಿಯ ಅರ್ಜಿಯನ್ನು ವಜಾಗೊಳಿಸಿತ್ತು. ಕೋವಿಡ್ ಇರುವ ಈ ಪರಿಸ್ಥಿತಿಯಲ್ಲಿ ಕೆಟ್ಟದಾಗಿರುವ ಭಾರತದ ಜೈಲುಗಳಿಗೆ ತನ್ನನ್ನು ಕಳಿಸಬಾರದು ಎಂದು ನೀರವ್ ಮೋದಿ ಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ಕೋರ್ಟ್ ಈ ಬಗ್ಗೆ ನಿರ್ಧಾರ ಕೈಗೊಳ್ಳಲು ಗೃಹ ಸಚಿವಾಲಯಕ್ಕೆ ಸೂಚಿಸಿತ್ತು.

    ಗೃಹ ಸಚಿವಾಲಯ ನೀರವ್ ಮೋದಿಯನ್ನು ಭಾರತಕ್ಕೆ ಹಸ್ತಾಂತರಿಸಲು ಒಪ್ಪಿಗೆ ಸೂಚಿಸಿದೆಯಾದರೂ ಕೋರ್ಟ್​ಗೆ ಮೇಲ್ಮನವಿ ಸಲ್ಲಿಸಲು ನೀರವ್ ಮೋದಿಗೆ ಅವಕಾಶ ನೀಡಲಾಗಿದೆ. ಭಾರತದ ಬ್ಯಾಂಕುಗಳಿಗೆ ಸುಮಾರು 14 ಸಾವಿರ ಕೋಟಿ ರೂಪಾಯಿ ವಂಚಿಸಿ ವಿದೇಶಕ್ಕೆ ಪರಾರಿಯಾಗಿದ್ದ ನೀರವ್ ಮೋದಿಯನ್ನು ಲಂಡನ್​ನಲ್ಲಿ 2019 ರಲ್ಲಿ ಸಿಬಿಐ ಬಂಧಿಸಿತ್ತು. ಭಾರತಕ್ಕೆ ಹಸ್ತಾಂತರಿಸುವ ಕುರಿತು ಯುಕೆ ಸರ್ಕಾರಕ್ಕೆ ಸಿಬಿಐ ಮನವಿ ಸಲ್ಲಿಸಿತ್ತು.

    ಕಲ್ಲಿನಿಂದ ಹೊಡೆದು ಸಾರಿಗೆ ಬಸ್​ ಚಾಲಕನ ಪ್ರಾಣ ತೆಗೆದ ಕಿಡಿಗೇಡಿಗಳು! ಮುಷ್ಕರ ಬಿಟ್ಟು ಕೆಲಸಕ್ಕೆ ಬಂದಿದ್ದಕ್ಕೆ ಶಿಕ್ಷೆ?

    ಈ ವರ್ಷದ ಮುಂಗಾರು ಮಳೆ ಭವಿಷ್ಯವೇನು? ಇಲ್ಲಿದೆ ಮಾಹಿತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts