More

    ಕಡೆಗೂ ಭಾರತಕ್ಕೆ ಬರುತ್ತಿರುವ ನೀರವ್​ ಮೋದಿ; ಇಂಗ್ಲೆಂಡ್​ನ​ ಕೋರ್ಟ್​ ಕೊಟ್ಟಿತು ಹಸ್ತಾಂತರ ಆದೇಶ!

    ನವದೆಹಲಿ: ಪಂಜಾಬ್​ ನ್ಯಾಷನಲ್​ ಬ್ಯಾಂಕ್​ನಿಂದ (ಪಿಎನ್​ಬಿ) ಸಾವಿರಾರು ಕೊಟಿ ರೂ. ಸಾಲ ಪಡೆದು ಇಂಗ್ಲೆಂಡ್​ಗೆ ಹಾರಿದ್ದ ನೀರವ್​ ಮೋದಿ ಕಡೆಗೂ ಭಾರತಕ್ಕೆ ಮರಳಲಿದ್ದಾರೆ.

    51 ವರ್ಷದ ನೀರವ್ ಮೋದಿ 2018ರಲ್ಲಿ ಭಾರತ ಬಿಟ್ಟು ಇಂಗ್ಲೆಂಡ್ ತಲುಪಿದ್ದರು. ವಜ್ರ ವ್ಯಾಪಾರಿ ಆಗಿದ್ದ ಇವರು ಪಂಜಾಬ್​ ನ್ಯಾಷನಲ್​ ಬ್ಯಾಂಕ್​ನಿಂದ ಬರೊಬ್ಬರಿ ಹನ್ನೊಂದು ಸಾವಿರ ಕೋಟಿ ರೂ. ಸಾಲ ಪಡೆದಿದ್ದರು. ಸಾಲದ ಜೊತೆಗೆ ಬಡ್ಡಿಯೂ ಬೆಳೆದು ಈಗ ಹಣವನ್ನು ಪಿಎನ್​ಬಿಗೆ ಪಾವತಿಸಲಾಗದ ಸ್ಥಿತಿಗೆ ತಲುಪಿದ್ದಾರೆ.

    ಅವರನ್ನು ಭಾರತಕ್ಕೆ ಕರೆತರಲು ಸುಮಾರು 4 ವರ್ಷಗಳಿಂದ ಪ್ರಯತ್ನಿಸಲಾಗುತ್ತಿತ್ತು. ಅದರ ವಿರುದ್ಧವಾಗಿ ನೀರವ್ ಮೋದಿ ಇಂಗ್ಲೆಂಡ್​ನ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ನೀರವ್​ ಮೋದಿ, ತಮ್ಮ ಮಾನಸಿಕ ಸ್ಥಿತಿ ಮತ್ತು ಇಂಗ್ಲೆಂಡ್ ನ್ಯಾಯ ಸಂಹಿತೆಯ ಸೆಕ್ಷನ್ 91 ರ ‘ಅನ್ಯಾಯ ಅಥವಾ ದಬ್ಬಾಳಿಕೆಯಿಂದ ಯಾರನ್ನೂ ಹೊರ ಹಾಕುವಂತಿಲ್ಲ’ ಎನ್ನುವ ಕಾರಣ ಮುಂದಿಟ್ಟುಕೊಂಡು ತಮ್ಮನ್ನು ಹಸ್ತಾಂತರಿಸುವುದು ತಪ್ಪಾಗುತ್ತದೆ ಎಂದು ಇಂಗ್ಲೆಂಡ್​ ಹೈಕೋರ್ಟ್​ನಲ್ಲಿ ವಾದ ಮಂಡಿಸಿದ್ದರು.

    ಇದಕ್ಕೆ ಸಂಬಂಧಿಸಿದಂತೆ ಮೇಲ್ಮನವಿ ವಿಚಾರಣೆಯ ಅಧ್ಯಕ್ಷತೆ ವಹಿಸಿದ್ದ ಲಾರ್ಡ್ ಜಸ್ಟೀಸ್ ಜೆರೆಮಿ ಸ್ಟುವರ್ಟ್ ಸ್ಮಿತ್ ಮತ್ತು ನ್ಯಾಯಮೂರ್ತಿ ರಾಬರ್ಟ್ ಜೇ ನೀರವ್​ ಮೋದಿಯನ್ನು ಗಡಿಪಾರು ಮಾಡುವಂತೆ ತೀರ್ಪು ನೀಡಿದ್ದಾರೆ. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts