More

    ಪಿಎನ್​ಬಿ ಹಗರಣ : ನೀರವ್ ಮೋದಿಯನ್ನು ಭಾರತಕ್ಕೆ ಒಪ್ಪಿಸಲು ಇಂಗ್ಲೆಂಡ್ ಕೋರ್ಟ್ ಅನುಮತಿ

    ಲಂಡನ್: ಹದಿನಾಲ್ಕು ಸಾವಿರ ಕೋಟಿ ಪಂಜಾಬ್ ನಾಷನಲ್ ಬ್ಯಾಂಕ್(ಪಿಎನ್​ಬಿ)​ ಹಗರಣದಲ್ಲಿ ವಾಂಟೆಡ್​ ಆಗಿರುವ ಡೈಮಂಟೈರ್ ನೀರವ್ ಮೋದಿಯನ್ನು ಭಾರತಕ್ಕೆ ಹಸ್ತಾಂತರಿಸಲು ಇಂಗ್ಲೆಂಡ್ ಕೋರ್ಟ್ ಇಂದು ಅನುಮತಿ ನೀಡಿದೆ. ನೀರವ್ ಮೋದಿಯನ್ನು ಭಾರತಕ್ಕೆ ಹಸ್ತಾಂತರಿಸಿದರೆ ಅವನಿಗೆ ನ್ಯಾಯ ಸಿಗುವುದಿಲ್ಲ ಎನ್ನುವುದಕ್ಕೆ ಯಾವುದೇ ಪುರಾವೆ ಇಲ್ಲ ಎಂಬ ಭಾರತ ಸರ್ಕಾರದ ವಾದವನ್ನು ಒಪ್ಪಿದ ಲಂಡನ್ ಮ್ಯಾಜಿಸ್ಟ್ರೇಟ್ ಸಾಮ್ಯುಯಲ್ ಗೂಜೀ ಈ ತೀರ್ಪು ನೀಡಿದ್ದಾರೆ.

    ಭಾರತದಿಂದ ಇಂಗ್ಲೆಂಡಿಗೆ ಪರಾರಿಯಾಗಿದ್ದ ನೀರವ್ ವಿರುದ್ಧ ಪಿಎನ್​ಬಿ ಬ್ಯಾಂಕ್ ಹಗರಣಕ್ಕೆ ಸಂಬಂಧಿಸಿದಂತೆ ಎರಡು ಮುಖ್ಯ ಅಪರಾಧಿಕ ಪ್ರಕರಣಗಳಿವೆ. ಮೊದಲನೆಯದಾಗಿ, ಕಾನೂನುಬಾಹಿರ ಸಾಲ ಪತ್ರಗಳು ಮತ್ತು ಲೆಟರ್ಸ್​ ಆಫ್ ಅಂಡರ್​ಟೇಕಿಂಗ್​ಅನ್ನು ಪಡೆದು ಪಿಎನ್​ಬಿಗೆ ಭಾರೀ ಮೊತ್ತದ ವಂಚನೆ ಮಾಡಿರುವುದನ್ನು ತನಿಖೆ ನಡೆಸಿರುವ ಸಿಬಿಐ ಕೇಸು. ಇದರಲ್ಲಿ ನೀರವ್ ಮೋದಿ ತನ್ನ ಡೈಮಂಡ್ ಆರ್ ಅಸ್, ಸೋಲಾರ್ ಎಕ್ಸ್​ಪೋರ್ಟ್ಸ್ ಅಂಡ್ ಸ್ಟೆಲ್ಲಾರ್ ಡೈಮಂಡ್ಸ್​ ಕಂಪೆನಿಗಳ ಮೂಲಕ ಬ್ಯಾಂಕ್ ಜೊತೆ ಮೋಸದ ವ್ಯವಹಾರಗಳನ್ನು ನಡೆಸಿದ್ದ ಎಂದು ಆರೋಪವಿದೆ. ಎರಡನೆಯದಾಗಿ ಈ ರೀತಿಯಾಗಿ ಪಡೆದ ಹಣವನ್ನು ಲಾಂಡರಿಂಗ್ ಮಾಡಿದ ಬಗ್ಗೆ ಇಡಿ ಸಲ್ಲಿಸಿರುವ ಕೇಸು. ಜೊತೆಗೆ, ಸಾಕ್ಷ್ಯಧಾರಗಳನ್ನು ಹಾಳುಮಾಡಿದ, ಸಾಕ್ಷಿಗಳನ್ನು ಬೆದರಿಸಿದ ಆರೋಪಗಳಿವೆ.

    ಇದನ್ನೂ ಓದಿ: ನೀರವ್​ ಮೋದಿ ದುಬೈಗೆ ಸಾಗಿಸಿದ್ದ 1350 ಕೋಟಿ ರೂ.ಮೌಲ್ಯದ ವಜ್ರ, ಮುತ್ತುಗಳನ್ನು ವಾಪಸ್​ ತಂದ ಇ.ಡಿ.

    2019 ರ ಮಾರ್ಚ್ 19 ರಂದು ನೀರವ್​​ರನ್ನು ಎಕ್ಸ್​ಡ್ರಾಡಿಷನ್ ವಾರೆಂಟ್​ನ ಮೇರೆಗೆ ಲಂಡನ್​ನಲ್ಲಿ ಬಂಧಿಸಲಾಗಿತ್ತು. ಆತನ ಜಾಮೀನು ಪಡೆಯುವ ಪ್ರಯತ್ನಗಳು ಈವರೆಗೆ ವಿಫಲವಾಗಿದ್ದವು. ನೀರವ್​ನನ್ನು ಭಾರತಕ್ಕೆ ಹಸ್ತಾಂತರಿಸಲು ಕೋರಿ ಭಾರತ ಸರ್ಕಾರ ಸಲ್ಲಿಸಿದ ಅರ್ಜಿಯ ವಿಚಾರಣೆಯು ಲಂಡನ್ ವೆಸ್ಟ್​ಮಿನಿಸ್ಟರ್ ಮಾಜಿಸ್ಟ್ರೇಟ್ಸ್ ಕೋರ್ಟ್​ನಲ್ಲಿ ನಡೆದಿತ್ತು. ವಾಂಡ್ಸ್​ವರ್ತ್​ ಜೈಲಿನಿಂದ ವೀಡಿಯೋ ಕಾನ್ಫರೆನ್ಸ್ ಮೂಲಕ 49 ವರ್ಷದ ನೀರವ್ ವಿಚಾರಣೆಯಲ್ಲಿ ಭಾಗವಹಿಸಿದ್ದರು.

    ಕರೊನಾ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ತನ್ನ ಮಾನಸಿಕ ಆರೋಗ್ಯ ಹದಗೆಟ್ಟಿದೆ ಮತ್ತು ಭಾರತದ ಜೈಲುಗಳ ಸ್ಥಿತಿ ಮಾನವ ಹಕ್ಕುಗಳ ಉಲ್ಲಂಘನೆಯಾಗುವ ರೀತಿಯಲ್ಲಿದೆ ಎಂಬ ನೀರವ್ ಪರ ವಾದಗಳನ್ನು ಇಂಗ್ಲೆಂಡ್ ನ್ಯಾಯಾಧೀಶರು ತಳ್ಳಿಹಾಕಿದ್ದಾರೆ. “ನೀರವ್ ಮೋದಿಯವರನ್ನು ಭಾರತಕ್ಕೆ ಹಸ್ತಾಂತರಿಸುವುದು ಮಾನವ ಹಕ್ಕುಗಳಿಗೆ ಅನುಸಾರವಾಗಿದೆ ಎಂದು ನನಗೆ ತೃಪ್ತಿ ಇದೆ” ಎಂದು ಹೇಳಿದ್ದಾರೆ.

    ಇದನ್ನೂ ಓದಿ: ಮರ್ಸಿಡಿಸ್​ಗೆ ಸನ್ನಿ ಲಿಯೋನ್​ ಪತಿಯ ಕಾರಿನ ನಂಬರ್​ ಅಳವಡಿಸಿ ಅಲೆದಾಡುತ್ತಿದ್ದವ ಅಂದರ್​!

    “ನೀರವ್ ಮೋದಿ ವಿರುದ್ಧ ಭಾರತದಲ್ಲಿ ಪ್ರಬಲವಾದ ಕೇಸು ಇದೆ. ಭಾರೀ ಮೊತ್ತದ ಮರುಪಾವತಿ ಮಾಡದ ಸಾಲಗಳನ್ನು ಕ್ಲಿಯರ್ ಮಾಡಿದ ಲೆಟರ್ಸ್​ ಆಫ್ ಅಂಡರ್​ಟೇಕಿಂಗ್​ ನೀಡಿದ ಬ್ಯಾಂಕ್​ ಅಧಿಕಾರಿಗಳು ಮತ್ತು ಇತರ ಸಂಚುಕೋರರೊಂದಿಗೆ ನೀರವ್ ಮೋದಿಗೆ ಲಿಂಕ್ ಇರುವುದು ಸ್ಪಷ್ಟವಾಗಿದೆ” ಎಂದು ನ್ಯಾಯಾಧೀಶರು ಅಭಿಪ್ರಾಯಪಟ್ಟಿದ್ದಾರೆ. ಪ್ರೈಮಾ ಫೇಸಿ ಮನಿ ಲಾಂಡರಿಂಗ್ ಕೇಸ್ ಇರುವುದು ಸ್ಪಷ್ಟವಾಗಿದೆ. ಭಾರತದಿಂದ ಈ ಬಗ್ಗೆ 16 ವಾಲ್ಯುಮ್​ಗಳ ಸಾಕ್ಷ್ಯಾಧಾರಗಳನ್ನು ಪಡೆದಿದ್ದೇವೆ. ಆತನಿಗೆ ಶಿಕ್ಷೆಯಾಗುವ ಪುರಾವೆಗಳಿವೆ ಎಂದೂ ನ್ಯಾಯಾಧೀಶರು ಹೇಳಿದ್ದಾರೆ.

    ಮ್ಯಾಜಿಸ್ಟ್ರೇಟ್​ ಕೋರ್ಟ್​ನ ಇಂದಿನ ಆದೇಶವನ್ನು ಇಂಗ್ಲೆಂಡ್ ಗೃಹ ಕಾರ್ಯದರ್ಶಿ ಪ್ರೀತಿ ಪಟೇಲ್ ಅವರ ಸಹಿಗಾಗಿ ಕಳುಹಿಸಲಾಗುವುದು. ಆದಾಗ್ಯೂ ಈ ಆದೇಶದ ವಿರುದ್ಧ ನೀರವ್ ಮೋದಿಗೆ ಇಂಗ್ಲೆಂಡಿನ ಹೈಕೋರ್ಟ್​ನಲ್ಲಿ ಮೇಲ್ಮನವಿ ಸಲ್ಲಿಸಲು ಅವಕಾಶವಿದೆ.(ಏಜೆನ್ಸೀಸ್)

    ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

    ಮಾರ್ಚ್​ 1 ರಿಂದ 60 ವರ್ಷ ಮೇಲ್ಪಟ್ಟವರಿಗೆ, ಆಯ್ದ 45 ಮೇಲ್ಪಟ್ಟವರಿಗೆ ಕರೊನಾ ಲಸಿಕೆ ಲಭ್ಯ

    “ಕಾರು, ಬೈಕಿನಂತೆ ಹೆಂಡತಿಯನ್ನೂ ನಿಮ್ಮ ಆಸ್ತಿ ಎಂದು ತಿಳಿಯಬೇಡಿ” : ಗಂಡಸರಿಗೆ ಹೈಕೋರ್ಟ್ ಕಿವಿಮಾತು

    ಆಟದ ಮಧ್ಯೆ ಮೈದಾನದ ಒಳನುಗ್ಗಿದ ಅಭಿಮಾನಿ! ವಿರಾಟ್ ಕೊಹ್ಲಿ ಪ್ರತಿಕ್ರಿಯೆ ಹೇಗಿತ್ತು ನೋಡಿ…

     

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts