More

    ಕಲ್ಲಿನಿಂದ ಹೊಡೆದು ಸಾರಿಗೆ ಬಸ್​ ಚಾಲಕನ ಪ್ರಾಣ ತೆಗೆದ ಕಿಡಿಗೇಡಿಗಳು! ಮುಷ್ಕರ ಬಿಟ್ಟು ಕೆಲಸಕ್ಕೆ ಬಂದಿದ್ದಕ್ಕೆ ಶಿಕ್ಷೆ?

    ಬಾಗಲಕೋಟೆ: ಸಾರಿಗೆ ನೌಕರರ ಮುಷ್ಕರದ ನಡುವೆಯೂ ಬಸ್​ ಚಾಲನೆ ಮಾಡುತ್ತಿದ್ದ ಚಾಲಕನಿಗೆ ಕಿಡಿಗೇಡಿಗಳು ಮನಸೋಇಚ್ಛೆ ಕಲ್ಲು ಬೀಸಿದ್ದು, ಚಾಲಕ ಮೃತಪಟ್ಟ ಘಟನೆ ಜಮಖಂಡಿಯಲ್ಲಿ ಸಂಭವಿಸಿದೆ.

    ಜಮಖಂಡಿ ಸಾರಿಗೆ ಘಟಕದ ಬಸ್​ ಚಾಲಕ ಎನ್.ಕೆ. ಅವಟಿ (55) ಮೃತ ದುರ್ದೈವಿ. ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ರಾಜ್ಯಾದ್ಯಂತ ಸಾರಿಗೆ ನೌಕರರು ಬೀದಿಗಿಳಿಸುದು ಪ್ರತಿಭಟನೆ ನಡೆಸುತ್ತಿದ್ದಾರೆ. ಸಾರಿಗೆ ಬಸ್​ ಸಂಚಾರ ಸ್ಥಗಿತಗೊಂಡು ಪ್ರಯಾಣಿಕರು ಪರದಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮೇಲಧಿಕಾರಿಗಳ ಸೂಚನೆಯಂತೆ ಎನ್.ಕೆ. ಅವಟಿ ಕೆಲಸಕ್ಕೆ ಹಾಜರಾಗಿದ್ದರು.

    ಶುಕ್ರವಾರ ವಿಜಯಪುರದಿಂದ ಜಮಖಂಡಿ ನಗರಕ್ಕೆ ಬಸ್ ಚಲಾಯಿಸಿಕೊಂಡು ಎನ್.ಕೆ. ಅವಟಿ ಬರುತ್ತಿದ್ದರು. ಜಮಖಂಡಿಯ ಕವಟಗಿ ಪುನರ್ವಸತಿ ಕೇಂದ್ರದ ಬಳಿ ಬಸ್​ ಅನ್ನು ಅಡ್ಡಗಟ್ಟಿದ ಕಿಡಿಗೇಡಿಗಳು ಬಸ್​ನತ್ತ ಕಲ್ಲು ತೂರಿದ್ದಾರೆ. ಬಸ್​ ಮುಂಭಾಗದ ಕಲ್ಲುಗಳು ಗಾಜನ್ನು ಒಡೆದುಕೊಂಡು ಒಳ ತೂರಿ ಚಾಲಕನ ಮೇಲೆ ಬಿದ್ದಿದೆ. ಕಲ್ಲಿನೇಟಿಗೆ ಚಾಲಕ ಸ್ಥಿತಿ ಗಂಭೀರವಾಗಿತ್ತು. ಕುತ್ತಿಗೆಗೆ ಕಲ್ಲು ಬೀಳುತ್ತಿದ್ದಂತೆ ತಕ್ಷಣವೇ ವಾಹನ ನಿಲ್ಲಿಸಿದ ಚಾಲಕ ಅರೆ ಪ್ರಜ್ಞಾವಸ್ಥೆಗೆ ತಲುಪಿದ್ದರು. ದಿಢೀರ್​ ಘಟನೆಯಿಂದ ಪ್ರಯಾಣಿಕರು ಗಾಬರಿಗೊಂಡರು.

    ಕೂಡಲೇ ಚಾಲಕನನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಿಸದೆ ಮೃತಪಟ್ಟರು. ಕರ್ತವ್ಯಕ್ಕೆ ಹಾಜರಾಗಿ ಸಾವಿಗೀಡಾದ ಚಾಲಕನ ಬಗ್ಗೆ ಪ್ರಯಾಣಿಕರು ಮರುಕ ವ್ಯಕ್ತಪಡಿಸಿದರು. ಮೃತನ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.

    ಅಪ್ರಾಪ್ತರ ಲವ್​ ಕೇಸ್​: ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷನಿಂದ ಬಿತ್ತು ಬಾಲಕನ ಹೆಣ, ಊರಲ್ಲಿ ಪ್ರಕ್ಷುಬ್ಧ ವಾತಾವರಣ

    ಕಾಡ್ಗಿಚ್ಚಿನಲ್ಲಿ ಸುಟ್ಟುಕರಕಲಾಗಿದ್ದ ವ್ಯಕ್ತಿ ಪ್ರಕರಣ: ಬ್ಯಾನರ್​ ಕೊಟ್ಟ ಸುಳಿವಿಂದ ಬಯಲಾಯ್ತು ನಿಗೂಢ ರಹಸ್ಯ

    ಗಂಡನ ಬಿಟ್ಟು ಅತ್ತೆಮಗನ ಜತೆ ಬಂದವಳ ಬದುಕಲ್ಲಿ ದುರಂತ! ಪ್ರಿಯಕರನಿಂದಲೇ ನಡೆಯಿತು ಘೋರ ಕೃತ್ಯ

    ಹಿರಿಯ ನಟ ದ್ವಾರಕೀಶ್ ಪತ್ನಿ ಅಂಬುಜಾ​ ನಿಧನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts